ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚುನಾವಣೆಗೆ ನಿಯೋಜಿಸಿದ್ದ ಡಿ ಗ್ರೂಪ್ ನೌಕರ ಗಂಗಯ್ಯ ಸಾವು

Srinivasa Murthy VN
Updated On : 18 Apr 2014, 12:31 pm

ತುರುವೇಕೆರೆ: ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ನಡೆಯಲಿದ್ದ ಲೋಕಸಭಾ ಚುನಾವಣೆಯ ಮತದಾನ ಕೇಂದ್ರದಲ್ಲಿ ಡಿ ಗ್ರೂಪ್ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮ ಸಹಾಯಕ ಗಂಗಯ್ಯ (57) ಹೃದಯಾಘಾತದಿಂದ ನಿಧನರಾದರು.
 ಗಂಗಯ್ಯ ತಾಲ್ಲೂಕಿನ ಬೂವನಹಳ್ಳಿ ಗ್ರಾಮದವರಾಗಿದ್ದು ಇವರು ದಬ್ಬೇಘಟ್ಟ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬುಧವಾರ ರಾತ್ರಿ ಶಾಲೆಯಲ್ಲಿ ಇದ್ದ ವೇಳೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಯಿತು. ಆದರೆ ಆ ವೇಳೆಗಾಗಲೇ ಗಂಗಯ್ಯ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ. ತಹಸೀಲ್ದಾರ್ ಮಾರೇಗೌಡ ತಾತ್ಕಾಲಿಕ ಪರಿಹಾರ ನೀಡಿ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸೂಕ್ತ ಪರಿಹಾರಕ್ಕೆ ಒತ್ತಾಯ: ಚುನಾವಣಾ ಕರ್ತವ್ಯದಲ್ಲಿ ನಿರತವಾಗಿದ್ದ ವೇಳೆ ಮೃತಪಟ್ಟ ಸಿಬ್ಬಂದಿಗೆ ಸೂಕ್ತ ಪರಿಹಾರ ನೀಡಬೇಕು ಎನ್ನುವ ನಿಯಮವಿದೆ. ಅದೇ ಪ್ರಕಾರ ಕರ್ತವ್ಯದ ವೇಳೆಯೇ ಮೃತಪಟ್ಟಿರುವ ಗಂಗಯ್ಯನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ರಾಜ್ಯ ಗ್ರಾಮ ಸಹಾಯಕರ ಸಂಘದ ಗೌರವಾಧ್ಯಕ್ಷ ಪ್ರತಾಪ ಮದಕರಿ, ಜಿಲ್ಲಾ ಅಧ್ಯಕ್ಷ ಲಕ್ಷ್ಮಿನಾರಾಯಣ್, ಹಾಗೂ ತಾಲ್ಲೂಕು ಅಧ್ಯಕ್ಷ ಶಿವಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗ್ರಾಮ ಸಹಾಯಕರ ವಯಸ್ಸನ್ನು ಪರಿಗಣಿಸಿ ಅವರ ಸೂಕ್ತವಾದ ಜವಾಬ್ದಾರಿಯನ್ನು ನೀಡಬೇಕು. ಚುನಾವಣೆ ವೇಳೆ ಅತಿ ಬಾರವಾದ ವಸ್ತುಗಳನ್ನು ಸಹ ಡಿ ಗ್ರೂಪ್ ನೌಕರರು ಎತ್ತಿ ಇಳಿಸುವ ಕಾಯಕ ಮಾಡಬೇಕಿದೆ. ನೌಕರರ ವಯಸ್ಸು ಮತ್ತು ಶಕ್ತಿಯನ್ನು ಅರಿತು ಜವಾಬ್ದಾರಿ ನೀಡುವುದು ಒಳಿತು ಎಂದು ಪ್ರತಾಪ ಮದಕರಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement