ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಾವಗಡ ಪಟ್ಟಣದ ವಿವಿಧೆಡೆ ಅದ್ಧೂರಿ ಶ್ರೀರಾಮ ನವಮಿ

Srinivasa Murthy VN
Updated On : 9 Apr 2014, 1:06 am
ಪಾವಗಡ: ಶ್ರೀ ರಾಮನವಮಿ ಪ್ರಯುಕ್ತ ಮಂಗಳವಾರ ಪಟ್ಟಣದ ಸಾರ್ವಜನಿಕರು ವಿವಿಧ ಕಡೆ ಬೆಲ್ಲದ ಪಾನಕ ಮತ್ತು ಹೆಸರು ಬೆಳೆ ಹಂಚುವ ಮೂಲಕ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಿದರು.
ಶ್ರೀ ರಾಮನವಮಿ ಪ್ರಯುಕ್ತ ಪಟ್ಟಣದ ಶ್ರೀ ಶಿರಾಡಿ ಸಾಯಿ ಬಾಬಾ ಟ್ರಸ್ಟ್ ವತಿಯಿಂದ ಪ್ರಮುಖ ರಸ್ತೆಗಳಲ್ಲಿ ವಿವಿಧ ವಾದ್ಯಗೋಷ್ಠಿಗಳ ಮೂಲಕ ಭಜನೆ ಮತ್ತು ಇತರೆ ಕಾರ್ಯಕ್ರಮಗಳೊಂದಿಗೆ ತೆರದ ವಾಹನದಲ್ಲಿ ಮೆರವಣಿಗೆ  ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀರಾಮ್ ಮತ್ತು ಶಿರಾಡಿ ಸಾಯಿ ಬಾಬಾ ಅವರ ಹೆಸರಿನಲ್ಲಿ ಪಾನಕ ಮತ್ತು ಇತರೆ ಸಿಹಿಯನ್ನು ಸಾರ್ವಜನಿಕರಿಗೆ ಹಂಚಿದರು.

Advertisement

Advertisement

ಟ್ರಸ್ಟ್‌ನ ಮುಖಂಡರಾದ ಹನುಮಂತರಾಯಪ್ಪ, ಎಸ್.ಸಿ.ಕರಿಯಣ್ಣ ಮತ್ತು ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಪಟ್ಟಣದ 20ನೇ ವಾರ್ಡಿನ ಬೋವಿ ಕಾಲೋನಿಯ ಯುವ ಮುಖಂಡರಾದ ಗಂಗಾಧರ್, ಮಧು,ಅನಿಲ್‌ಕುಮಾರ್, ರಾಮು ನಾರಾಯಣ, ರಘು, ನರೇಶ್ ನೇತೃತ್ವದಲ್ಲಿ ಭೋವಿ ಸಮುದಾಯದ ಅನೇಕ ಯುವಕರು ಪಟ್ಟಣದ ಶಿರಾ ರಸ್ತೆಯಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ರಾಮ ದೇವರಿಗೆ ವಿವಿಧ ಪೂಜೆ ಪುನಸ್ಕಾರಗಳನ್ನು ನೆರೆವೇರಿಸಿ ಪಾನಕ ಹೆಸರು ಬೆಳೆ ಹಂಚಿ ಸಂಭ್ರಮಿಸಿದರು. ಶ್ರೀರಾಮ ನವಮಿ ವಿಶ್ವ ಪ್ರಕೃತಿ ಪ್ರೊಜೆಕ್ಷನ್ ವತಿಯಿಂದ ಪಟ್ಟಣದ ತಾ. ಕಚೇರಿಯ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಪಾನಕ ಹೆಸರುಬೆಳೆ ಹಂಚಿ ಶುಭ ಕೋರಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement