ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕನಕ ಜಯಂತಿ ಆಚರಣೆ

Srinivasa Murthy VN
Updated On : 24 Nov 2013, 12:55 pm

ತಿಪಟೂರು: ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಲ್. ಮಲ್ಲಪ್ಪಚಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಸ್ಕಾಂ ಲೆಕ್ಕಾಧಿಕಾರಿ ವಿ.ಎಸ್.ಚಂದ್ರ, ನೌಕರ ಸಂಘದ ಕೇಂದ್ರ ಸಮಿತಿ ಸದಸ್ಯ ಲಿಂಗದೇವರು, ಸ್ಥಳೀಯ ಸಮಿತಿ ಅಧ್ಯಕ್ಷ ಬಿ.ಆರ್.ತೇಜಮೂರ್ತಿ, ಕಾರ್ಯದರ್ಶಿ ಎ.ಎಂ.ಮರಿಯಪ್ಪ, ಉಪಾಧ್ಯಕ್ಷ ಎನ್. ನರಸಿಂಹಮೂರ್ತಿ, ಸಹಾಯಕ ಎಂಜಿನಿಯರ್ ಗುರುಬಸವರಾಜಸ್ವಾಮಿ, ಬಸವರಾಜು, ಜೆ.ಆರ್.ಮಂಜುನಾಥ್ ಸೇರಿದಂತೆ ಬೆಸ್ಕಾಂನ ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಪದಾಧಿಕಾರಿಗಳ ಆಯ್ಕೆ
ತಿಪಟೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕು ಮಟ್ಟದಲ್ಲಿ ನಡೆಯಲಿರುವ ಕೃಷಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಪದಾಧಿಕಾರಿಗಳನ್ನು ನಿರ್ದೇಶಕ ಗಂಗಾಧರ್ ರೈ ಆಯ್ಕೆ ಮಾಡಿದರು.
ಅಧ್ಯಕ್ಷರಾಗಿ ಬಿ. ಶಿವಕುಮಾರಸ್ವಾಮಿ, ಉಪಾಧ್ಯಕ್ಷರಾಗಿ ಶಂಕರಪ್ಪ, ಎಚ್.ಎನ್. ರಾಮಣ್ಣ, ಶಶಿಧರ್, ಲಿಂಗರಾಜು, ಮಂಜುನಾಥ್, ಕಾರ್ಯದರ್ಶಿಯಾಗಿ ಎಸ್. ಶಿವಣ್ಣ, ಸಹ ಕಾರ್ಯದರ್ಶಿ ಬಿ.ಎಲ್. ವಸಂತಕುಮಾರ್, ಖಜಾಂಚಿಯಾಗಿ ಗೋವಿಂದಪ್ಪ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕ ಗಂಗಾಧರ್ ರೈ ಯೋಜನೆಯ ಕಾರ್ಯಕ್ರಮದ ಬಗ್ಗೆ ಹಾಗೂ ಕೃಷಿ ಉತ್ಸವದಲ್ಲಿ ವಿಚಾರಗೋಷ್ಠಿಗಳು, ಜಾನುವಾರು ಪ್ರದರ್ಶನ, ಮಳಿಗೆಗಳ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು. ಯೋಜನಾಧಿಕಾರಿ ಪಿ. ಶ್ರೀನಿವಾಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement