ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕನ್ನಡ ನಾಡು-ನುಡಿ ಬೆಳವಣಿಗೆಗೆ ಶ್ರಮ ಅಗತ್ಯ: ವೆಂಕಟರಾಮಯ್ಯ

Srinivasa Murthy VN
Updated On : 26 Nov 2013, 1:25 am

ಶಿರಾ: ಕನ್ನಡ ನಾಡು-ನುಡಿ, ಭಾಷೆ ಸಂಸ್ಕೃತಿ ಬೆಳವಳಿಗೆಗಾಗಿ ಕನ್ನಡಿಗರ ಶ್ರಮ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕನ್ನಡದ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಎಂ.ಎಸ್. ವೆಂಕಟರಾಮಯ್ಯ ಅವರು ತಿಳಿಸಿದರು.
ಅವರು ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಅವರಣದಲ್ಲಿ ಏರ್ಪಡಿಸಿದ್ದ ಸಿರಿಗನ್ನಡ ವೇದಿಕೆ ತಾಲೂಕು ಘಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಪಿ.ಹೆಚ್.ಮಹೇಂದ್ರಪ್ಪ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ನಿವೃತ್ತ ಎಂಜಿನಿಯರ್ ಬೊಮ್ಮಲಿಂಗಯ್ಯ, ಉಪ ಪ್ರಾಚಾರ್ಯ ರಾಮಚಂದ್ರಪ್ಪ, ಕಳ್ಳಂಬೆಳ್ಳ ಜಯರಾಂ, ಸಂಗೀತ ಶಿಕ್ಷಕ ರಂಗಸ್ವಾಮಿ, ಹಾಜರಿದ್ದರು. ವಿ.ಶಾಂತವೀರಪ್ಪ ನಿರೂಪಿಸಿದರು.

ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ
ಶಿರಾ: ತಾಲೂಕಿನ ಕಳ್ಳಂಬೆಳ್ಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನ. 29 ಶುಕ್ರವಾರದಂದು ಬೆಂಗಳೂರಿನ ಮೋದಿ ಚಾರಿಟಬಲ್ ಟ್ರಸ್ಟ್‌ವತಿಯಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿದ್ದು ಆಸಕ್ತರು ಶಿಬಿರದಲ್ಲಿ ಪಾಲ್ಗೊಂಡು ಉಪಯೋಗ ಪಡೆದುಕೊಳ್ಳಬೇಕೆಂದು ಆಯೋಜಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement