ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ಥಳೀಯರಿಗೇ ಮತ ನೀಡಿ

Srinivasa Murthy VN
Updated On : 16 Apr 2014, 1:15 am

ಶಿರಾ: ರಾಜ್ಯದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಆಭಿವೃದ್ಧಿಯಲ್ಲಿ ತೀರ ಹಿಂದುಳಿದಿದ್ದು,  ಸರ್ಕಾರ ಕೂಡ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ಪ್ರಮುಖ ಕಾರಣ ಸಂಸದರ ಸ್ಥಾನಕ್ಕೆ  ಸ್ಥಳಿಯ ಆಭ್ಯರ್ಥಿಗೆ  ಆಯ್ಕೆ ಮಾಡದಿರುವುದು.   ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ ಸ್ಥಳಿಯರಿಗೆ ಟಿಕೆಟ್ ನೀಡಿದ್ದು, ಸರ್ಕಾರದ ಪೊಳ್ಳು ಭರವಸೆ ಮತ್ತು ಹಣದ ಅಮಿಷಕ್ಕೆ ಮತದಾರರು ಬಲಿಯಾಗದೆ ಜಾತ್ಯತೀತ ಜನತಾದಳ ಬೆಂಬಲಿಸುವಂತೆ  ಮಾಜಿ ಸಚಿವ ಬಿ.ಸತ್ಯನಾರಾಯಣ ಮತದಾರರಲ್ಲಿ ಮನವಿ ಮಾಡಿದರು.
ಅವರು ಶಿರಾ ತಾಲೂಕಿನ ಉದ್ದರಾಮನಹಳ್ಳಿ, ಹೆಂದೊರೆ, ಯಾದಲಡಕು ಗ್ರಾಮಗಳಲ್ಲಿ ಚಿತ್ರದುರ್ಗ ಲೋಕಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಪರ ಪ್ರಚಾರ ನಡೆಸಿ ಮಾತನಾಡಿದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ  ಸ್ಪರ್ಧಿಸಿ ಗೆದ್ದ ಸಚಿವ ಟಿ.ಬಿ.ಜಯಚಂದ್ರ ನನ್ನನ್ನು ಗೆಲ್ಲಿಸಿದರೆ ಶಿರಾ ಕ್ಷೇತ್ರವನ್ನು   ಆಭಿವೃದ್ಧಿಯಲ್ಲಿ ರಾಜ್ಯದಲ್ಲಿಯೆ  ಮಾದರಿ ಕ್ಷೇತ್ರ ಮಾಡಿ, ಮೂರೆ ತಿಂಗಳಲ್ಲಿ  ತಾಲೂಕಿನ ಕೆರೆಗೆ ಹೇಮಾವತಿ ನೀರು ತುಂಬಿಸುವುದರ ಜೊತೆಗೆ ಮದಲೂರು ಕೆರೆ ಭರ್ತಿ ಮಾಡುತ್ತೇನೆ ಎಂಬ ಭರವಸೆ ಹುಸಿಯಾಗಿದ್ದು, ಇಂತಹವರಿಗೆ ಬುದ್ಧಿ ಕಲಿಸಲು ಕಾಂಗ್ರೆಸ್‌ಅನ್ನು ತಿರಸ್ಕರಿಸಿ, ಈ ಭಾರಿ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು.
ತಾಲೂಕು ಜೆಡಿಎಸ್ ಆಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ, ರಚನೆ ಯಾಗುವ ನೂತನ ಸರ್ಕಾರದಲ್ಲಿ ತೃತಿಯ ರಂಗ ಸೇರಿರುವ ಪಕ್ಷಗಳ ಬೆಂಬಲ ಅವಶ್ಯಕವಾಗಿದ್ದು ಜೆಡಿಎಸ್ ರಾಷ್ಟ್ರ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ, ಆದ್ದರಿಂದ ದೇವೆಗೌಡರಿಗೆ
ಶಕ್ತಿ ತುಂಬುವ ಉದ್ದೇಶದಿಂದ, ದೇಶಕ್ಕೆ ಜಾತ್ಯತಿತ ನಿಲುವಿನ ವ್ಯಕ್ತಿಯ ಅವಶ್ಯಕತೆ ಇದ್ದು ಮತದಾರರು ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿದರು.
ಮುಖಂಡರಾದ ಸಿದ್ದೇಶ್ವರಪ್ಪ, ಹೊಸಹಳ್ಳಿ ರಾಮಚಂದ್ರಪ್ಪ, ಕ್ಯಾದಿಗುಂಟೆ ತಿಪ್ಪೇಸ್ವಾಮಿ, ಪಾಂಡುರಂಗಯ್ಯ,  ಚಂದ್ರಶೇಖರ್, ಮಂಜುನಾಥಗೌಡ, ಮದ್ದಕ್ಕನಹಳ್ಳಿ ತಿಪ್ಪೇಸ್ವಾಮಿ, ಕಿಟ್ಟಿ, ಪ್ರಕಾಶ್, ಉಗ್ರನರಸಿಂಹಯ್ಯ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement