ಡಿ. 1ರಂದು ಪ್ರತಿಭಾ ಪುರಸ್ಕಾರ
ಪಾವಗಡ: ಆದಿಜಾಂಭವ ನೌಕರರ ಒಕ್ಕೂಟ ತಾಲೂಕು ಶಾಖೆ ವತಿಯಿಂದ ಸನ್ಮಾನ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಡಿ.1ರಂದು 11ಗಂಟೆಗೆ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಮಾದಾರ ಗುರುಪೀಠದ ಅಧ್ಯಕ್ಷ ಬಸವಮೂರ್ತಿ ಮಾದರ ಚನ್ನಯ್ಯ ಅವರು ಸಮಾರಂಭದ ಸಾನಿದ್ಯ ವಹಿಸಲಿದ್ದು ಉದ್ಘಾಟನೆಯನ್ನು ಶಾಸಕ ಕೆ.ಎಂ.ತಿಮ್ಮರಾಯಪ್ಪ ನೆರೆವೇರಿಸಲಿದ್ದಾರೆ. ಪ್ರತಿಭಾ ಪುರಸ್ಕಾರವನ್ನು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯಲು ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಎಂಜಿನಿಯರ್ ಚಂದ್ರಕಾಂತ್ ವಹಿಸಲಿದ್ದಾರೆ.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೈ,ಎಚ್.ಹುಚ್ಚಯ್ಯ, ಜಿಪಂ ಮಾಜಿ ಅಧ್ಯಕ್ಷ ನರಸಿಂಹಪ್ಪ, ಜಿಪಂ ಸದಸ್ಯೆ ನಾಗಮಣಿ ಎಂ.ಕೆ.ನಾರಾಯಣಪ್ಪ, ಸದಸ್ಯ ಕೆಂಚಮಾರಯ್ಯ, ತಾಪಂ ಸದಸ್ಯ ರಾಮಾಂಜಿನಪ್ಪ, ಸಾರವಾಟಪುರ ಮಂಜುನಾಥ್, ನಾಗರತ್ನಮ್ಮ ಲಕ್ಷೀನರಸಪ್ಪ, ನರಸಮ್ಮ ಓಬಳಪತಿ, ಸರೋಜಮ್ಮ ಸೇರಿದಂತೆ ತಹಸೀಲ್ದಾರ್ ಎಂ.ಪಾಷ, ತಾಪಂ ಇಒ ತಿಪ್ಪೇಸ್ವಾಮಿ, ಆರೋಗ್ಯಧಿಕಾರಿ ಡಾ.ಚನ್ನಕೇಶವ, ಸಿಪಿಐ ಭಾನುಪ್ರಕಾಶ್,ಬಿಇಒ ನಾಗರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಆರ್.ಚೌದರಿ, ಸನೌ ಸಂಘದ ಕಾರ್ಯದರ್ಶಿ ನರಸಿಂಹ, ಹಿರಿಯ ಮುಖಂಡರಾದ ಕೋರ್ಟ್ನರಸಪ್ಪ, ಎಸ್.ಹನುಮಂತರಾಯಪ್ಪ, ರಾಮಾಂಜಿನಪ್ಪ, ಶಿವಕುಮಾರ್ಸಾಕೇಲ್, ಹೊಸಹಳ್ಳಿ ಮಲ್ಲಿಕಾರ್ಜುನ, ನೀಲಾ ನಾಗರಾಜು ಸೇರಿದಂತೆ ಜನಾಂಗದ ಚುನಾಯಿತ ಸದಸ್ಯರು, ಸರ್ಕಾರಿ ಅಧಿಕಾರಿಗಳು ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಇತರೆ ಗಣ್ಯರು ಭಾಗವಹಿಸಲಿದ್ದಾರೆ.
ಇಂದು ಕ್ಯಾನ್ಸರ್ ತಪಾಸಣಾ ಶಿಬಿರ
ತಿಪಟೂರು: ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಇಲಾಖೆ,ರೋಟರಿ ಮತ್ತು ಇಂಡಿಯನ್ಮೆಡಿಕಲ್ ಅಸೋಸಿಯೇಷನ್ತಾಲ್ಲೂಕು ಘಟಕಗಳ ಸಹಯೋಗದೊಂದಿಗೆ ಇಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ತ್ಪಾಸಣಾ ಮತ್ತು ಸಲಹಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಬಂಧಪಟ್ಟವರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾಮಿ ಮನವಿ ಮಾಡಿದ್ದಾರೆ.