ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೋದಿ ನೇತೃತ್ವದ ಬಿಜೆಪಿ ಬೆಂಬಲಿಸಿ

Srinivasa Murthy VN
Updated On : 16 Apr 2014, 1:15 am

ಪಾವಗಡ: ದೇಶದ ಸುಭದ್ರ ಆಡಳಿತಕ್ಕೆ ಮೋದಿ ನೇತೃತ್ವದ ಬಿಜೆಪಿ ಬೆಂಬಲಿಸಿ ಎಂದು ಬಿಜೆಪಿ ಜಿಲ್ಲಾ ಎಸ್‌ಸಿ, ಎಸ್‌ಟಿ ಘಟಕದ ಪ್ರಧಾನ ಕಾರ್ಯದರ್ಶಿ ರಂಗಸಮುದ್ರ ನೆಲಸಿರಿ ಜಯರಾಮ್ ಮನವಿ ಮಾಡಿದ್ದಾರೆ.
ಅವರು ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ ಬಡವರ ಹಿತ ರಕ್ಷಣೆ, ಶಾಂತಿ ಸುವ್ಯವಸ್ಥೆ ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ  ನರೇಂದ್ರ ಪ್ರಧಾನಿ ಆಗಬೇಕು. ಈ ಹಿನ್ನೆಲೆಯಲ್ಲಿ ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲಾ ವರ್ಗದವರು ಬಿಜೆಪಿಗೆ ಮತ ನೀಡಲು ಅವರು ಮನವಿ ಮಾಡಿದರು.
ಮೋದಿ ಪಿಎಂ ಆಗುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಪ್ರವಾಸ ಹಮ್ಮಿಕೊಂಡು ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಜನಾರ್ದನಸ್ವಾಮಿ ಪರ ಮತಯಾಚಿಸಿಲಾಗಿದೆ. ಚಿತ್ರದುರ್ಗ ಲೋಕಸಬಾ ವ್ಯಾಪ್ತಿ ಸೇರಿದಂತೆ ರಾಜ್ಯಾದ್ಯಂತ ಮೋದಿ ನೇತೃತ್ವದ ಬಿಜೆಪಿ ಅಲೆ ವ್ಯಾಪಕವಾಗಿದೆ. ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂದರು.
ಈ ಭಾಗದ ಸಂಸದರು ಹಾಗೂ ಪಕ್ಷದ ಅಭ್ಯರ್ಥಿ ಜನಾರ್ದನಸ್ವಾಮಿ ಅವರು ಸರಳ, ಸಜ್ಜನಿಕೆ ವ್ಯಕ್ತಿ, ಅಲ್ಲದೇ ಬಡವರ ಸಮಸ್ಯೆಗಳನ್ನು ಮುಕ್ತವಾಗಿ ಅಲಿಸಿ ಸಮಸ್ಯೆ ನಿವಾರಣೆಗೆ ಬದ್ಧರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದ್ದ ಜನಾರ್ದನಸ್ವಾಮಿ ಅವರು ಈ ಭಾಗದ ಸಂಸದರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದು ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. ಈ ಭಾಗದ ಜನತೆಗೆ ಕುಡಿಯುವ ನೀರಿನ ಅನುಷ್ಠಾನಕ್ಕೆ ಯಡಿಯೂರಪ್ಪ ಸಿಎಂ ಅವಧಿಯಲ್ಲಿ ಕೋಟ್ಯಂತರ ರು.ಗಳ ವೆಚ್ಚದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಗೊಳಿಸಿದ್ದು ಕಾಮಗಾರಿ ಈಗ ಪ್ರಗತಿಯಲ್ಲಿದೆ. ಏ.17ರಂದು ನಡೆಯುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜನಾರ್ದನಸ್ವಾಮಿ ಅವರು ಗೆದ್ದರೆ ಇನ್ನೂ 2ವರ್ಷಗಳಲ್ಲಿ ನದಿ ಮೂಲದ ಕುಡಿಯುವ ನೀರು ಪಾವಗಡಕ್ಕೆ ಸರಬರಾಜು ಆಗಲಿದೆ ಎಂದರು. ರೇಲ್ವೆ ಯೋಜನೆ, ವಿಮಾನ ಘಟಕ ಬೃಹತ್ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಈ ಭಾಗದಲ್ಲಿ ಜನಾರ್ದನಸ್ವಾಮಿ ಅವರು ಅನುಷ್ಠಾನ ಮಾಡಿದ ಜನಪರ ಕಾರ್ಯಕ್ರಮಗಳನ್ನು ವಿವರಿಸಿದರು. ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಹಾಗೂ ಪಕ್ಷದ ತಾ.ಅಧ್ಯಕ್ಷ ಎಸ್.ಎನ್. ಮುರಳೀಧರ್ ಹಾಗೂ ಮುಖಂಡ ಶಿವಕುಮಾರ್ ಸಾಕೇಲ್ ನೇತೃತ್ವದಲ್ಲಿ ಬಿಜೆಪಿ ಸದೃಢವಾಗಿದೆ. ದೇಶ ಪ್ರೇಮ ಮತ್ತು ಜನಪರ ಕಾಳಜಿಯುಳ್ಳ ಮೋದಿ ಅವರನ್ನು ಬೆಂಬಲಿಸುವ ಮೂಲಕ ಚುನಾವಣೆಯಲ್ಲಿ ಬಿಜೆಪಿ ಪರ ಮತ ನೀಡುವಂತೆ ಎಸ್‌ಸಿ, ಎಸ್ಟಿ ಹಾಗೂ ಇತರೆ ಎಲ್ಲಾ ವರ್ಗದ ಮತದಾರರಲ್ಲಿ ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಯುವ ಮುಖಂಡ ರಂಗಸಮುದ್ರ ಮಹಾಲಿಂಗಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement