ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ವಾಭಿಮಾನದ ಬದುಕು ಸಾಗಿಸಿ: ಶಾಸಕ ರಾಜಣ್ಣ

Srinivasa Murthy VN
Updated On : 22 Nov 2013, 12:22 pm

ಮಧುಗಿರಿ: ವಿಕಲಚೇತನರು ಕೀಳರಿಮೆ ಬಿಟ್ಟು ಸ್ವಾಭಿಮಾನದ ಬದುಕು ಸಾಗಿಸುವ ನಿಟ್ಟಿನಲ್ಲಿ ಸಮಾಜದ ಮುಖ್ಯವಾಹಿನಿ ಸೇರಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು.
ಪಟ್ಟಣದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಅಂಗವಿಕಲರ ಕಲ್ಯಾಣ ವೇದಿಕೆ ವತಿಯಿಂದ ಏರ್ಪಡಿಸಿದ್ದ 7 ಜೋಡಿ ಅಂಗವಿಕಲರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಸಿದ್ದರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಜೀವನದಲ್ಲಿ ಗೃಹಸ್ಥಾಶ್ರಮ ಶ್ರೇಷ್ಠ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ದೃಶ್ಯ ಮಾಧ್ಯಮಗಳ ಪ್ರಭಾವಕ್ಕೆ ಸಿಕ್ಕಿ ಪರಸ್ಪರ ಗಂಡ-ಹೆಂಡತಿ ಮಧ್ಯೆ ಸಣ್ಣ ಪುಟ್ಟ ಜಗಳ ಸಂಭವಿಸಿ ವಿಚ್ಛೇದನಗಳು ಹೆಚ್ಚುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ತುಮಕೂರು ಹೀರೆಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ತಗ್ಗಿಹಳ್ಳಿ ಶ್ರೀರಾಮಕೃಷ್ಣ ಆಶ್ರಮದ ರಮಾನಂದ ಚೈತನ್ಯ ಸ್ವಾಮೀಜಿ ನೂತನ ವಧು-ವರರಿಗೆ ಶುಭ ಕೋರಿ, ಪರಸ್ಪರ ಪುರುಷಾರ್ಥ ಅರ್ಥ ಮಾಡಿಕೊಂಡು ಬದುಕು ಸಾಗಿಸಬೇಕು ಎಂದರು.
ಎಲೆರಾಂಪುರ ಹನುಮಂತನಾಥ ಸ್ವಾಮೀಜಿ ಮಾತನಾಡಿದರು. ತಾಲೂಕು ಅಂಗವಿಕಲರ ಕಲ್ಯಾಣ ವೇದಿಕೆ ಅಧ್ಯಕ್ಷ ಎನ್. ಮಹಾದೇವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂಗವಿಕಲರ ರಾಜ್ಯ ಅಧಿನಿಯಮ ಆಯುಕ್ತ ಕೆ.ಎಸ್. ರಾಜಣ್ಣ, ಎಸಿ ತಬಸ್ಸುಮ್ ಜುಹೇರಾ, ತಹಸೀಲ್ದಾರ್ ಕೆ. ರಮೇಶ್, ಇಒ ಮಹಾಲಿಂಗಯ್ಯ, ಚಿತ್ರ ನಿರ್ಮಾಪಕ ಮುರುಳೀಧರ ಹಾಲಪ್ಪ, ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ಜುಬೇದಭಾನು, ತಾ.ಪಂ.ಅಧ್ಯಕ್ಷೆ ಯಶೋಧ, ಸಿದ್ದಗಂಗಾಬಿಕೆ, ಜಿ.ಪಂ. ಸದಸ್ಯ ಎಚ್. ಕೆಂಚಮಾರಯ್ಯ, ಮಂಜುಳಾ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪ್ರೊ. ಮಲನಮೂರ್ತಿ, ಕಸಾಪ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ, ಮುಖ್ಯಾಧಿಕಾರಿ ಶುಭಾ, ಪುರಸಭೆ ಸದಸ್ಯ ಎಂ.ಕೆ. ನಂಜುಂಡಯ್ಯ, ಎಂ.ಜಿ. ಶ್ರೀನಿವಾಸಮೂರ್ತಿ, ರಾಮಣ್ಣ, ಪಿ.ಸಿ.ಕೆ. ರೆಡ್ಡಿ, ಉಪಾಧ್ಯಕ್ಷ ಬಸವರಾಜು ಇದ್ದರು. ಉಪನ್ಯಾಸಕ ಅಂಜನಮೂರ್ತಿ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement