ನ್ಯಾಯಬೆಲೆ ಅಂಗಡಿ ನ್ಯಾಯ ರೀತಿ ನಡೆಯಲಿ
ಪಾವಗಡ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇತರೆ ಬಡ ಕುಟುಂಬಗಳು ಪಡಿತರ ಚೀಟಿಗಳಿಂದ ವಂಚಿತರಾಗಿದ್ದು ಅರ್ಹರಿಗೆ ಸಮರ್ಪಕ ಹಂಚಿಕೆ ಮಾಡುವಲ್ಲಿ ನ್ಯಾಯಬೆಲೆ ಅಂಗಡಿ ಉಸ್ತುವಾರಿ ಅಧಿಕಾರಿಗಳು ಆಸಕ್ತಿ ವಹಿಸುವಂತೆ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರು ಕರೆ ನೀಡಿದರು.
ತಾ.ಆಡಳಿತ ವತಿಯಿಂದ ತಿರುಮಣಿ ಗ್ರಾಮದ ಸರ್ಕಾರಿ ಶಾಲೆ ಅವರಣದಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ.ಜಾತಿ, ಪ.ಪಂಗಡ ಸೇರಿದಂತೆ ಇತರೆ ವರ್ಗದ ಕಡು ಬಡ ಕುಟುಂಬಗಳು ಪಡಿತರ ಚೀಟಿಗಳಿಂದ ವಂಚಿತರಾಗಿದ್ದು, ಅರ್ಹರಿಗೆ ಸಮರ್ಪಕ ಪಡಿತರ ಚೀಟಿ ಕಲ್ಪಿಸಲು ನ್ಯಾಯ ಬೆಲೆ ಅಂಗಡಿಯ ಉಸ್ತುವಾರಿ ಅಧಿಕಾರಿಗಳು ಆಸಕ್ತಿವಹಿಸುವಂತೆ ಅವರು ಸಲಹೆ ನೀಡಿದರು.
ವಿವಿಧ ಯೋಜನೆಗಳ ಅಡಿ ಮನೆ ಹಂಚಿಕೆಯಲ್ಲಿ ಗ್ರಾಪಂ ಮಟ್ಟದ ಅಧಿಕಾರಿಗಳು ರಾಜಕೀಯ ಮಾಡದೇ ಗ್ರಾಮ ಸಭೆಗಳನ್ನು ಏರ್ಪಡಿಸಿ ಅರ್ಹರಿಗೆ ಮನೆ ಸೌಲಭ್ಯ ಕಲ್ಪಿಸಬೇಕು. ಮನೆ ಹಂಚಿಕೆಯಲ್ಲಿ ರಾಜಕೀಯ ಮಾಡದೇ ಪಕ್ಷಾತೀತವಾಗಿ ಅರ್ಹರಿಗೆ ಮನೆ ಸಿಗುವ ನಿಟ್ಟಿನಲ್ಲಿ ಕಾರ್ಯಪ್ರವ್ರತ್ತರಾಗಬೇಕು ಎಂದ ಅವರು ಈಗಾಗಲೇ ಚಾಲ್ತಿಯಲ್ಲಿರುವ ಮನೆಗಳಿಗೆ ತಾಂತ್ರಿಕ ದೋಷದಿಂದ ಮನೆ ಬಿಲ್ ತಡೆಹಿಡಿದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದರು.