ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುರಿ ಹಿಂಡಿನ ಮೇಲೆ ನಾಯಿಗಳ ದಾಳಿ: 4 ಕುರಿ ಸಾವು

Srinivasa Murthy VN
Updated On : 18 Apr 2014, 11:51 am

ತುರುವೇಕೆರೆ: ಕುರಿಗಳ ಹಿಂಡಿನ ಮೇಲೆ 8 ನಾಯಿಗಳು ದಾಳಿ ಮಾಡಿದ ಪರಿಣಾಮ 4 ಕುರಿಗಳು ಸಾವನ್ನಪ್ಪಿರುವ ಘಟನೆ ಸಮೀಪದ ಮುನಿಯೂರು ಗ್ರಾಮದಲ್ಲಿ ನಡೆದಿದೆ.
 ಮುನಿಯೂರಿನ ರಾಮಣ್ಣ, ರಾಜಣ್ಣ ಹಾಗೂ ಅಮಾಸಯ್ಯ ಎಂಬುವವರಿಗೆ ಸೇರಿದ ಕುರಿಗಳ ಮೇಲೆ ನಾಯಿಗಳು ದಾಳಿ ಮಾಡಿವೆ. ಕುರಿಗಳನ್ನು ಮೇಯಿಸುತ್ತಿದ್ದ ಲಕ್ಷ್ಮಮ್ಮ ಎಂಬುವವರ ಮೇಲೂ ಸಹ ಎಗರಿವೆ. ನಾಯಿಯ ಕಡಿತಕ್ಕೆ 4 ಕುರಿಗಳು ಸಾವನ್ನಪ್ಪಿದರೆ, 5 ಕುರಿಗಳಿಗೆ ಕಚ್ಚಿದ ಗಾಯಗಳಾಗಿವೆ. ಸುಮಾರು 50 ಸಾವಿರ ರು. ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ಲಕ್ಷ್ಮಮ್ಮ ಗ್ರಾಮದ ಮೈದಾನದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ದಿಢೀರ್ ಆಗಿ ದಾಳಿ ಮಾಡಿದ ನಾಯಿಗಳು ಎರಡು ಕುರಿಗಳನ್ನು ತಿಂದು ಹಾಕಿದವು ಎಂದು ಹೇಳಲಾಗಿದೆ.
ಕೋಳಿ ಕಸದಿಂದ ಅನಾಹುತ: ಮುನಿಯೂರು ಗ್ರಾಮದ ಆರಂಭದಲ್ಲೇ ಸಿಗುವ ಜಮೀನುಗಳಲ್ಲಿ ಕತ್ತರಿಸಿದ ಕೋಳಿಗಳ ಭಾಗಗಳನ್ನು ಹಾಕಲಾಗುತ್ತದೆ. ಇವುಗಳನ್ನು ತಿಂದು ಅಭ್ಯಾಸವಾಗಿರುವ ನಾಯಿಗಳು ಆಹಾರ ಸಿಗದೇ ಇದ್ದಾಗ ಗ್ರಾಮಗಳಲ್ಲಿರುವ ಕುರಿಗಳು, ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ ಎಂದು ಗ್ರಾಮದ ಮುಖಂಡ ರಾಮಚಂದ್ರು ಆರೋಪಿಸಿದ್ದಾರೆ.
ನಾಯಿಯ ಹಾವಳಿಯನ್ನು ಹಾಗೂ ಕೋಳಿ ಕಸವನ್ನು ಹಾಕುವವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಎಂದು ಹಲವಾರು ಬಾರಿ ಗ್ರಾಮ ಪಂಚಾಯ್ತಿಗೆ ಕೋರಿಕೊಂಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಮಚಂದ್ರಯ್ಯ ಆಪಾದಿಸಿದ್ದಾರೆ. ನಷ್ಟಕ್ಕೆ ಈಡಾಗಿರುವ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದೂ ಸಹ ಅವರು ಒತ್ತಾಯಿಸಿದ್ದಾರೆ.

ಕುರಿ ಮೇಲೆ ಚಿರತೆ ದಾಳಿ
ಹಲಗೂರು: ಸಮೀಪದ ಹಂಡನಹಳ್ಳಿ ಗ್ರಾಮದ ನಿಂಗಮ್ಮ ಎಂಬುವರಿಗೆ ಸೇರಿದ ಒಂದು ಕುರಿ ಮತ್ತು ನಾಲ್ಕು ಕೋಳಿಗಳನ್ನು ಚಿರತೆ ಬಲಿತೆಗದುಕೊಂಡಿದೆ. ಹಲಗೂರಿನಿಂದ 3 ಕಿ.ಮೀ ದೂರದ ಹಂಡನಹಳ್ಳಿ ಗ್ರಾಮ ಸಮೀಪದ ಕಲ್ಲಿನಗುಡ್ಡೆಯಲ್ಲಿ ಹಲವು ದಿನಗಳಿಂದ ಚಿರತೆ ವಾಸವಿದ್ದು, ರಾತ್ರಿ ವೇಳೆ ಗ್ರಾಮಕ್ಕೆ ಬಂದು ಕುರಿ ಕೋಳಿಗಳನ್ನು ಅಪಹರಿಸಿ ಅಪಾರ ನಷ್ಟ ಉಂಟು ಮಾಡಿದೆ. ಈ ಸಂಬಂಧ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement