ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಲೆಮಾರಿಗಳಿಗೂ ಸಿಕ್ಕಿತು ಮತ ಚಲಾವಣೆ ಹಕ್ಕು

Srinivasa Murthy VN
Updated On : 17 Apr 2014, 1:03 am

ತುಮಕೂರು: ಊರೂರು ತಿರುಗಾಡುವ ಅಲೆಮಾರಿ ಸಮುದಾಯದವರಿಗೂ ಈ ಬಾರಿ ಮತದಾನದ ಹಕ್ಕು ಲಭಿಸಿದೆ.
ಅನಕ್ಷರಸ್ಥೆ ಹಂದಿಜೋಗಿ ರಾಮಕ್ಕ ಅವರ ಪ್ರಯತ್ನದ ಫಲವಾಗಿ ತುಮಕೂರಿನ 45 ಅಲೆಮಾರಿ ಸಮುದಾಯದವರಿಗೆ ಎಪಿಕ್ ಕಾರ್ಡ್ ಸಿಕ್ಕಿದ್ದು ಮೊದಲ ಬಾರಿಗೆ ಮತದಾನ ಮಾಡಲು ಮುಂದಾಗಿದ್ದಾರೆ.
ಗೊಂದಳಿ, ಹೆಳವ, ದೊಂಬಿದಾಸ, ಬೈಲಪತ್ತಾರ್, ಪಿಸಾಡಿ, ಕಂಜಾರಬಟ್ಟ, ಸಿಕ್ಕಲಿಗಾರ, ಸೋಲಿಗ, ದರವೇಶಿ, ಪಿಂಜಾರ, ಮಂಡರು, ಕರಡಿಕಲಂದರ್, ಮಾದರಿ ಹಾವಾಡಿಗ, ದಕ್ಕಲಿಗರು, ರಾಜಗೊಂಡ, ಬುಡುಗಜಂಗಮ, ಸುಡುಗಾಡು ಸಿದ್ಧ, ಹಿಂದಿಜೋಗಿ, ಚನ್ನದಾಸರು, ಶಿಳ್ಳೇಕ್ಯಾತ, ಕೊರಮ, ಕೊರಚ, ಗೋಸಂಗಿ, ಗಂಟಿಚೋರ್, ದೊಂಬರು, ಗೊಲ್ಲಸಾಯಿ, ಹಕ್ಕಿ ಪಿಕ್ಕಿ, ಪಾರ್ದಿ, ಡುಂಗ್ರಿ ಘರಾಸಿಯ, ಸಿಂದೋಳ್ಳ, ಚಪ್ಪರ್ ಚಾಂದ್, ಮಾಂಗ್ ಗಾರುಡಿ, ಜೋಖಗಿ, ಉರುಳಿಗರು, ಪರ್ವತಯ್ಯ ಮುಂತಾದ ಅಲೆಮಾರಿ ಸಮುದಾಯವರಿಗೆ ಈ ಬಾರಿ ಮತದಾನ ಹಕ್ಕು ಲಭಿಸಿದೆ.
ಊರಿಂದ ಊರಿಗೆ ತಿರುಗಾಡುವ ಇವರಿಗೆ ನಿಶ್ಚಿತ ವಿಳಾಸವೇ ಇರಲಿಲ್ಲ. ಇಂತಹವರನ್ನು ಗುರುತಿಸಿ ಒಂದು ಕಡೆ ನೆಲೆ ನಿಲ್ಲುವಂತ ರಾಮಕ್ಕ ಮಾಡಿದ್ದಾರೆ. ಈ ಸಲ ಮೊದಲ ಬಾರಿಗೆ ಇವರು ಮತದಾನ ಮಾಡುವ ಖುಷಿಯಲಿದ್ದಾರೆ.

ಚುನಾವಣೆ: ಶಾಂತಿಯುತ ಮತದಾನಕ್ಕೆ ಬಿಗಿ ಭದ್ರತೆ
ಪಾವಗಡ: ಗುರುವಾರ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನಕ್ಕೆ  ಬಿಗಿ ಭದ್ರತೆ ಏರ್ಪಡಿಸಿರುವುದಾಗಿ ಸಹಾಯಕ ಚುನಾವಣೆ ಅಧಿಕಾರಿ ಅಲ್ತಾಪ್ ಪಾಷ ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ನಿಯಮನುಸಾರ 17ರಂದು ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನದ್ಯಂತ ಮತಘಟ್ಟೆಗಳಲ್ಲಿ ಮತದಾನಕ್ಕೆ  ವ್ಯವಸ್ಥೆ ಕಲ್ಪಿಸಿದ್ದು ಮತಘಟ್ಟೆಗಳ ಸುತ್ತ ಬಿಗಿ ಪೊಲೀಸ್ ಬಂದೋ ಬಸ್ತು ಏರ್ಪಾಡಿಸಿರುವುದಾಗಿ ಅವರು ತಿಳಿಸಿದ್ದಾರೆ.
    ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತ ಘಟ್ಟೆಗಳೆಂದು ವಿಂಗಡಿಸಿ ತಾಲೂಕಿನಾದ್ಯಂತ ಒಟ್ಟು 246 ಮತಘಟ್ಟೆಗಳು ಸ್ಥಾಪಿಸಿದ್ದು 260 ಮಂದಿ ಪಿಆರ್‌ಓ ಮತ್ತು 260 ಮಂದಿ ಎಆರ್‌ಒಗಳು ಸೇರಿದಂತೆ ಒಟ್ಟು 1084ಮಂದಿ ನೌಕರರ ಸಿಬ್ಬಂದಿ ಚುನಾವಣೆ ಕಾರ್ಯಕ್ಕೆ ನಿಯೋಜಿಸಿರುವುದಾಗಿ ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement