ನಿರುದ್ಯೋಗಿಗಳ ಬಗ್ಗೆ ಎಲ್ಲ ಪಕ್ಷಗಳಿಗೂ ನಿರಾಸಕ್ತಿ
ತುಮಕೂರು: ನಿರುದ್ಯೋಗಿಗಳ ಬಗ್ಗೆ ಯಾವ ರಾಜಕೀಯ ಪಕ್ಷಕ್ಕೂ ಆಸಕ್ತಿಯಿಲ್ಲ. ಅವರ ಸಮಸ್ಯೆ ಬಗೆಹರಿಸುವ ಕಾಳಜಿಯಿಲ್ಲ ಎಂದು ಅಖಿಲ ಭಾರತ ಪದವಿ ಮತ್ತು ಸ್ನಾತಕೋತ್ತರ ಪದವಿಧರರ ಒಕ್ಕೂಟದ ರಾಜ್ಯಾಧ್ಯಕ್ಷ ಸುಭಾಸ್ ಚಂದ್ರ ಭೋಸ್ ವಿಷಾದಿಸಿದರು.
ತುಮಕೂರಿನಲ್ಲಿ ಎಐವೈಎಫ್ ಹಾಗೂ ಎಐಎಸ್ಎಫ್ ಸಂಯುಕ್ತಾಶ್ರಯದಲ್ಲಿ ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭಾರತದಲ್ಲಿ ಸುಮಾರು 15 ಕೋಟಿ ಪದವೀಧರ ನೀರುದ್ಯೋಗಿಗಳಿದ್ದು, ರಾಜ್ಯದಲ್ಲಿ ಸುಮಾರು 5.66 ಲಕ್ಷ ಪದವೀಧರರಿದ್ದಾರೆ. ವಿಧಾನ ಮಂಡಲ ಹಾಗೂ ಲೋಕಸಭೆ ಅಧಿವೇಶನದಲ್ಲಿ ನೀರುದ್ಯೋಗಿ ಯುವಕರ ಬಗ್ಗೆ ಯಾವೂಬ್ಬ ಶಾಸಕರರು, ಸಂಸದರು ಚರ್ಚಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಲಿ ಇರುವ 1.86 ಲಕ್ಷ ಸರ್ಕಾರಿ ಹುದ್ದೆಗಳನ್ನು ತುಂಬಲು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ನೀರುದ್ಯೋಗಿಗಳು ಸಂಘಟಿತರಾಗಿ ಹೋರಾಟಕ್ಕೆ ತಯಾರಾಗುವಂತೆ ಕರೆ ನೀಡಿದರು. ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಸುಮಾರು 3.66 ಕೋಟಿ ಹುದ್ದೆಗಳು ಖಾಲಿ ಇವೆ. ಆಳುವ ಸರ್ಕಾರಗಳು ನೀರುದ್ಯೋಗಿ ಯುವಕರನ್ನು ಕಡೆಗಣಿಸದೆ, ಅರ್ಹತೆಗೆ ತಕ್ಕಂತಹ ಉದ್ಯೋಗ ಕಲ್ಪಿಸಬೇಕು. ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಐಎಎಸ್. ಮತ್ತು ಕೆಎಎಸ್ ಕೋಚಿಂಗ್ ಸೆಂಟರ್ ಪ್ರಾರಂಭಿಸಬೇಕು. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ, ಉಪನ್ಯಾಸಕರಿಗೆ, ಮಾಸಿಕವಾಗಿ ಕನಿಷ್ಠ ರು. 10 ಸಾವಿರ ವೇತನವನ್ನು ನಿಗದಿಗೊಳಿಸಿ ಆದೇಶ ಹೊರಡಿಸಬೇಕು.
ವಯೋವಾನ ಮೀರುತ್ತಿರುವ ಪದವೀಧರರಿಗೆ ಕನಿಷ್ಠ ರು. 2000 ಅನ್ನು ನೀರುದ್ಯೋಗಿ ಭತ್ಯೆ ನೀಡಬೇಕು, ಇಲ್ಲವೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಬೇಕು. ಕೆಎಎಸ್ ಮತ್ತು ಪಿಎಸ್ಐ ಪೋಲಿಸ್ ನೇಮಕವನ್ನು ಸಿಇಟಿಯ ಮೂಲಕ ಮಾಡಬೇಕು. ಅತಿಥಿ ಉಪಾನ್ಯಾಸಕರನ್ನು ಕಾಯಂ ಗೊಳಿಸಬೇಕು. ಮುರಾರ್ಜಿ ದೇಸಾಯಿ ಶಾಲೆಗಳ ಶಿಕ್ಷಕರ ಸೇವೆ ಕಾಯಂ ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಐಎಸ್ಎಫ್ ರಾಜ್ಯ ಮುಖಂಡ ಸಂತೋಷ್ ಹಾಗೂ ಕೆ.ಎಸ್. ಜನಾರ್ದನ್, ಚಿನ್ನಪ್ಪ ಮತ್ತು ವಾಸುದೇವ್ಕುಮಾರ್ ಉಪಸ್ಥಿತರಿದ್ದರು.