ಬೋರ್ವೆಲ್ ಮಾಲೀಕರ ಸಂಘದಿಂದ ರೈತರಿಗೆ ಆಫರ್
ತುರುವೇಕೆರೆ: ಕಳೆದ ಎರಡು ಮೂರು ವರ್ಷಗಳಿಂದಲೂ ಬರದ ಬೇಗೆಯಲ್ಲಿ ಬೆಂಡಾಗಿದ್ದ ಹೋಗಿದ್ದ ರೈತರಿಗೆ ಈಗ ತಾಲೂಕು ಬೋರ್ವೆಲ್ ಮಾಲೀಕರು ನೆರವಿನ ಹಸ್ತ ಚಾಚಿದ್ದಾರೆ. ಮುಂದಿನ ದಿನಗಳಲ್ಲಿ ಬೋರ್ವೆಲ್ ಕೊರೆಸುವ ರೈತರಿಗೆ ವಿಶೇಷ ರಿಯಾಯಿತಿ ದರದಲ್ಲಿ ಬೋರ್ವೆಲ್ ಕೊರೆಸಲು ಪ್ರಕಟಣೆಯನ್ನೇ ಹೊರಡಿಸಿದ್ದಾರೆ. ರೈತರು ಬೋರ್ವೆಲ್ ಕೊರೆಸುವ ಸಂಧರ್ಭದಲ್ಲಿ ಕೇಸಿಂಗ್ ಎರಕ್ಷನ್ ಚಾರ್ಜ್ ಎಂದು ಪ್ರತಿ ಅಡಿಗೆ 50 ಮಾಡಲಾಗುತ್ತಿತ್ತು. ಅದನ್ನು ಮನ್ನಾ ಮಾಡಲು ಸಂಘ ತೀರ್ಮಾನಿಸಿದೆ ಎಂದು ಬೋರ್ವೆಲ್ ಮಾಲೀಕರ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನೂತನವಾಗಿ ಕೊರೆಸುವ ಬೋರ್ವೆಲ್ಗಳಿಗೆ ಹಲವಾರು ವಿಧದ ದರಪಟ್ಟಿಯನ್ನೂ ಸಹ ಬಿಡುಗಡೆ ಮಾಡಿದ್ದಾರೆ. 300 ಅಡಿವರೆಗೆ ಪ್ರತಿ ಅಡಿಗೆ 70, 400ರವರೆಗೆ ಪ್ರತಿ ಅಡಿಗೆ 75, 500 ಅಡಿವರೆಗೆ 80, 600 ರವರೆಗೆ 90 ಹೀಗೆ ವಿವಿಧ ದರಪಟ್ಟಿಯನ್ನು ನಮೂದಿಸಿದ್ದಾರೆ. ಜೊತೆಗೆ ಟ್ರಾನ್ಸ್ಪೋರ್ಟ್ ಚಾರ್ಜ್ ಸಹ ಉಚಿತ ಎಂದು ಪ್ರಕಟಿಸಿದ್ದಾರೆ. ವಿವರಕ್ಕೆ ಸಂಘದ ಪದಾಧಿಕಾರಿಗಳಾದ ಪಂಚಾಕ್ಷರಿ ಮೊ. 94484 47591, ನದೀಮ್- 94484 03180 ತಿಪಟೂರು ತಾಲೂಕಿನ ಶಂಕರೇಗೌಡ- 94813 54209 ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ- 94818 11765ಗೆ ಕರೆ ಮಾಡಲು ಸೂಚಿಸಿದ್ದಾರೆ.