ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಾತ್ರೆ, ಸಂತೆ ಮುಂದೂಡಿಕೆ

Srinivasa Murthy VN
Updated On : 11 Apr 2014, 12:12 pm

ಕ.ಪ್ರ.ವಾರ್ತೆ ತುಮಕೂರು ಏ. 10
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 17 ರಂದು ನಡೆಯಲಿರುವ ಸಂತೆ ಹಾಗೂ ಜಾತ್ರೆಗಳನ್ನು ಮುಂದೂಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಚಿ.ನಾ.ಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಶೆಟ್ಟಿಕೆರೆ, ದಸೂಡಿ ಜಾತ್ರೆ, ಹುಳಿಯಾರು ಹೋಬಳಿಯ ಹುಳಿಯಾರು ಸಂತೆಯನ್ನು ಮುಂದೂಡಲಾಗಿದೆ. ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಬಿಳಿಗೆರೆ ಜಾತ್ರೆಯನ್ನು ಮುಂದೂಡಲಾಗಿದೆ.
ತುರುವೇಕೆರೆ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಮಣಿಕುಪ್ಪೆ ಜಾತ್ರೆ, ಮಾಯಸಂದ್ರ ಹೋಬಳಿಯ ಮುಗಳೂರು, ಮಲ್ಲದೇವನಹಳ್ಳಿ, ಸೊರವನಹಳ್ಳಿ, ಮುತ್ತುಗದಹಳ್ಳಿ, ಆನಗಡು, ಮಲ್ಲೂರು, ಜಿ. ದೊಡ್ಡೇರಿ, ಶೆಟ್ಟಿಗೊಂಡನಹಳ್ಳಿಯ ಜಾತ್ರೆಗಳು ಮತ್ತು ಕಡಬ, ಕಲ್ಲೂರು ಸಂತೆಯನ್ನು ಮುಂದೂಡಲಾಗಿದೆ.
ಕುಣಿಗಲ್ ತಾಲೂಕು ಅಮೃತೂರು ಹೋಬಳಿಯ ಅಮೃತೂರು ಸಂತೆ, ತುಮಕೂರು ಗ್ರಾಮಾಂತರ ಬೆಳ್ಳಾವಿ ಹೋಬಳಿಯ ಬೆಳ್ಳಾವಿ ಸಂತೆ ಮುಂದೂಡಲಾಗಿದೆ. 
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿಯ ಭೈರೇನಹಳ್ಳಿ ಸಂತೆ ಮುಂದೂಡಲಾಗಿದೆ. ಗುಬ್ಬಿ ತಾಲೂಕು ಕಡಬ ಕಲ್ಲೂರು ಸಂತೆ, ಶಿರಾ ತಾಲೂಕು ಗೌಡಗೆರೆ ಹೋಬಳಿಯ ಪಟ್ಟನಾಯಕನಹಳ್ಳಿ ಸಂತೆ ಮುಂದೂಡಲಾಗಿದೆ.
ಪಾವಗಡ ತಾಲೂಕು ಕಸಬ ವ್ಯಾಪ್ತಿಯ ವೆಂಕಟಾಪುರ, ಕಿಲಾರಲಹಳ್ಳಿ, ನಿಡಗಲ್ ಹೋಬಳಿಯ ಮಂಗಳವಾಡ, ವೈ.ಎನ್. ಹೊಸಕೋಟೆ ಹೋಬಳಿಯ ಮರಿದಾಸನಹಳ್ಳಿ ಸಂತೆ, ಮಧುಗಿರಿ ತಾಲೂಕು ಕೊಡಗೇನಹಳ್ಳಿ ಹೋಬಳಿ ಕೊಡಗೇನಹಳ್ಳಿ ಸಂತೆಯನ್ನು ಮುಂದೂಡಲಾಗಿದೆ.
ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳು ಏಪ್ರಿಲ್ 17 ರ ಗುರುವಾರ ನಡೆಯಲಿರುವ ಸಂತೆ ಹಾಗೂ ಜಾತ್ರೆಗಳನ್ನು ಮುಂದೂಡಲು ಅವಶ್ಯಕ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳತಕ್ಕದ್ದು.  ಹಾಗೂ ಈ ಆದೇಶವು ಏಪ್ರಿಲ್ 17 ರಂದು ಬೆಳಿಗ್ಗೆ 6ರಿಂದ 8 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳನ್ನು ಬಳಸದಿರಲು ಸೂಚನೆ: ಚುನಾವಣಾ ಪ್ರಚಾರಕ್ಕಾಗಿ ಮಕ್ಕಳನ್ನು ಬಳಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 
ಕೆಲವು ಜಿಲ್ಲೆಗಳಲ್ಲಿ ಮಕ್ಕಳನ್ನು ಪ್ರಚಾರ ಕಾರ್ಯಕ್ಕೆ ಬಳಸುತ್ತಿರುವುದು ಮಾಧ್ಯಮಗಳಲ್ಲಿ ಕಂಡು ಬಂದಿದ್ದು,
ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಆದುದರಿಂದ ಜಿಲ್ಲಾ ಚುನಾವಣಾಧಿಕಾರಿಗಳು ಇನ್ನು ಮುಂದೆ ತಮ್ಮ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರಕಾರ್ಯಕ್ಕೆ ಶಾಲೆಯ ಮಕ್ಕಳನ್ನು (18ವರ್ಷ ವಯಸ್ಸಿನ ಮಕ್ಕಳನ್ನು) ಬಳಸಿಕೊಳ್ಳದಂತೆ ತಮ್ಮ ತಮ್ಮ ಜಿಲ್ಲೆಯಲ್ಲಿನ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಅವರು ಕೋರಿದ್ದಾರೆ.
ಅಬಕಾರಿ ದಾಳಿ: ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ನಡೆದ ದಾಳಿ ಪ್ರಕರಣಗಳು ಈ ಕೆಳಕಂಡಂತಿವೆ.
ಏ.8 ರಂದು ಒಟ್ಟು 23 ಕಡೆ ದಾಳಿ ನಡೆಸಿ, 4,512 ರು. ಮೌಲ್ಯದ 17.280 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಏಪ್ರಿಲ್ 9 ರಂದು 26 ಕಡೆ ದಾಳಿ ನಡೆಸಿ, 22556 ರು. ಮೌಲ್ಯದ 8.640 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಮತದಾನ ಎಫೆಕ್ಟ್...
- ತುರುವೇಕೆರೆ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಮಣಿಕುಪ್ಪೆ ಜಾತ್ರೆ, ಮಾಯಸಂದ್ರ ಹೋಬಳಿಯ ಮುಗಳೂರು, ಮಲ್ಲದೇವನಹಳ್ಳಿ, ಸೊರವನಹಳ್ಳಿ, ಮುತ್ತುಗದಹಳ್ಳಿ, ಆನಗಡು, ಮಲ್ಲೂರು, ಜಿ. ದೊಡ್ಡೇರಿ, ಶೆಟ್ಟಿಗೊಂಡನಹಳ್ಳಿಯ ಜಾತ್ರೆಗಳು ಮತ್ತು ಕಡಬ, ಕಲ್ಲೂರು ಸಂತೆ ಮುಂದಕ್ಕೆ
- ಏ. 17ರ ಗುರುವಾರ ನಡೆಯಲಿರುವ ಸಂತೆ ಹಾಗೂ ಜಾತ್ರೆಗಳನ್ನು ಮುಂದೂಡಲು ಅವಶ್ಯಕ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳತಕ್ಕದ್ದು.  ಹಾಗೂ ಈ ಆದೇಶವು ಏಪ್ರಿಲ್ 17 ರಂದು ಬೆಳಿಗ್ಗೆ 6ರಿಂದ 8 ಗಂಟೆಯವರೆಗೆ ಜಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement