ಪ್ರೌಢಶಾಲಾ ಸಹ ಶಿಕ್ಷಕರಿಗಾಗಿ ಮಾರ್ಗ ಸೂಚಿ ಬಿಡುಗಡೆ
ಮಧುಗಿರಿ: ಪ್ರೌಢಶಾಲಾ ಸಹ ಶಿಕ್ಷಕರಿಗಾಗಿ (ಸಿಸಿಇ) ಮಾರ್ಗ ಸೂಚಿ ಬಿಡುಗಡೆ ಮಾಡಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ವೆಂಕಟರಾಮು ತಿಳಿಸಿದ್ದಾರೆ. ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಪ್ರೌಢಶಾಲಾ ಸಹ ಶಿಕ್ಷಕರ ಉಪಯೋಗಕ್ಕಾಗಿ ಹೊಸ ಪಠ್ಯಪುಸ್ತಕ ಆಧಾರಿತ (ಸಿಸಿಇ) ಅವಧಿಯಲ್ಲಿ 8, 9 ನೇ ತರಗತಿ ಮತ್ತು ಪುಸ್ತಕ ಮಾದರಿಯಲ್ಲಿ 10ನೇ ತರಗತಿಗೆ ಅನ್ವಯಿಸುವಂತೆ ವಾರ್ಷಿಕ ಪಾಠ ಯೋಜನೆ, ಪಾಠ ಟಿಪ್ಪಣಿ ಮತ್ತು ಮಾದರಿ ನೀಲಿನಕ್ಷೆ ಒಳಗೊಂಡ ಮಾರ್ಗ ಸೂಚಿ ಹೊರ ತರಲಾಗಿದೆ.(ಕನ್ನಡ ಮಾಧ್ಯಮದಲ್ಲಿ ಮಾತ್ರ) ಕನ್ನಡ,ಆಂಗ್ಲ,ಹಿಂದಿ ಭಾಷೆಗಳ ಮಾರ್ಗ ಸೂಚಿ ದರ ರು.175 ಗಣಿತ, ವಿಜ್ಞಾನ, ಸಮಾಜ ಕೋಶ ವಿಷಯಗಳ ಮಾರ್ಗಸೂಚಿ ದರ 200 ರು. ಆಗಿರುತ್ತದೆ. ಅಗತ್ಯವಿರುವ ಶಿಕ್ಷಕರು ತಮ್ಮ ತಾಲೂಕಿನ ಸಹ ಶಿಕ್ಷಕರ ಸಂಘದ ಅಧ್ಯಕ್ಷರ ಮೂಲಕ ಅಥವಾ ಜಿಲ್ಲಾ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಂ.ವೆಂಕಟರಾಮು ಮತ್ತು ಕಾರ್ಯದರ್ಶಿ ಸಿದ್ದೇಶ್ವರ ತಿಳಿಸಿದ್ದಾರೆ.
ಕೆಂಚಮ್ಮನ ಸನ್ನಿಧಿಯಲ್ಲಿ ವಿಶೇಷ ಪೂಜೆ
ಕ.ಪ್ರ.ವಾರ್ತೆ ಹುಳಿಯಾರು ಸೆ.1
ಇಲ್ಲಿನ ಇತಿಹಾಸ ಪ್ರಸಿದ್ಧ ಗ್ರಾಮದೇವತೆ ಶ್ರೀಕೆಂಚಮ್ಮದೇವಿ ದೇವಾಲಯದಲ್ಲಿ ಶಾವಣ ಮಾಸದ ಕಡೆ ಭಾನುವಾರದ ಅಂಗವಾಗಿ ವಿಶೇಷ ಪೂಜೆ ಹಾಗೂ ಕನ್ನೇಕೇರು ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು.
ಭಾನುವಾರ ಬೆಳಿಗ್ಗೆ ಸಮೀಪದ ಕೆರೆಏರಿ ಮೇಲಿರುವ ಅಮ್ಮನವರ ಮೂಲಸ್ಥಾನದಲ್ಲಿ ಗಂಗಾಪೂಜೆ ಸಲ್ಲಿಸಿ ಕಳಸವನ್ನು ಸಿದ್ಧಮಾಡಿ ನಂತರ ಅದನ್ನು ಗ್ರಾಮದೇವತೆಗಳಾದ ದುರ್ಗಮ್ಮ, ಹುಳಿಯಾರಮ್ಮ, ಕೆಂಚಮ್ಮನವರೊಂದಿಗೆ ನಡೆಮುಡಿಯೊಂದಿಗೆ ಪಟ್ಟಣದ ದೇವಾಲಯಕ್ಕೆ ಕರೆ ತಂದು ಪೂಜೆ ಸಲ್ಲಿಸಲಾಯಿತು. ಅಮ್ಮನವರ ಮೂಲವಿಗ್ರಹಕ್ಕೆ ಅರ್ಚನೆ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆ ಹಾಗೂ ಮಹಾಮಂಗಳರತಿ ನಡೆದು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಿ, ಸಂಜೆ ಪುನಃ ಎಲ್ಲಾ ದೇವರುಗಳನ್ನು ಕೆಂಚಮ್ಮನ ಮೂಲಸ್ಥಾನಕ್ಕೆ ಕರೆದೊಯ್ದು ಹುಳಿಯಾರು ಸೆರಿದಂತೆ ಸುತ್ತಲಿನ ಭಕ್ತಾದಿಗಳಿಂದ ಅಮ್ಮನವರಿಗೆ ಆರತಿಸೇವೆ ನಡೆಲಾಯಿತು. ಈ ಸಂದರ್ಭದಲ್ಲಿ ಪಟೇಲ್ ರಾಜಣ್ಣ, ನಂಜುಂಡಯ್ಯ, ನಾಗೇಂದ್ರಪ್ಪ, ಮಲ್ಲಿಕಾರ್ಜುನಯ್ಯ,ನಾಗರಾಜು, ಕಾಮಶೆಟ್ಟಿಪಾಳ್ಯದ ತಮಣ್ಣ, ಶಿವನಂಜಪ್ಪ, ಮರುಳಶೆಟ್ಟರು, ಷಡಾಕ್ಷರಿ, ಶಿವಣ್ಣ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದರು.
ಥಿಯೋಸಾಫಿಕಲ್ ಸೊಸೈಟಿಯಲ್ಲಿ 47ನೇ ವಾರ್ಷಿಕೋತ್ಸವ ಆಚರಣೆ
ಹುಳಿಯಾರು: ಇಲ್ಲಿನ ಸನ್ಮಾರ್ಗ ಥಿಯೋಸಾಫಿಕಲ್ ಸೊಸೈಟಿ ಸ್ಥಾಪನೆಯಾಗಿ 47 ವರ್ಷಗಳಾಗಿದ್ದು, ಈ ಹಿನ್ನಲೆಯಲ್ಲಿ ವಾರ್ಷಿಕೋತ್ಸವ ದಿನಾಚರಣೆಯನ್ನು ಶನಿವಾರ ಸಂಜೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ದಾವಣಗೆರೆಯ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಎಲ್.ನಾಗೇಶ್ ಅವರು ಸನಾತನ ಶರಣರ ಸಾಹಿತ್ಯ ಹಾಗೂ ದಾಸ ಸಾಹಿತ್ಯದಲ್ಲಿ ಆಡಗಿರುವ ಜೀವನದ ಕಲೆ ಎಂಬ ವಿಷಯವನ್ನೊಳಂಡಂತೆ ವಿಶೇಷ ಉಪನ್ಯಾಸ ನೀಡಿದರು. ಹಿರಿಯರಾದ ಶ್ರೀನಿವಾಸಶೆಟ್ಟರು, ವೆಂಕಟಾಚಲಪತಿಶೆಟ್ಟರು, ಸತ್ಯನಾರಾಯಣ್ಣ ಶೆಟ್ಟರು, ಲಕ್ಶ್ಮಿನಾರಾಯಣಶೆಟ್ಟರನ್ನು ಸನ್ಮಾನಿಸಲಾಯಿತು. ಸಂಗೀತ ಶಿಕ್ಷಕ ಪುಂಡಲೀಕ ಸಂಗಿತೋಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಗೋಪಾಲ್, ಸತೀಶ್ ಇದ್ದರು.