ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಂಗ್ರೆಸ್‌ಗೆ ಮತ ಹಾಕಿದರೆ ಬಿಜೆಪಿಗೆ ಲಾಭ: ಎಚ್ಡಿಕೆ

Srinivasa Murthy VN
Updated On : 16 Apr 2014, 1:15 am

ಚಿಕ್ಕನಾಯಕನಹಳ್ಳಿ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗದ ಸಿ.ಎನ್. ಭಾಸ್ಕರಪ್ಪನವರನ್ನು ಕರೆತಂದು ಸಂಸದರನ್ನಾಗಿ ಮಾಡಿದ ಕೀರ್ತಿ ನಮ್ಮ ತಂದೆ ದೇವೇಗೌಡರಿಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನುಡಿದರು.
ಮಂಗಳವಾರ ಅವರು ಪಟ್ಟಣದಲ್ಲಿ ಜೆಡಿಎಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಅಂಹಿದ ವರ್ಗದ ಉದ್ಧಾರಕರೆಂದು  ಜಪ ಮಾಡುವ ಕಾಂಗ್ರೆಸ್  ಹಿಂದುಳಿದ ಮತ್ತು ಮುಸ್ಲಿಮರ ಬಗ್ಗೆ ಧಮನಕಾರಿ ನೀತಿ ಅನುಸರಿಸುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನಡೆದುಕೊಂಡಿದ್ದಾರೆ. ಭಾಸ್ಕರಪ್ಪನವರನ್ನು ಎಂಪಿ ಮಾಡಿದ ನಮ್ಮ ತಂದೆಯವರು, ಈಗ ಹಿಂದುಳಿದ ವರ್ಗದ ಎ.ಕೃಷ್ಣಪ್ಪನವರನ್ನು ಕರೆತಂದು, ವಯಸ್ಸನ್ನು ಗಣನೆಗೆ ತೆಗೆದುಕೊಳ್ಳದೆ ಹಗಲಿರುಳು ಅವರ ಗೆಲವಿಗಾಗಿ ಶ್ರಮಿಸುತ್ತಿದ್ದಾರೆ. 1996 ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಕನ್ನಡಿಗರು ಆಶೀರ್ವದಿಸಿದ್ದರಿಂದ ಸಾಧ್ಯವಾಯಿತು. ಈಗ
ಮತ್ತೊಮ್ಮೆ  ಆಶೀರ್ವದಿಸಿ  ಜೆಡಿಎಸ್ ಗೆಲ್ಲಿಸಿ. ಗೌಡರ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಗಂಗಾಕಲ್ಯಾಣ, ವೃದ್ಧಾಪ್ಯ ವೇತನ ಮುಂತಾದವುಗಳನ್ನು ನೀಡಿ ಅಹಿಂದ ವರ್ಗದ ಬಗ್ಗೆ ನಿಜವಾದ ಕಾಳಜಿ ತೋರಿದ್ದು ದೇವೇಗೌಡರು ಮಾತ್ರ ಎಂದರು.
 ಶಾಸಕ ಸಿ.ಬಂ.ಸುರೇಶ್‌ಬಾಬು, ಪಕ್ಷದ ಅಭ್ಯರ್ಥಿ ಎ.ಕೃಷ್ಣಪ್ಪ, ಎಂಎಲ್‌ಸಿ ಡಾ. ಹುಲಿನಾಯ್ಕರ್, ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸಿ.ಡಿ.ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement