ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಖಾತ್ರಿ ಯೋಜನೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ'

Srinivasa Murthy VN
Updated On : 25 Nov 2013, 12:32 pm

ಪಾವಗಡ: ಖಾತ್ರಿ ಯೋಜನೆ ಲೆಕ್ಕ ಪುಸ್ತಕ ನಿರ್ವಹಣೆಯಲ್ಲಿ ಪಿಡಿಒ ಮತ್ತು ಕಾರ್ಯದರ್ಶಿ ನಿರ್ಲಕ್ಷತೋರಿದ ಕಾರಣ ಗ್ರಾಪಂ ಯೋಜನೆ ಕುಂಠಿತಗೊಂಡಿದೆ ಎಂದು ಕೇಂದ್ರ ಅಧ್ಯಯನ ತಂಡದ ಮುಖ್ಯಾಧಿಕಾರಿ ಸುಧಾಕರರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗದ ಹಿನ್ನಲೆಯಲ್ಲಿ ಕೇಂದ್ರ ತಂಡ  ಪಾವಗಡಕ್ಕೆ ಆಗಮಿಸಿ ತಾಲೂಕಿನ ಬಿ.ಕೆ.ಹಳ್ಳಿ, ಸಿದ್ದಾಪುರ ಮತ್ತು ಮರಿದಾಸನಹಳ್ಳಿ ಗ್ರಾಪಂಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿ ಮತ್ತು ಲೆಕ್ಕಪುಸ್ತಕ ನಿರ್ವಹಣೆಯನ್ನು ಪರಿಶೀಲಿಸಿತು. ಇದೇ ಸಂದರ್ಭದಲ್ಲಿ ಸುಧಾಕರರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಮೀಣಾಭಿವೃದ್ಧಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿ ಗ್ರಾಪಂಗೆ ಅನುದಾನ ಬಿಡುಗಡೆ ಮಾಡಿದೆ. 2010-11ನೇ ಸಾಲಿಗೆ ಸಂಬಂಧಪಟ್ಟಂತೆ  ಕೇಂದ್ರ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಇಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆಂದು ಆಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಮರಿದಾಸನಹಳ್ಳಿ ಹಾಗೂ ಸಿದ್ದಾಪುರ ಗ್ರಾಪಂಗಳಲ್ಲಿ ಖಾತ್ರಿ ಯೋಜನೆ ಸೇರಿದಂತೆ ಮನೆಗಳ ಹಂಚಿಕೆ ಹಾಗೂ ಮಾಸಾಶನ ಮಂಜೂರಾತಿ ಕಲ್ಪಿಸುವಲ್ಲಿ ಕಾರ್ಯದರ್ಶಿಗಳು ಅಸಡ್ಡೆ ತೋರಿದ್ದು ಈ ಬಗ್ಗೆ ವರದಿ ಕೋರಲಾಗಿದೆ ಎಂದ ಅವರು, ಮರಿದಾಸನಹಳ್ಳಿ ಗ್ರಾಪಂಗೆ ಇತ್ತೀಚೆಗೆ ನಿಯೋಜಿತರಾದ ಕಾರ್ಯದರ್ಶಿ ಹಂಚಿನಾಳ್‌ಕರ್ ಯೋಜನೆಗಳ ಅನುಷ್ಠಾನ ಕುರಿತು ಆಸಕ್ತಿ ವಹಿಸಿದ್ದಾರೆಂದರು. ಇದೇ ಸಂದರ್ಭದಲ್ಲಿ ಈಗಾಗಲೇ ತಡೆಹಿಡಿದಿರುವ 2010-11ರ ಖಾತ್ರಿ ಯೋಜನೆ ಕಾಮಗಾರಿಗಳ ಹಣ ಬಿಡುಗಡೆ ಮಾಡುವಂತೆ ಕೇಂದ್ರ ತಂಡವನ್ನು ಕೂಲಿಕಾರರು ಒತ್ತಾಯಿಸಿದರು. ಮನವಿ ಸಲ್ಲಿಸಿದರು. ತಾಪಂ ಇಒ ತಿಪ್ಪೇಸ್ವಾಮಿ, ಜಲಾನಯನ ಇಲಾಖೆ ಅಭಿವೃದ್ಧಿ ಅಧಿಕಾರಿ ಪುಟ್ಟರಂಗಪ್ಪ, ಬಿಇಒ ನಾಗರಾಜ್, ಜಿಪಂ ಸಹಾಯಕ ಎಂಜಿನಿಯರ್ ಬಸವಲಿಂಗಪ್ಪ, ಸಿದ್ಧಾಪುರ ಗ್ರಾಪಂ ಕಾರ್ಯದರ್ಶಿ ನಾಗರಾಜ್, ಮರಿದಾಸನಹಳ್ಳಿ ಗ್ರಾಪಂ ಕಾರ್ಯದರ್ಶಿ ಹಂಚಿನಾಳ್‌ಕರ್ ಮುಂತಾದವರಿದ್ದರು.   

'ಅಂಧರೂ ಕನ್ನಡಸೇವೆಯಲ್ಲಿ ಹಿಂದೆ ಬಿದ್ದಿಲ್ಲ'
ಕುಣಿಗಲ್: ಅಂಧರೂ  ಕನ್ನಡಮ್ಮನ ಸೇವೆಯಲ್ಲಿ ಹಿಂದೆ ಬಿದ್ದಿಲ್ಲ, ದಾಸರ ಪದಗಳಿರಬಹುದು, ವಚನಗಾಯನಗಳಿರಬಹುದು. ಎಲ್ಲವನ್ನು ಸುಶ್ರಾವ್ಯ ಹಾಡುತ್ತಾ ಕನ್ನಡದ ಹಿರಿಮೆ, ಗರಿಮೆ ಮತ್ತಷ್ಟು ಬೆಳೆಯಲು ಸೇವೆ ಸಲ್ಲಿಸುತ್ತಿದ್ದಾರೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ದಿನೇಶ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ಕುವೆಂಪು ನಗರದಲ್ಲಿ ಸಿದ್ದಗಂಗ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ನವಚೇತನ ಅಂಧಮಕ್ಕಳ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಂಧ ಮಕ್ಕಳ ಶಾಲೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಕಾರ್ತೀಕ ದೀಪೋತ್ಸವ
ತಿಪಟೂರು: ನಗರದ ವಿನಾಯಕ ನಗರದಲ್ಲಿರುವ ಶ್ರೀ ಕಾಶಿ ವಿಶ್ವನಾಥಸ್ವಾಮಿ ಮಂದಿರದಲ್ಲಿ ದಶಮಾನೋತ್ಸವ, ಕಾರ್ತೀಕ ದೀಪೋತ್ಸವ, ಗ್ರಂಥ ಬಿಡುಗಡೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಸೋಮವಾರ ಏರ್ಪಡಿಸಲಾಗಿದೆ ಎಂದು ಮಂದಿರ ವ್ಯವಸ್ಥಾಪಕ ಕೆ.ಎಂ. ಸುಕುಮಾರ್ ತಿಳಿಸಿದ್ದಾರೆ.
ಬೆಳಿಗ್ಗೆ ಶ್ರೀ ಸ್ವಾಮಿಗೆ ಪಂಚಾಮೃತಾಭಿಷೇಕ, ಅಲಂಕಾರ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಅಂದೇ ಸಂಜೆ 6ಗಂಟೆಗೆ ಧರ್ಮಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶಾಸಕ ಕೆ.ಷಡಕ್ಷರಿ, ಮಾಜಿ ಶಾಸಕ ಬಿ.ಸಿ.ನಾಗೇಶ್, ಕೆಜೆಪಿ ಮುಖಂಡ ಲೋಕೇಶ್ವರ, ಪ್ರಾಂಶುಪಾಲ ಡಾ.ಜಯದೇವಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement