ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗುರು ಅಂದ್ರೆ ಓಯಸಿಸ್

Srinivasa Murthy VN
Updated On : 17 Apr 2014, 1:03 am

ಕ.ಪ್ರ.ವಾರ್ತೆ ತುಮಕೂರು ಏ.16
ಕಾಲೇಜುಗಳಲ್ಲಿ ಬೋಧನೆ ಮಾಡುವ ಉಪನ್ಯಾಸಕರು ಮರಳುಗಾಡಿನಲ್ಲಿ ಸಿಗುವ ಓಯಸಿಸ್ ಇದ್ದಂತೆ. ವಿದ್ಯಾರ್ಥಿಗಳು ತಮ್ಮ ಹಾದಿಯ ಜ್ಞಾನದಾಹ ಇಂಗಿಸಿಕೊಳ್ಳುವಲ್ಲಿ ಉಪನ್ಯಾಸದ ಉಪಯೋಗಗಳನ್ನು ಪಡೆದುಕೊಳ್ಳಬೇಕು ಎಂದು ತುಮಕೂರು ವಿವಿ ಉಪಕುಲಪತಿ ಡಾ. ಎ.ಎಚ್. ರಾಜಾಸಾಬ್ ಅಭಿಪ್ರಾಯಪಟ್ಟರು.
ಅವರು ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವಿಭಾಗದ ವತಿಯಿಂದ ಆಯೋಜಿಸಿದ್ದ
ವಿ-ಟೆಡ್ ಕಾರ್ಯಕ್ರಮದಲ್ಲಿ  ವೆಬ್‌ಸೈಟ್ ಲಾಂಚಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿ ಓದಿಸುವುದು ಕಷ್ಟವಾಗಿರುವಾಗ ಸಂಸ್ಥೆ, ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳನ್ನು ನಂಬಿ ಮನೆಗಳಿಗೆ ಲ್ಯಾಪ್‌ಟಾಪ್‌ಗಳನ್ನು ಪುಸ್ತಕಗಳಂತೆ ವಿತರಿಸಿ ಶಿಕ್ಷಣದ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಇಂದಿನ ಬಿಸಿಎ ವಿದ್ಯಾರ್ಥಿಗಳಿಗೆ ವೆಬ್‌ಸೈಟ್ ಬಗೆಗಿನ ಅರಿವು ಅಗತ್ಯವಾಗಿದ್ದು ಉಪನ್ಯಾಸಕರು ತುಂಬಾ ಆಕ್ಟೀವ್ ಆಗಿ ವಿಷಯ ಮನವರಿಕೆ ಮಾಡಿಕೊಟ್ಟು ಅವರನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುತ್ತಿರುವುದು ಸಂತೋಷ ತರುವಂತದ್ದು ಎಂದರು.
ಪ್ರಯೋಜನಕಾರಿ: 6ನೇ ಸೆಮ್ ಬಿಸಿಎ ವಿದ್ಯಾರ್ಥಿಗಳೇ ತಯಾರಿಸಿರುವ ಈ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಸೆಮಿಸ್ಟರ್‌ಗಳು ನೋಟ್ಸ್‌ಗಳು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು, ಸಿಲೆಬಸ್‌ಗಳು, ಬಿಸಿಎ ಕೋರ್ಸ್‌ನ ಇನ್‌ಫರ್‌ಮೇಷನ್ ನೀಡಿರುವುದು ಎಲ್ಲಾ ಸೆಮಿಸ್ಟರ್‌ಗಳು ನೋಟ್ಸ್‌ಗಳು, ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು, ಸಿಲೆಬಸ್‌ಗಳು, ಬಿಸಿಎ ಕೋರ್ಸ್‌ನ ಇನ್‌ಫರ್‌ಮೇಷನ್ ನೀಡಿರುವುದು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾದುದು ಎಂದರು.
ಮುಂದಿನ ದಿನಗಳಲ್ಲಿ ಎಂಸಿಎ, ಎಂಎಸ್ಸಿ ಕೋರ್ಸ್‌ಗಳನ್ನು ಪ್ರಾರಂಭಿಸಿ ಗುಣಮಟ್ಟದ ಸ್ನಾತಕೋತ್ತರ ಶಿಕ್ಷಣವನ್ನು ನೀಡಿ ಎಂದು ಸಲಹೆ ನೀಡಿದರು.
ಬೆಂಗಳೂರಿನ ರೇವ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಎನ್. ರಾಣಾಪ್ರತಾಪ್ ರೆಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ವಿಭಾಗದ್ಲಿ ವಿದ್ಯಾರ್ಥಿಗಳಿಂದಲೇ ವೆಬ್‌ಸೈಟ್‌ಗಳನ್ನು ತಯಾರಿಸಿ ಲೈವ್ ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳೇ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಕೆ.ಬಿ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಿ.ಟಿ. ಗುರುರಾಜ್ ಉಪಸ್ಥಿತರಿದ್ದರು.
ಶಿಲ್ಪಾ ಸ್ವಾಗತಿಸಿ, ಮಧುಪ್ರಿಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತ ವಂದಿಸಿದರು. ರಮ್ಯ ಶ್ರೀ ನಿರೂಪಿಸಿದರು.

ವಿದ್ಯಾರ್ಥಿಗಳು ತಮ್ಮ ಹಾದಿಯ ಜ್ಞಾನದಾಹ ಇಂಗಿಸಿಕೊಳ್ಳುವಲ್ಲಿ ಉಪನ್ಯಾಸದ ಉಪಯೋಗಪಡೆದುಕೊಳ್ಳಬೇಕು.
- ರಾಜಾಸಾಬ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement