ಖಾಸಗಿ- ಸಾರಿಗೆ ಸಂಸ್ಥೆ ಚಾಲಕರ ನಡುವೆ ಗಲಾಟೆ
ಪಾವಗಡ: ಬಸ್ ವೇಳೆ ವಿಚಾರವಾಗಿ ಸಾರಿಗೆ ಸಂಸ್ಥೆ ಬಸ್ ಹಾಗೂ ಖಾಸಗಿ ಬಸ್ ಚಾಲಕರ ಮಧ್ಯೆ ಗಲಾಟೆ ನಡೆದು ಖಾಸಗಿ ಬಸ್ ಚಾಲಕನನ್ನು ತೀವ್ರವಾಗಿ ಥಳಿಸಿದ ಘಟನೆ ಮಂಗಳವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪಾವಗಡ ಮತ್ತು ಚಿತ್ರದುರ್ಗ ಮಾರ್ಗವಾಗಿ ಓಡಾಡುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಎಸ್ಆರ್ಇ ಎಂಬ ಖಾಸಗಿ ಬಸ್ ಚಾಲಕರ ಮಧ್ಯೆ ವೇಳೆ ವಿಚಾರದಲ್ಲಿ ಗಲಾಟೆ ನಡೆದು ಕೆಎಸ್ಆರ್ಟಿಸಿ ಬಸ್ ಚಲಿಸುವ ವೇಳೆಯಲ್ಲಿ ಖಾಸಗಿ ಬಸ್ ಓಡಾಡುತ್ತಿರುವುದನ್ನು ವಿರೋಧಿಸಿ ಕೆಎಸ್ಆರ್ಟಿಸಿ ಚಾಲಕ ಖಾಸಗಿ ಬಸ್ ಚಾಲಕ ಸುರೇಶ್ ಎಂಬುವವರನ್ನು ಹಿಗ್ಗಾ ಮುಗ್ಗಾ ಥಳಿಸಿರುವುದಾಗಿ ತಿಳಿದಿದೆ.
ನಂತರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದ ಸರ್ಕಾರಿ ಬಸ್ ಚಾಲಕರು ಕೆಎಸ್ಆರ್ಟಿಸಿ ಸಮಯದಲ್ಲಿ ಚಲಿಸುತ್ತಿರುವ ಎಸ್ಆರ್ಇ ಎಂಬ ಖಾಸಗಿ ಬಸ್ನ್ನು ಡಿಪೋ ಬಳಿ ತರಲು ಸೂಚಿಸಿದ್ದು ಇದಕ್ಕೆ ನಿರಾಕರಿಸಿದ ಕಾರಣ ಖಾಸಗಿ ಮತ್ತು ಕೆಎಸ್ಆರ್ಟಿ ಬಸ್ ಚಾಲಕರ ಮಧ್ಯೆ ಗಲಾಟೆ ನಡೆದು ಖಾಸಗಿ ಬಸ್ಗಳ ಓಡಾಟ ನಿಲ್ಲಿಸಿ ಕೆಎಸ್ಆರ್ಟಿಸಿ ಚಾಲಕರ ದೌರ್ಜನ್ಯದ ವಿರುದ್ಧ ಮುಷ್ಕರದಲ್ಲಿ ನಿರತರಾಗಿ ಪಾವಗಡ ಠಾಣೆಗೆ ದೂರು ಸಲ್ಲಿಸಿದ್ದರು.
ಮಧ್ಯಾಹ್ನ 3ಗಂಟೆಯ ವರೆವಿಗೆ ಖಾಸಗಿ ಬಸ್ಗಳ ನಿಲುಗಡೆಯಿಂದ ಸಾರ್ವಜನಿಕರ ಸಮಸ್ಯೆ ಅರಿತ ಬಸ್ ಮಾಲೀಕರು ಠಾಣೆಗೆ ಆಗಮಿಸಿ ಕೆಎಸ್ಆರ್ಟಿ ಮತ್ತು ಖಾಸಗಿ ಚಾಲಕರನ್ನು ಕರೆಸಿ ರಾಜಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿ ಬಸ್ಗಳ ಓಡಾಟಕ್ಕೆ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಚಾಲಕರು ಖಾಸಗಿ ಚಾಲಕರ ಮೇಲೆ ದೌರ್ಜನ್ಯ ಮತ್ತು ವಿನಾಕಾರಣ ನೀಡುವ ಕಿರುಕುಳವನ್ನು ತಪ್ಪಿಸಿ ರಕ್ಷಣೆ ಕಲ್ಪಿಸುವಂತೆ ಖಾಸಗಿ ಬಸ್ ಚಾಲಕರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ ಮನವಿ ಮಾಡಿದರು.
ಏನಾಯ್ತು?
- ಪಾವಗಡ ಮತ್ತು ಚಿತ್ರದುರ್ಗ ಮಾರ್ಗವಾಗಿ ಓಡಾಡುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಎಸ್ಆರ್ಇ ಎಂಬ ಖಾಸಗಿ ಬಸ್ ಚಾಲಕರ ಮಧ್ಯೆ ಗಲಾಟೆ
- ಕೆಎಸ್ಆರ್ಟಿಸಿ ಸಮಯದಲ್ಲಿ ಚಲಿಸುತ್ತಿರುವ ಎಸ್ಆರ್ಇ ಎಂಬ ಖಾಸಗಿ ಬಸ್ನ್ನು ಡಿಪೋ ಬಳಿ ತರಲು ಸೂಚಿಸಿದ್ದೇ ಗಲಾಟೆಗೆ ಕಾರಣ
- ಕೆಎಸ್ಆರ್ಟಿಸಿ ಚಾಲಕ ಖಾಸಗಿ ಬಸ್ ಚಾಲಕ ಸುರೇಶ್ಗೆ ಹಿಗ್ಗಾ ಮುಗ್ಗಾ ಥಳಿತ: ಆರೋಪ
- ಗಲಾಟೆ ನಡೆದು ಖಾಸಗಿ ಬಸ್ಗಳ ಓಡಾಟ ನಿಲ್ಲಿಸಿ ಕೆಎಸ್ಆರ್ಟಿಸಿ ಚಾಲಕರ ವಿರುದ್ಧ ಮುಷ್ಕರದಲ್ಲಿ ನಿರತರಾಗಿ ಪಾವಗಡ ಠಾಣೆಗೆ ದೂರು ನೀಡಿದ ಖಾಸಗಿ ಬಸ್ ಚಾಲಕರು