ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆಧುನಿಕ ಯುಗದಲ್ಲೂ ಮೂಢನಂಬಿಕೆ: ವಿಷಾದ

Srinivasa Murthy VN
Updated On : 9 Feb 2014, 11:14 am

ಚಿಕ್ಕನಾಯಕನಹಳ್ಳಿ: ಆಧುನಿಕ ಯುಗದಲ್ಲಿರುವ ನಾವು ಮೂಢನಂಬಿಕೆಗೆ ಬಲಿಯಾಗಿ ನಮ್ಮ  ಬದುಕಿನ ಅವಿಭಾಜ್ಯ ಜಾನುವಾರುಗಳನ್ನು ಬಲಿಗೊಡುತ್ತಿರುವುದು ವಿಷಾದನೀಯ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ನುಡಿದರು.
ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಪಶುಸಂಗೋಪನಾ ಇಲಾಖೆ ಹಮ್ಮಿಕೊಂಡಿದ್ದ ಕಾಲು ಬಾಯಿರೋಗದಿಂದ ರಾಸುಗಳನ್ನು ಕಳೆದುಕೊಂಡ ಸಂತ್ರಸ್ಥ ರೈತರಿಗೆ ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮದ  ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಕಾಲುಬಾಯಿ ಜ್ವರ ಜಾನುವಾರುಗಳಿಗೆ ಬರುವ ಮಾರಣಾಂತಿಕ ರೋಗ. ಈ ರೋಗ ಎಲ್ಲೆಡೆ ವ್ಯಾಪಿಸಿದ್ದು,ಇದನ್ನು ಕೊನೆಗಾಣಿಸಲು ಪಲ್ಸ್ ಪೋಲಿಯೊ ರೀತಿಯಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಜಾರಿಗೊಳಿಸುವ ಆಲೋಚನೆಯಲ್ಲಿ ಸರ್ಕಾರವಿದೆ. ಇಂದು ನೀಡುತ್ತಿರುವ ಪರಿಹಾರ ಕೇವಲ ರೈತರ ಸಮಾಧಾನಕ್ಕಾಗಿ ಎಂದರು. ನಮ್ಮ ರಾಜ್ಯದಲ್ಲಿ 14000ಕ್ಕೂ ಹೆಚ್ಚು ರಾಸುಗಳು ಕಾಲುಬಾಯಿ ರೋಗದಿಂದ ಮೃತಪ್ಟಟಿವೆ. ಈ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನದಿಂದ 27 ಕೋಟಿ ರು.ಗಳನ್ನು ರೈತರಿಗೆ ಪರಿಹಾರಕ್ಕಾಗಿ ಒದಗಿಸಿದ್ದೇವೆ. ಈಗಾಗಲೇ 10 ಕೋಟಿ ಬಿಡುಗಡೆಯಾಗಿದ್ದು, ಬಾಕಿ ಹಣವ್ನನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.
ಹೈನುಗಾರಿಕೆ ಅಭಿವೃದ್ಧಿ ಪಡಿಸಲು ಹಾಲಿನ ಪ್ರೋತ್ಸಾಹ ಧನವನ್ನು ವಾರ್ಷಿಕ 800 ಕೋಟಿಗಳಿಗೇರಿಸಿದೆ. ಶಾಲಾಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮಕ್ಕೆ  400 ಕೋಟಿ ರು.ಗಳನ್ನು ಮೀಸಲಿಡಲಾಗಿದೆ ಎಂದರು.
ಅಧ್ಯಕ್ಷತೆಯನ್ನು ಶಾಸಕ ಸಿ.ಬಿ. ಸುರೇಶ್‌ಬಾಬು ವಹಿಸಿದ್ದರು. ಪರಿಹಾರ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಕಾಮಾಕ್ಷಮ್ಮ, ತಾಪಂ ಅಧ್ಯಕ್ಷ ಕೆಂಕೆರೆ ನವೀನ್, ಜಿಪಂ ಉಪಾಧ್ಯಕ್ಷೆ ಜಾನಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಪುರಸಭಾ ಸದಸ್ಯರಾದ ರವಿಚಂದ್ರ, ಮಲ್ಲೇಶಯ್ಯ, ತಾಪಂ ಸದಸ್ಯೆ ಹೇಮಾವತಿ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement