ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಜ್ಯದಲ್ಲಿ ಕಾಂಗ್ರೆಸ್ ಅಲೆ: ಮುಖ್ಯಮಂತ್ರಿ ಚಂದ್ರು

Srinivasa Murthy VN
Updated On : 9 Apr 2014, 1:05 am
ತುಮಕೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಅಲೆಯಿದೆ ಎಂದು ಕಲಾವಿದ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 10  ತಿಂಗಳ ಆಡಳಿತದಲ್ಲಿ ಶೋಷಿತರ ಸಮುದಾಯಕ್ಕೆ ಹಲವಾರು ಯೋಜನೆಗಳ ಜಾರಿಗೆ ತರುವ ಮೂಲಕ ಧ್ವನಿಯಿಲ್ಲದವರಿಗೆ ಧಅವನಿಯಾಗುವ ಕೆಲಸವನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆಯಿದೆ ಎಂದರು.
ಹಿಂದುಳಿದ ವರ್ಗಗಳ ವಿರೋಧಿ: ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ವಿರೋಧಿಯಾಗಿ ಕೆಲಸ ಮಾಡುತ್ತಿರುವುದನ್ನು ನನ್ನ 21 ವರ್ಷಗಳ ಕಾಲ ಆ ಪಕ್ಷದ ಮುಖಂಡನಾಗಿ ಕಂಡಿದ್ದೇನೆ. ಬಿಜೆಪಿ ಸಮನ್ವಯ ಸಮಿತಿಯಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಗೆ ಜಾಗವೇ ಇಲ್ಲ. ಅನಂತಕುಮಾರ್, ಪ್ರಹ್ಲಾದ್ ಜೋಷಿ, ಸತೀಶ್, ಸಂತೋಷ್, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಇದ್ದಾರೆ. ದಲಿತರಿಗಾಗಲಿ, ಅಲ್ಪಸಂಖ್ಯಾತರಿಗಾಗಲಿ, ಶೋಷಿತ ಸಮುದಾಯಗಳಿಗೆ ಅವಕಾಶವೇ ಇಲ ಎಂದರು.

Advertisement

Advertisement

ರಾಜಕಾರಣಕ್ಕೆ ತಪ್ಪಲ್ಲ: ಅರ್ಥ ಪೂರ್ಣ ರಾಜಕಾರಣಕ್ಕೆ ಸಾಹಿತಿಗಳು, ಕಲಾವಿದರು, ವಿದ್ಯಾವಂತರ ಅಗತ್ಯವಿದೆ. ಬಿಜೆಪಿ ತನ್ನ ಪಕ್ಷದಲ್ಲಿ ಇಂತಹ ಅನೇಕರನ್ನು ಹೊಂದಿದೆ. ಆದರೆ ಅವರು ಸ್ವಾತಂತ್ರ್ಯವಾಗಿ ಮಾತನಾಡಲು ಅವಕಾಶ ನೀಡುವುದಿಲ್ಲ. 
 ಕಾಂಗ್ರೆಸ್ ಪಕ್ಷದಲ್ಲಿ ಆ ವಾತಾವರಣವಿಲ್ಲ. ಹಾಗಾಗಿ ಸ್ವಾಭಿಮಾನದಿಂದ ಬದುಕುವ ಸಾಹಿತಿಗಳು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಮಾತನಾಡಿ, ಮಹಿಳೆಯರ ಪರವಾಗಿ ಕಾಂಗ್ರೆಸ್ ತಂದಿರುವ ಕಾನೂನುಗಳನ್ನು ಗಮನಿಸಿದರೆ ಮಹಿಳೆಯರ ಪರವಾದ ಕಾಳಜಿ ಪಕ್ಷಕ್ಕೆ ಎಷ್ಟಿದೆ ಎಂದು ಗೊತ್ತಾಗುತ್ತದೆ.
 ಮಹಿಳಾ ಲೋಕಕ್ಕೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದರು. ಬಿಜೆಪಿಯವರಿಗೆ ಕಣ್ಣು ಕಿವಿ ಎರಡು ಕಾಣಲ್ಲ. ಕಳೆದ 60 ವರ್ಷಗಳ ಹಿಂದೆ ಭಾರತ ಹೇಗಿತ್ತು.
 ಈಗ ಹೇಗಿದೆ ಎಂಬುದನ್ನು ಜನರು ನೋಡುತ್ತಿದ್ದಾರೆ ಎಂದು ಮೋಟಮ್ಮ ನುಡಿದರು. ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಯಮಾಲ ಟೀಕೆ
 ಚಿತ್ರನಟಿ ಜಯಮಾಲಾ ಮಾತನಾಡಿ, ಬಿಜೆಪಿ ಮೋದಿ ಜಪದಲ್ಲಿ ತನ್ನ ಉಳಿದ ಹಗರಣಗಳನ್ನು ಮುಚ್ಚಿಡಲು ಮೋದಿಯನ್ನು ಮುಂದಿಡುತ್ತಿದ್ದಾರೆ. ಗುಜರಾತ್‌ನಲ್ಲಿ ಕಳೆದ ಐದು ವರ್ಷಗಳಲ್ಲಿ 60 ಸಾವಿರ ಸಣ್ಣ ಉದ್ದಿಮೆಗಳು ಮುಚ್ಚಿಹೋಗಿವೆ. ಅಪೌಷ್ಟಿಕತೆ ತಾಂಡವವಾಡುತ್ತಿದೆ. ಇದು ಗುಜರಾತ್ ಮಾದರಿ ಎಂದು ಲೇವಡಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement