ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗಣಕಯಂತ್ರ ಕುರಿತ ವಿಚಾರ ಸಂಕಿರಣ

Srinivasa Murthy VN
Updated On : 12 Apr 2014, 12:45 pm

ತುಮಕೂರು: ಪ್ರತಿನಿತ್ಯವೂ ನಾವು ತಂತ್ರಜ್ಞಾನ ಬಳಸುತ್ತಲೇ, ಅದರೊಟ್ಟಿಗೆ ಒಡನಾಟ ಮಾಡುತ್ತಿರುತ್ತೇವೆ ಎಂದು ಬಿಸಿಎಸ್ ಇನ್ನೊವೇಷನ್ ಪ್ರವೈಟ್ ಲಿಮಿಟೆಡ್ ಸಿಇಒ ಬಸವರಾಜು ತಿಳಿಸಿದರು.
ನಗರದ ಸಿದ್ಧಾರ್ಥ ಮಹಾವಿದ್ಯಾಲಯದ ಎಂಸಿಎ ವಿಭಾಗದ ವತಿಯಿಂದ ಏರ್ಪಡಿಸಿದ್ದ  ರಿಸರ್ಚ್ ಅಂಡ್ ಡೆವಲಪ್ ಮೆಂಟ್ ಇನ್ ಕಂಪ್ಯೂಟರ್
ಸೈನ್ ಅಂಡ್ ಇಟ್ಸ್ ಅಪ್ಲಿಕೇಷನ್ ವಿಷಯ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಜೀವನಕ್ಕೆ ಕಂಪ್ಯೂಟರ್ ಅವಶ್ಯಕತೆ ಇದೆ. ತಾಂತ್ರಿಕ ಯುಗದಲ್ಲಿ ಬದಲಾವಣೆ ಸದಾ ಮುಂದುವರೆಯುತ್ತಲೇ ಇರುತ್ತದೆ. ಭಾರತದ ತುಂಬಾ ಇಂಜಿನಿಯರ್ ಕಾಲೇಜುಗಳು ಮತ್ತು ಇಂಜಿನಿಯರ್‌ಗಳೇ ಇದ್ದಾರೆ. ಆದರೆ ಈ ಇಂಜಿನಿಯರ್‌ಗಳ ಗುಣಮಟ್ಟ ಮಾತ್ರ ಕಡಿಮೆಯಿದೆ. ಆವಿಷ್ಕಾರದ ತಂತ್ರಜ್ಞಾನ ನಾವೆಲ್ಲ ಸದುಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಎಲ್ಲರೂ ಹೆಚ್ಚು ಹೆಚ್ಚಾಗಿ ಬಳಸುವ ತಂತ್ರಜ್ಞಾನದಂತೆ ನಿಮ್ಮಲೂ ಎಲ್ಲವನ್ನೂ ಆದೇಶಿಸುವ ನಾಯತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ವಿ ವಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಹನುಮಂತಪ್ಪ ಹೇಳಿದರು.
ಎಸ್‌ಎಸ್‌ಐಟಿ ಪ್ರಾಂಶುಪಾಲ ಡಾ.ಕೆ.ಎ. ಕೃಷ್ಣಮೂರ್ತಿ, ಡೀನ್ ಮತ್ತು ಎಲೆಕ್ಟ್ರಾನಿಕ್ ವಿಭಾಗ ಮುಖ್ಯಸ್ಥ ಡಾ. ಎಂ.ಝ. ಕುರಿಯನ್, ಉಪ ಪ್ರಾಂಶುಪಾಲರಾದ ಡಾ. ವೀರಯ್ಯ, ಎಂಸಿಎ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಹಾಗೂ ಸಿದ್ಧಾರ್ಥ ಸಂಸ್ಥೆಯ ಸಂಯೋಜಕ ವೈ.ಎಂ.ರೆಡ್ಡಿ ಮತ್ತು  ಕಾಲೇಜಿನ ಉಪನ್ಯಾಸಕರು ಹಾಜರಿದ್ದರು. ಪ್ರೊ.ರಮೇಶ್ ಸ್ವಾಗತಿಸಿದರು. ಸುಪ್ರಿಯಾ ವಂದಿಸಿದರು. ಚೈತ್ರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement