ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುರುವೇಕೆರೆಗೆ ಎಚ್ಡಿಕೆ ಇಂದು

Srinivasa Murthy VN
Updated On : 14 Apr 2014, 1:30 am

ತುರುವೇಕೆರೆ: ಜಿಡಿಎಸ್ ಪರ ಮತಯಾಚನೆ ಮಾಡಲು  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸುವರು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದ್ದಾರೆ.
 ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸೋಮವಾರ 3 ಗಂಟೆಯಿಂದ 5 ಗಂಟೆಯವರೆಗೆ ಗುರುಭವನದ ಆವರಣದಲ್ಲಿ ಕುಮಾರಸ್ವಾಮಿಯವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ಈಗಾಗಲೇ ತಾಲೂಕಿನ ಪ್ರತಿ ಗ್ರಾಮಗಳಿಗೆ ಹಾಗೂ ಮನೆಗಳಿಗೆ ಆಯಾ ಕ್ಷೇತ್ರದ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಯ ಸದಸ್ಯರುಗಳು ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪರ ಅಲೆ ಇದೆ. ಮತದಾನಕ್ಕೆ ಅತ್ಯಂತ ಕಡಿಮೆ ಅವಧಿ ಇದ್ದು ಕಾರ್ಯಕರ್ತರು ಬಹಳ ಹಮ್ಮಸ್ಸಿನಿಂದ ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.  ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರು ತಮ್ಮ ಪತ್ನಿಯ ಹೆಸರನ್ನು ಮರೆ ಮಾಚಿ ಜನರನ್ನು ವಂಚಿಸಿದುದು ತಪ್ಪು. ಮದುವೆಯಾಗಿದ್ದರೂ ಪತ್ನಿಯನ್ನು ಸಮಾಜಕ್ಕೆ ಪರಿಚಯ ಮಾಡಿಸದೇ ಇದ್ದುದು ಓರ್ವ ಪ್ರಧಾನಿ ಅಭ್ಯರ್ಥಿಗೆ ಶೋಭೆ ತರುವುದಲ್ಲ ಎಂದರು.

ರಾಹುಲ್ ಗಾಂಧಿ ಪ್ರಧಾನಿ ಆಗಲಿ
ಪಾವಗಡ: ಭಾನುವಾರ ಪಟ್ಟಣದ ವಿವಿಧ ವಾರ್ಡುಗಳಿಗೆ ತೆರಳಿದ ಕಾಂಗ್ರೆಸ್ ಯುವ ಘಟಕದ ಕಾರ್ಯದರ್ಶಿ ದಂತ ವೈದ್ಯ ಡಾ. ಶ್ರೀನಿವಾಸರೆಡ್ಡಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರ ಪರ ಮತಯಾಚನೆ ಮಾಡಿದರು.   ಪಟ್ಟಣದ 8ನೇ ವಾರ್ಡ್‌ನ ರೈನ್ ಗೆಜ್ ಬಡವಾಣೆಯಲ್ಲಿ ಮನೆ ಮನೆಗೆ ತೆರಳಿದ ಅವರು ಅಭ್ಯರ್ಥಿ ಪರ ಮತ ಯಾಚಿಸಿದರು.

ವಾಹನ ಉರುಳಿ ಚಾಲಕನ ಸಾವು
ಹುಳಿಯಾರು: ಮದುವೆ ನಿಶ್ಚಿತಾರ್ಥಕ್ಕೆ ಬಂದಿದ್ದವರನ್ನು ಹೆಣ್ಣಿನ ಮನೆಯ ಬಳಿ ಇಳಿಸಿ ಪಕ್ಕದ ಹಳ್ಳಿಗೆ ಹೋಗುತ್ತಿದ್ದ ಟೆಂಪೊ ಟ್ರಾವೆಲರ್ ವಾಹನ ಉರುಳಿ ಬಿದ್ದು  ಚಾಲಕ ಸಾವನಪ್ಪಿದ ಘಟನೆ ಕಾರೇಹಳ್ಳಿ ಗೇಟ್ ಬಳಿ ಭಾನುವಾರ ಸಂಜೆ ನಡೆದಿದೆ.  ಬೆಂಗಳೂರಿನ ಸಂಪಿಗೆಹಳ್ಳಿ ನಿವಾಸಿ ಅಂಜನಮೂರ್ತಿ (35), ಮೃತಪಟ್ಟ ದುರ್ದೈವಿಯಾಗಿದ್ದು, ಗಾಯಗೊಂಡಿರುವ ವ್ಯಕ್ತಿ ಮುರಳಿ ಎಂದು ತಿಳಿದು ಬಂದಿದೆ. ಅವರು ಬೆಂಗಳೂರಿನಿಂದ ಹುಳಿಯಾರು ಸಮೀಪದ ಸೋಮನಹಳ್ಳಿ ಬಳಿಯ ಭೂತಪ್ಪನಗುಡಿ ಹತ್ತಿರ  ನಡೆಯುವ ನಿಶ್ಚಿತಾರ್ಥಕ್ಕೆ ಜನರನ್ನು ಕರೆತಂದಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement