ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ

Srinivasa Murthy VN
Updated On : 4 Aug 2014, 12:03 pm

ತುಮಕೂರು: ತುಮಕೂರಿನ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡುವುದಾಗಿ   ಕ್ಷೇತ್ರದ ಶಾಸಕ ಡಾ. ರಫೀಕ್ ಅಹಮದ್ ಭರವಸೆ ನೀಡಿದರು.
 ಅವರು ತುಮಕೂರು- ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ತುಮಕೂರು-ಬೆಂಗಳೂರು ಸ್ಪೆಷಲ್ ಎಕ್ಸ್‌ಪ್ರೆಸ್ ರೈಲಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಪಕ್ಷಾತೀತವಾಗಿ ಪ್ರಯತ್ನ: ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ತುಮಕೂರು ಜಿಲ್ಲೆಗೆ ಆಗಬೇಕಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಪಕ್ಷಾತೀತವಾಗಿ ಪ್ರಯತ್ನಿಸುವ ಅಗತ್ಯವನ್ನು ಪ್ರತಿಪಾದಿಸಿದರು.
 ರೈಲು ಪ್ರಯಾಣಿಕರ ಮಕ್ಕಳನ್ನು ಪುರಸ್ಕರಿಸಿದ ನೈಋತ್ಯ ರೈಲ್ವೆ ವಲಯದ ಎಡಿಆರ್‌ಎಂ ಸುನಂದ ಅರುಳ್ ಮಾತನಾಡಿ, ರೈಲ್ವೇ ನಿಲ್ದಾಣವನ್ನು ಕಸದ ತೊಟ್ಟಿ ಮಾಡುತ್ತಿರುವವರಲ್ಲಿ ಜಾಗೃತಿ ಮೂಡಿಸಲು ಇಲಾಖೆ ವತಿಯಿಂದ ಅಭಿಯಾನ ಹಮ್ಮಿಕೊಳ್ಳಲಾಗುವುದು. ಇದಕ್ಕೆ ನಗರದ ನಾಗರಿಕರ ಸಹಕಾರ ಅಗತ್ಯವಿದೆ ಎಂದರು.
ರೈಲಿನ ಹುಟ್ಟು ಹಬ್ಬ: ಬೆಳ್ಳಿ ಬ್ಲಡ್ ಬ್ಯಾಂಕಿನ ಮುಖ್ಯಸ್ಥ ಬೆಳ್ಳಿ ಲೋಕೇಶ್ ರಕ್ತದಾನದ ಮಹತ್ವ ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆ ಕಾರ್ಯದರ್ಶಿ ಕರಣಂ ರಮೇಶ್, ರೈಲಿನ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿರುವುದು ಭಾರತೀಯ ಇತಿಹಾತಿಹಾಸದಲ್ಲೇ ಪ್ರಥಮ ಎಂದರು.
 ಅಧ್ಯಕ್ಷತೆ ವಹಿಸಿದ್ದ ವೇದಿಕೆ ಅಧ್ಯಕ್ಷೆ ಬಾ. ಹ. ರಮಾಕುಮಾರಿ ತುಮಕೂರು ರೈಲ್ವೆ ಪ್ರಯಾಣಿಕರಿಗೆ ಇಲಾಖೆಯಿಂದ ಆಗಬೇಕಿರುವ ಕೆಲಸಗಳನ್ನು ಬೇಗನೇ ಪೂರ್ಣಗೊಳಿಸಲು ಮನವಿ ಮಾಡಿದರು.
 ಈ ಸಂದರ್ಭದಲ್ಲಿ ರಘೋತ್ತಮ ರಾವ್ ಅವರನ್ನು ಅಭಿನಂದಿಸಲಾಯಿತು. ವೇದಿಕೆ ಉಪಾಧ್ಯಕ್ಷ ಮಾಧವಮೂರ್ತಿ, ತುಮಕೂರು ಜಿಲ್ಲೆಯಲ್ಲಿ ರೈಲ್ವೇ ಇಲಾಖೆಯಿಂದ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು.
 ಮಾಸ್ಟರ್ ಸಂಜನ್ ಪ್ರಾರ್ಥಿಸಿದರು. ಸಿ. ನಾಗರಾಜ್ ಸ್ವಾಗತಿಸಿದರು. ರವಿಶಂಕರ್ ಮತ್ತು ಪರಮೇಶ್ವರ್ ಪ್ರತಿಭಾವಂತ ವಿದ್ಯಾರ್ಥಿಗಳ ಪರಿಚಯ ಮಾಡಿದರು. ರಾಜಶೇಖರ್ ನಿರೂಪಿಸಿ ಉಪಾಧ್ಯಕ್ಷ ಬಾಲಾಜಿ ವಂದಿಸಿದರು.
26 ಯೂನಿಟ್ ರಕ್ತ ಸಂಗ್ರಹ: ವೇದಿಕೆ ವತಿಯಿಂದ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಲಾದ 26 ಯೂನಿಟ್ ರಕ್ತವನ್ನು ಬೆಳ್ಳಿ ರಕ್ತ ನಿಧಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ಅಲ್ಲದೆ, ರಕ್ತದಾನಿಗಳಿ ಅಭಿನಂದನಾ ಪತ್ರ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement