ನಾಳೆ ಶೈಕ್ಷಣಿಕ ಸಮಾವೇಶ
ತುಮಕೂರು: ಜಿಲ್ಲಾ ಮಟ್ಟದ ಎಸ್‌ಸಿ, ಎಸ್‌ಟಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ಬೃಹತ್ ಶೈಕ್ಷಣಿಕ ಸಮಾವೇಶವನ್ನು ನ.24ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಗ್ರಂಥಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ಜಿಲ್ಲಾ ಪ್ರವಾಸಿ ಮಂದಿರದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಕಲಾ ಮೇಳದೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಎಂಎಲ್‌ಸಿ ಡಾ. ಎಂ.ಆರ್. ಹುಲಿನಾಯ್ಕರ್ ಉದ್ಘಾಟಿಸಲಿದ್ದಾರೆ. ಸಮಾರಂಭವನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಅಂಬೇಡ್ಕರ್ ಭಾವಚಿತ್ರ ಅನಾವರಣ ಮಾಡಿ, ಆಶಯ ನುಡಿಗಳನ್ನಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ. ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಡಿಸಿ, ಎಸ್ಪಿ, ಜಿಪಂ ಸಿಇಒ, ಎಎಸ್ಪಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಡಿಡಿಪಿಐ, ಡಯಟ್ ಪ್ರಿನ್ಸಿಪಾಲರು, ಪೌರಾಯುಕ್ತರು ಪಾಲ್ಗೊಳ್ಳಲಿದ್ದಾರೆ.
ನಾಳೆ ಗುರುತಿನ ಚೀಟಿ ವಿತರಣೆ
ರಾಜ್ಯ ಕಟ್ಟಡ, ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ(ಎಐಟಿಯುಸಿ) ವತಿಯಿಂದ ನ.24ರಂದು ಬೆಳಗ್ಗೆ 10 ಗಂಟೆಗೆ ತುಮಕೂರು ತಾಲೂಕು ಕುಪ್ಪೂರಿನಲ್ಲಿ ಬೆಳಗ್ಗೆ 10 ಗಂಟೆಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಮಾರಂಭವನ್ನು ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕುಪ್ಪೂರು ಗ್ರಾಪಂ ಸದಸ್ಯ ಅಪ್ಪಾಜಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಪಿಐ ರಾಜ್ಯ ಕಾರ್ಯದರ್ಶಿ ಎನ್. ಶಿವಣ್ಣ, ಕಾರ್ಮಿಕ ವೃತ್ತ ನಿರೀಕ್ಷಕರಾದ ನಾಗರಾಜು, ಸಿದ್ದಪ್ಪ, ಗಿರೀಶ್, ಗೌಡರಂಗಪ್ಪ, ಖಜಾಂಚಿ ಅಶ್ವತ್ಥ್ ನಾರಾಯಣ್ ಪಾಲ್ಗೊಳ್ಳಲಿದ್ದಾರೆ. ಗ್ರಾಪಂ ಸದಸ್ಯ ಹೊನ್ನಪ್ಪ, ಮಾಜಿ ಗ್ರಾಪಂ ಸದಸ್ಯರಾದ ರಾಮಣ್ಣ, ಚಂದ್ರಯ್ಯ, ಕೃಷ್ಣಪ್ಪ, ಗೋಪಣ್ಣ, ಹರಿಕಥೆ ದಾಸರಾದ ಶಂಕರಪ್ಪ, ರಂಗಶಾಮಯ್ಯ, ರಾಮಚಂದ್ರಯ್ಯ, ಶಂಕರ್, ಸಿಪಿಐ ನ. ಚಿನ್ನಪ್ಪ, ಉಮೇಶ್, ಚಂದ್ರಶೇಖರ್ ಪಾಲ್ಗೊಳ್ಳಲಿದ್ದಾರೆ.
ನಾಳೆ ಬೆಂಗಳೂರಿಗೆ ಕೆಜೆಪಿ ಬೈಕ್ ರ್ಯಾಲಿ
ಶಾದಿ ಭಾಗ್ಯ ಯೋಜನೆಯನ್ನು ಎಲ್ಲ ವರ್ಗಕ್ಕೆ ವಿಸ್ತರಿಸುವಂತೆ ಆಗ್ರಹಿಸಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಬೆಂಗಳೂರಿನಲ್ಲಿ ನಡೆಸುತ್ತಿರುವ ನಿರಶನ ಬೆಂಬಲಿಸಿ ನ.24ರಂದು ಜಿಲ್ಲಾ ಕೆಜೆಪಿ ವತಿಯಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ತುಮಕೂರಿನ ಸಪಪೂ ಕಾಲೇಜು ಮೈದಾನದಲ್ಲಿ ಜಿಲ್ಲೆಯ ಾಲೂಕುಗಳ ಕಾರ್ಯಕರ್ತರು ಬಂದು ಸೇರುವಂತೆ ಜಿಲ್ಲಾ ಕೆಜೆಪಿ ಅಧ್ಯಕ್ಷ ಹೆಬ್ಬಾಕ ರವಿ ಕೋರಿದ್ದಾರೆ.