ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಲಾ ಪ್ರತಿಭೆ ಅಭಿವ್ಯಕ್ತಿಗೆ ಅವಕಾಶ

Srinivasa Murthy VN
Updated On : 26 Nov 2013, 1:25 am

ಮಧುಗಿರಿ: ಚಿಕ್ಕ ಮಕ್ಕಳಲ್ಲಿ  ಅಡಗಿರುವ  ಕಲಾ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಅವಕಾಶ ಮಾಡಿ ಕೊಟ್ಟಿರುವ  ಕಾರ್ಡಿಯಲ್ ಶಾಲೆಯ ಆಡಳಿತ ಮಂಡಳಿಯ ಕಾರ್ಯ ವೈಖರಿ ಮೆಚ್ಚುವಂಥದ್ದು ಎಂದು ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಟಿ.ಎಸ್. ಆಂಜನಪ್ಪ ಅಭಿಪ್ರಾಯಪಟ್ಟರು.
ಮಧುಗಿರಿ ಪಟ್ಟಣದ ಕಾರ್ಡಿಯಲ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ  ಏರ್ಪಡಿಸಿದ್ದ ಕಲೆ, ಕರಕುಶಲ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸುತ್ತ ಮುತ್ತ ಸುಲಭವಾಗಿ ದೊರೆಯುವ ವಸ್ತುಗಳನ್ನು ಬಳಸಿ ಕಲಾ ಕೌಶಲ್ಯದಿಂದ ವಿದ್ಯಾರ್ಥಿಗಳು ತಯಾರಿಸಿದ್ದ ತರಕಾರಿ ಕತ್ತರಿಸಿ ವಿವಿಧ ವಿನ್ಯಾಸ ರೂಪಿಸಿ, ಹಳೇ ಕಾಲದ  ಹಳ್ಳಿ ಮಾದರಿ ಮನೆಗಳನ್ನು ಶಾಲಾ ಆವರಣದಲ್ಲಿ ಪ್ರತಿ ಸೃಷ್ಟಿಸಿದ್ದ ದಸರಾ ಗೊಂಬೆ, ಗಾಜಿನ ಮೇಲೆ ಬಣ್ಣ ಬಣ್ಣದ ಚಿತ್ರಗಳು, ಮಡಕೆ ಮೇಲೆ ಹಲವು ಬಗೆಯ ವಿನ್ಯಾಸಗಳ ರಚನೆ, ಮರಳಿಗೆ ಬಣ್ಣ ಲೇಪಿಸಿ ವಿವಿಧ ಆಕೃತಿ ರಚಿಸಿದ್ದ ಕಲಾತ್ಮಕ ಚಿತ್ರಗಳು ಪೋಷಕರನ್ನು ರಂಜಿಸಿವೆ ಎಂದು ಮಕ್ಕಳ ಬುದ್ಧಿ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಲ್ಲದೆ ಹಿಂದೆ ಯುದ್ದ ಕಾಲದಲ್ಲಿ ಬಳಕೆಯಲ್ಲಿದ್ದ ಕತ್ತಿ, ಗುರಾಣಿ ಆಯುಧಗಳ ಪ್ರದರ್ಶನದ ಮೂಲಕ ರಾಜ ಮಹಾರಾಜರ ಕಾಲವನ್ನು ಮಕ್ಕಳಿಗೆ ನೆನಪಿಸಿದ್ದು, ಆಧುನಿಕ ಕೃಷಿ ಪದ್ಧತಿಗೆ ಅಂಟಿಕೊಂಡು ಹಳೇ ಪದ್ಧತಿ  ಮರೆತು ಹೋಗುತ್ತಿರುವ  ಈ ಸಂದರ್ಭದಲ್ಲಿ ಕೃಷಿ ಉಪಕರಣಗಳ ಬಗ್ಗೆ ಮಕ್ಕಳಿಗೆ  ನೆನಪು ಮಾಡಿ ಕೊಡುವ ಜೊತೆಗೆ  ಪುರಾತನ ಕಾಲದಲ್ಲಿ ರೈತರು,ಕೃಷಿ ಕೂಲಿ ಕಾರ್ಮಿಕರು ಜೋತು ಬೀದ್ದಿದ್ದ ಸೇರು, ಅಚ್ಚೇರು,ಪಾವು, ಸೆಟಾಕು, ಬಾನ, ಹೊಡೆವು ಇದೆಲ್ಲವೂ ಕೂಡ ಅಡಕವಾಗಿವೆ ಎಂದರು.
ಮಧುಗಿರಿಯ ವಿವಿಧ ಶಾಲೆಯ ನೂರಾರು ಮಕ್ಕಳು ಮತ್ತು ಪೋಷಕರು ಈ ವಸ್ತುಪ್ರದರ್ಶನ ವೀಕ್ಷಿಸಿದರು. ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ಚಿತ್ತಯ್ಯ, ಸಂಸ್ಥಾಪಕ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಡಿಓ ಎಲ್‌ಐಸಿ ನಾಗಾರಜು, ಸಂಸ್ಥಾಪಕ ಖಜಾಂಚಿ ಶೈಲಶ್ರೀ ನಾಗರಾಜು, ಮುಖ್ಯ ಶಿಕ್ಷಕಿ ಶಕುಂತಲ, ಆಡಳಿತಾಧಿಕಾರಿ ರಾಜೀವ್ ಕುಮಾರ್, ದೈಹಿಕ ಶಿಕ್ಷಕ ಜಯರಾಮ್, ರಾಜೇಶ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement