ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎ.ಕೃಷ್ಣಪ್ಪ ಪರ ರೋಡ್ ಶೋ, ಮತ ಪ್ರಚಾರ

Srinivasa Murthy VN
Updated On : 12 Apr 2014, 12:44 pm

ಹುಳಿಯಾರು: ಲೋಕಸಭಾ ಚುನಾವಣೆ ಮತದಾನದ ದಿನ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಎಲ್ಲೆಡೆ ಚುನಾವಣೆ ಕಾವು ಹೆಚ್ಚಿದ್ದು, ರಾಜಕೀಯ ಪಕ್ಷಗಳು ಮತ ಬೇಟೆಯಲ್ಲಿ ತೊಡಗಿದ್ದಾರೆ.
ತುಮಕೂರು ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ ಪರ ಶಾಸಕ ಸಿ.ಬಿ.ಸುರೇಶ್‌ಬಾಬು ಪಟ್ಟಣದಲ್ಲಿ ಗುರುವಾರ ರೋಡ್ ಶೋ ನಡೆಸುವ ಮೂಲಕ ಮತದಾರರಲ್ಲಿ ಮತಯಾಚನೆ ಮಾಡಿದರು.
ಗುರುವಾರ ಸಂಜೆ ಪಟ್ಟಣದಕ್ಕೆ ಆಗಮಿಸಿದ ಸುರೇಶ್‌ಬಾಬು ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮದೇವಿ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ನಂತರ ಅಲ್ಲಿಂದಲ್ಲೇ ತಮ್ಮ ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯಲ್ಲಿ ಮತಯಾಚನೆ ಪ್ರಾರಂಭಿಸಿದರು. ಬಿ.ಎಚ್.ರಸ್ತೆ,
ರಾಜ್‌ಕುಮಾರ್ ರೋಡ್, ಬಸ್‌ನಿಲ್ದಾಣದ ಮೂಲಕ ಸಾಗಿ ಬ್ರಾಹ್ಮಣರ ಬೀದಿ ಮೂಲಕ ಗಾಂಧಿಪೇಟೆ ರಸ್ತೆ, ಅಂಜನೇಯ ದೇವಸ್ಥಾನ ರಸ್ತೆಯಲ್ಲಿ ಹೊರೆ ಹೊತ್ತ ಮಹಿಳೆ ಚಿಹ್ನೆಯಿರುವ ಭಿತ್ತಿಪತ್ರಗಳನ್ನು  ಜನರಿಗೆ ಹಂಚುತ್ತಾ ತಮ್ಮ ಪಕ್ಷಕ್ಕೆ ಮತ ನೀಡಿ ಜಯಶೀಲರನ್ನಾಗಿ ಮಾಡುವಂತೆ ಮನವಿ ಮಾಡಿದರು.  ಶಾಸಕರ ಜೊತೆ ಪಟ್ಟಣದ ಜೆಡಿಎಸ್ ಕಾರ್ಯಕರ್ತರಾದ ನಂದಿಹಳ್ಳಿ ಶಿವಣ್ಣ, ಜಲಾಲ್ ಸಾಬ್, ವಕೀಲ ಸದಾಶಿವು, ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ಜಬೀ ಉಲ್ಲಾ, ಜಹೀರ್‌ಸಾಬ್, ಅಶೋಕ್‌ಬಾಬು, ಗೀತಾ ಬಾಬು, ಇಮ್ರಾಜ್, ಗೌಡಿ, ,ಶಿವಕುಮಾರ್ ಸೇರಿದಂತೆ ಇತರರು ಶಾಸಕರಿಗೆ ಸಾಥ್ ನೀಡಿ ಮತಯಾಚನೆಯಲ್ಲಿ ತೊಡಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement