ಕಾಂಗ್ರೆಸ್‌ನಿಂದ ಮಾತ್ರ ಸುಭದ್ರ ಸರ್ಕಾರ
ಕ,ಪ್ರ,ವಾರ್ತೆ ಮಧುಗಿರಿ ಏ.10
ಕಾಂಗ್ರೆಸ್‌ನಿಂದ ಮಾತ್ರ ಸುಭದ್ರ ಸರ್ಕಾರ ಮತ್ತು ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಹೋಬಳಿ ಗರಣಿ ಗ್ರಾಮದಲ್ಲಿ ಏರ್ಪಟಾಗಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕೆಲಸಗಳು ನಮ್ಮ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡರ ಗೆಲವಿಗೆ ಶ್ರೀರಕ್ಷೆ, ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗದ ಜನರ ಹಿತ ಕಾಯುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆ ರೂಪಿಸಿದೆ. ಇದರ ಪ್ರಯೋಜನ ಪಡೆದುಕೊಂಡು ಕೈಗೆ ಮತ ನೀಡುವಂತೆ ರಾಜಣ್ಣ ಮನವಿ ಮಾಡಿದರು.
ಕೋಮುವಾದಿ ಬಿಜೆಪಿ ತಿರಸ್ಕರಿಸಿ, ನಮೋ, ನಮೋ ಎಂದರೆ ನಂಬಿಸಿ ಮೋಸ ಮಾಡುವುದು ಎಂದರ್ಥ, ನಮೋ ಅಲೇ ರಾಜ್ಯದಲ್ಲಿ ಎಲ್ಲೂ ಇಲ್ಲ ಎಂದ ರಾಜಣ್ಣ,ಇನ್ನು ಜೆಡಿಎಸ್ ಅಪ್ಪ- ಮಕ್ಕಳ ಪಕ್ಷ. ಅವರು ಹೋದ ಸಭೆಗಳಲ್ಲೆಲ್ಲಾ ಅಳೋದು. ಇಂಥವರಿಗೆ ಮತ ಹಾಕ ಬೇಡಿ ಎಂದು ಕರೆಯಿತ್ತ ರಾಜಣ್ಣ ನಮ್ಮ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡ ಸರಳ ಸ್ವಾಭಾವದ ಸಜ್ಜನಿಕೆ ರಾಜಕಾರಣಿ. ಅವರನ್ನು ಗೆಲ್ಲಿಸಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಆದ ಕಾರಣ ಮತದಾರರು ಯಾವುದೇ ಆಸೆ-ಅಮಿಷಗಳಿಗೆ ಒಳಗಾಗದೆ ಮುದ್ದಹನುಮೇಗೌರಿಗೆ ಮತ ಚಲಾಯಿಸುವ ಮೂಲಕ ಗೆಲ್ಲಿಸುವಂತೆ ಮನವಿ ಮಾಡಿದರು.
ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ಎಸ್.ಆರ್. ರಾಜ್‌ಗೋಪಾಲ್, ಬಿ.ಎನ್.ಶಿವಣ್ಣ, ಬಿ.ಎನ್.ನರಸಿಂಹಮೂರ್ತಿ, ಗಣೇಶ್, ಜಿ.ಪಂ.ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ, ಮುಖಂಡ ಜಯಣ್ಣ, ಗಿರೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.