ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಂತು ಬಂತು... ಗಿರೇನಹಳ್ಳಿಗೆ ನೀರು ಬಂತು

Srinivasa Murthy VN
Updated On : 24 Nov 2013, 12:53 pm

ತುರುವೇಕೆರೆ: ಸಾರ್ ನಮ್ಮೂರಿಗೆ ಇವತ್ತು ನೀರು ಕೊಟ್ರು ಸಾರ್. ತುಂಬಾ ಥ್ಯಾಂಕ್ಸ್.
ಇದು ತಾಲೂಕಿನ ಗಡಿ ಭಾಗದಲ್ಲಿರುವ ಗಿರೇನಹಳ್ಳಿಯ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಜು ಹೃದಯಪೂರ್ವಕವಾಗಿ ಹೇಳಿದ ಮಾತು.
ಕಳೆದ ಏಳೆಂಟು ತಿಂಗಳಿಂದಲೂ ಕುಡಿಯಲೂ ನೀರಿಲ್ಲದೇ ಪರದಾಡುತ್ತಿದ್ದ ಗಿರೇನಹಳ್ಳಿಯ ಗ್ರಾಮಸ್ಥರಿಗೆ ಇಂದು ಸಂಭ್ರಮದ ದಿನವಾಗಿತ್ತು. ಶನಿವಾರ ಮಧ್ಯಾಹ್ನದ ವೇಳೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ನೂತನ ಟಿಸಿಯನ್ನು ಅಳವಡಿಸಿ ಗಿರೇನಹಳ್ಳಿ ಗ್ರಾಮಸ್ಥರಿಗೆ ಸಮೃಧ್ಧಿಯಾದ ಕುಡಿಯುವ ನೀರನ್ನು ಗ್ರಾಮ ಪಂಚಾಯ್ತಿಯಿಂದ ಒದಗಿಸಲಾಯಿತು. ನೀರು ಬಂತು ಎಂದೊಡನೇ ಗ್ರಾಮದ ಬಹುತೇಕ ಜನರು, ಪುಟಾಣಿ ಮಕ್ಕಳು ಕುಣಿದು ಕುಪ್ಪಳಿಸಿದರು.  ಕುಡಿಯಲು ಒಂದು ಕೊಡ ನೀರೂ ಸಹ ಸಿಗದೆ ಕಷ್ಟ ಪಡುತ್ತಿದ್ದ ಜನರಿಗೆ ಇಂದು ಮನಸ್ಪೂರ್ತಿ, ಮನೆ ಪೂರ್ತಿ ನೀರು ತುಂಬಿಸಿಕೊಳ್ಳುವ ಅವಕಾಶ ಇತ್ತು. ನೀರು ಬರುತ್ತಿದೆ ಎಂಬ ಸಂಗತಿ ತಿಳಿದೊಡನೆ ಸಂತಸಪಟ್ಟರು. ಕನ್ನಡಪ್ರ್ರಭದಲ್ಲಿ ಬಂದ ಕುಡಿಯೋಕೊಂದಿಷ್ಟು ನೀರು ಕೊಡ್ರಪ್ಪಾ...ಅನ್ನೋ ವಿಶೇಷ ವರದಿಯನ್ನು ಗಮನಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಕೂಡಲೇ ನೀರಿನ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದರು. ಸ್ಥಳಕ್ಕೆ ತಹಸೀಲ್ದಾರ್ ನಂಜಪ್ಪ, ಇ.ಓ ವಾಳ್ವೇಕರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನುಸೂಯಮ್ಮ, ಕಾರ್ಯದರ್ಶಿ ಆರಾಧ್ಯ ಮೊದಲಾದವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಶನಿವಾರ ಸಾಯಂಕಾಲದ ವೇಳೆಗೆ ನೀರನ್ನು ಬಿಟ್ಟು ಗ್ರಾಮಸ್ಥರ ಬಹು ತಿಂಗಳ ಸಮಸ್ಯೆಯನ್ನು ಬಗೆಹರಿಸಲಾಯಿತು. ಏಳೆಂಟು ತಿಂಗಳ ಸಮಸ್ಯೆಯನ್ನು ಕೇವಲ 4 ದಿನಗಳಲ್ಲಿ ಪರಿಹರಿಸಿದ ಕನ್ನಡಪ್ರಭಕ್ಕೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement