ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಾಂಸ್ಕೃತಿಕ ಅಭಿವ್ಯಕ್ತಿಯಿಂದ ಅರಳುವ ಮಕ್ಕಳ ಮನಸ್ಸು

Srinivasa Murthy VN
Updated On : 21 May 2013, 10:33 am

ಕ.ಪ್ರ.ವಾರ್ತೆ ತುಮಕೂರು ಮೇ 21
ಜನಪದರ ಮೂಲದ್ರವ್ಯ ಸಾಂಸ್ಕೃತಿಕ ಅಭಿವ್ಯಕ್ತಿ. ತಮ್ಮೊಳಗಿನ ಪ್ರತಿಭೆಗಳು ತಾವಾಗಿಯೇ ಅನಾವರಣಗೊಂಡಾಗ ಸಿಗುವ ಆನಂದ ಎಲ್ಲೆ ಮೀರಿದ್ದು. ಇದು ಹುಟ್ಟಿನಾರಂಭದಿಂದ ಮೊಳೆತು, ಚಿಗುರಿ ಸಾಂಸ್ಕೃತಿಕವಾಗಿ ಅಭಿವ್ಯಕ್ತಿಗೊಂಡಾಗ ಎಂತಹವರ ಮನಸ್ಸುಗಳೂ ಅರಳುತ್ತವೆ. ಹಾಗೆಯೇ ಅದನ್ನು ಮಕ್ಕಳ ವಯಸ್ಸಿಗನುಗುಣವಾಗಿ ಪ್ರೋತ್ಸಾಹಿಸುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ರಂಗಕರ್ಮಿ ಎಚ್.ಎಂ. ರಂಗಯ್ಯ ಅಭಿಪ್ರಾಯಪಟ್ಟರು. ಶ್ರೀ ರಂಗರಂಗ ಹವ್ಯಾಸಿ ಕಲಾವೃಂದವು ಶಿರಾ ತಾಲೂಕಿನ ಕರೆಮಾದೇನಹಳ್ಳಿಯ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಮಕ್ಕಳ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹೊಸ ಅನುಭವ: ಶ್ರೀ ರಂಗರಂಗ ಕಳೆದ 27 ವರ್ಷಗಳಿಂದ  ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ಮಕ್ಕಳಿಗೆ ರಂಗ ತರಬೇತಿ ನೀಡುವುದು ಹೊಸ-ಹೊಸ ಅನುಭವಗಳನ್ನು  ನೀಡುತ್ತದೆ. ಮಕ್ಕಳ ಜೊತೆಯಲ್ಲಿ ನಾವೂ ಮಕ್ಕಳಾಗಿ ಅಭಿನಯಿಸಿದಾಗ ಮಾತ್ರ ಕಲಿಕೆಗೆ ಅವಕಾಶವಾಗುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜು ಮಾತನಾಡಿ ಯಾವುದೇ ಮೂಲಭೂತ ಸೌಕರ್ಯವಿಲ್ಲದ ಇಂತಹ ಕುಗ್ರಾಮಕ್ಕೆ ಬಂದು 50 ಜನ ಮಕ್ಕಳೊಂದಿಗೆ  ಮಕ್ಕಳಾಗಿ ಹೊಂದಿಕೊಂಡು ಹಾಡುತ್ತಾ, ನೃತ್ಯ, ನಾಟಕ ಸೇರಿ ನಾಟಕ, ಸಂಗೀತ,  ನೃತ್ಯ ಸಂಗಮವಾಗಿ ತರಬೇತಿ ನೀಡಲು ಆಶಿಸಿರುವ ಶ್ರೀ ರಂಗರಂಗ ನಿಜಕ್ಕೂ ಅಭಿನಂದನಾರ್ಹ. ಇಂತಹ ಭಾಗ್ಯ ಈವರೆಗೂ ಈ ಭಾಗದ ಮಕ್ಕಳಿಗೆ ದೊರೆಯದಿರುವುದು ವಿಷಾದನೀಯ ಎಂದರು. ಶಿಬಿರದ ಸಂಚಾಲಕ ಎಚ್.ಎನ್. ಮಂಜುನಾಥ್ ಮಾತನಾಡಿ ನನ್ನಲ್ಲಿ ಸಾಂಸ್ಕೃತಿಕ ಮನಸ್ಸೊಂದು
ತುಡಿಯುತ್ತಿತ್ತು. ಶ್ರೀ ರಂಗರಂಗದಿಂದ ಇಂತಹ ಅವಕಾಶ ದೊರಕಿರುವುದು ನಮ್ಮ ಶಾಲೆ ಮತ್ತು ಮಕ್ಕಳ ಅದೃಷ್ಟ. ಎಷ್ಟೇ ಕಷ್ಷವಾದರೂ ಶಿಬಿರವನ್ನು ನಡೆಸಿ ಪ್ರತಿಭೆಗಳನ್ನು ಗುರುತಿಸುವ ಜವಾಬ್ದಾರಿ ನಮ್ಮದಾಗಲಿ ಎಂದು ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement