ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಪಿಎಂಸಿ ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ

Srinivasa Murthy VN
Updated On : 2 Sept 2013, 12:04 pm

ತಿಪಟೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷರಾಗಿ ಎನ್.ಸಿ. ರಮೇಶ್ ಭಾನುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.  ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಪರವಾಗಿ ನೊಣವಿನಕೆರೆಯ ಎಸ್.ಸಿ. ರಮೇಶ್ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಎಂ.ಡಿ.ರವಿಕುಮಾರ್ ಮಣಕಿಕೆರೆ  ಸ್ಪರ್ಧಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ 7 ಮತ್ತು ಬಿಜೆಪಿಯಲ್ಲಿ 7 ನಿರ್ದೇಶಕರುಗಳಿದ್ದು, ಜೆಡಿಎಸ್ನಲ್ಲಿ ಇಬ್ಬರು ನಿರ್ದೇಶಕರುಗಳಿದ್ದು, ಬಿಜೆಪಿ ಮತ್ತು ಜೆಡಿಎಸ್ ಒಂದಾದ ಪರಿಣಾಮ ಕಾಂಗ್ರೆಸ್ ಮತದಾನದಲ್ಲಿ ಭಾಗವಹಿಸಿರಲಿಲ್ಲ. ಅಂತಿಮವಾಗಿ ಜೆಡಿಎಸ್ನ ಎನ್.ಸಿ. ರಮೇಶ್ 8 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಶ್ರಾವಣ ಮಾಸದ ವಿಶೇಷ ಪೂಜೆ
ಹುಳಿಯಾರು: ಹೋಬಳಿ ಜೋಡಿ ತಿರುಮಲಾಪುರದ ಶ್ರೀಲಕ್ಷ್ಮಿವೆಂಕಟೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ಸೋಮವಾರ(ತಾ.2))  ಸ್ವಾವಿಗೆ ರುದ್ರಾಭಿಷೇಕ, ಮಹಾನ್ಯಾಸಪೂರಕ ಪೂಜೆ ಸೇರಿದಂತೆ ವಿವಿಧ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ. ನಂತರ ಮಹಾಮಂಗಳಾರತಿ ನಡೆದು ಮಧ್ಯಾಹ್ನ ದಾಸೋಹ ಕಾರ್ಯಕ್ರಮ ಜರುಗಲಿದೆ.

ತಾಲೂಕು ಮಟ್ಟದ ಕ್ರೀಡಾಕೂಟ
ಶಿರಾ: ಪ.ಪೂ. ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಸೆ. 3 ಮತ್ತು 4 ರಂದು ಆಯೋಜಿಸಲಾಗಿದೆ ಎಂದು ಕ್ರೀಡಾ ಕಾರ್ಯದರ್ಶಿ ಬಿ.ರಾಮಚಂದ್ರಪ್ಪ ತಿಳಿಸಿದ್ದಾರೆ. ಕ್ರೀಡಾಕೂಟವನ್ನು ಸಚಿವ ಟಿ.ಬಿ.ಜಯಚಂದ್ರ ಅವರು ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಪ.ಪೂ. ಶಿಕ್ಷಣ ಇಲಾಖೆ ಉಪ ನಿರ್ದೆಶಕ ಜಯಪ್ರಕಾಶ್ ವಹಿಸುವರು. ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್, ನಗರ ಸಭಾ ಸದಸ್ಯ ಚಾಂದ್ ಪಾಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜ್ಕುಮಾರ್ ಮತ್ತಿತರರು ಹಾಜರಿರುವರು ಎಂದು ತಿಳಿಸಿದ್ದಾರೆ.

ಮಕ್ಕಳಿಗೆ ಉಚಿತ ಚಿಕಿತ್ಸೆ
ಹಾಸನ:  ಅಪೌಷ್ಟಿಕ ಮಕ್ಕಳ ವೈದ್ಯಕೀಯ ವೆಚ್ಚ ಬಾಲಸಂಜೀವಿನಿ ಯೋಜನೆಯಡಿ ತೀವ್ರ ಅಪೌಷ್ಟಿಕ ಮಕ್ಕಳ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಬಾಲಸಂಜೀವಿನಿ ಯೋಜನೆ ಪ್ರಾರಂಭಿಸಿದ್ದು ಅದರಂತೆ ಹಾಸನದ ಸಿ.ಎಸ್.ಐ. ರೆಡ್ ಮೆಮೋರಿಯಲ್ ಆಸ್ಪತ್ರೆಯು ಈ ಯೋಜನೆಗಾಗಿ ಸರ್ಕಾರದಿಂದ ಅಂಗೀಕೃತವಾಗಿದೆ. ಪೋಷಕರು, ಪಾಲಕರು ತೀವ್ರ ಅಪೌಷ್ಟಿಕ  ಹಾಗೂ ತೀವ್ರ ಕಾಯಿಲೆಯಿಂದ ಬಳಲುತ್ತಿರುವ (ಹೃದಯ ಸಂಬಂಧಿ, ರಕ್ತ ಸಂಬಂಧಿ ರೋಗಗಳು, ಲಿವರ್ ತೊಂದರೆ, ಅನೀಮಿಕ್ ಇತರೆ) 0-6 ವರ್ಷದ ಬಿಪಿಎಲ್ ಕುಟುಂಬಕ್ಕೆ ಸೇರಿದ ಅಂಗನವಾಡಿ ಮಕ್ಕಳನ್ನು ಸಿಎಸ್ಐ ಆಸ್ಪತ್ರೆ ಹಾಸನ, ಇಲ್ಲಿಗೆ ಅಂಗನವಾಡಿ ಕಾರ್ಯಕರ್ತೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಶಿಫಾರಸ್ಸಿನೊಂದಿಗೆ ದಾಖಲಿಸಬಹುದಾಗಿದೆ.  ಅದರಂತೆ, 3ನೇ ಹಂತದ ಚಿಕಿತ್ಸೆ ಅವಶ್ಯವಿರುವ ಮಗುವಿಗೆ ಕನಿಷ್ಠ 35 ಸಾವಿರ ರು.ನಿಂದ ಗರಿಷ್ಠ 50 ಸಾವಿರ ರು.ವರೆಗೆ ವೆಚ್ಚವನ್ನು ಇಲಾಖೆ ಭರಿಸುತ್ತದೆ ಎಂದು ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ ತಿಳಿಸಿದ್ದಾರೆ. ಮಾಹಿತಿಗಾಗಿ ನಿರ್ದೇಶಕರು, ಸಿಎಸ್ಐ ಮೆಮೋರಿಯಲ್ ಆಸ್ಪತ್ರೆ, ಹಾಸನ ಹಾಗೂ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 9ನೇ ಕ್ರಾಸ್ ಕೆ.ಆರ್.ಪುರಂ, ಹಾಸನ (ದೂ.08172267218) ಸಂಪರ್ಕಿಸಿ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement