ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೈಹಿಕ ಬೆಳೆವಣಿಗೆಗೆ ಈಜು ಸಹಕಾರಿ

Srinivasa Murthy VN
Updated On : 11 Feb 2014, 12:17 pm

ತುರುವೇಕೆರೆ: ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳೆವಣಿಗೆಗೆ ಈಜು ಸಹಕಾರಿಯಾಗಲಿದೆ ಎಂದು ಈಜು ತರಬೇತುದಾರ ದಂಡಿನಶಿವರ ತಿಮ್ಮೇಗೌಡ ಹೇಳಿದರು.
ಪಟ್ಟಣದ ಇಂಡಿಯನ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಶಾಲೆಯಿಂದ ನಿರ್ಮಿಸಿರುವ ಈಜು ಕೊಳದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಕ್ಕಳಿಗೆ ತರಬೇತಿ ನೀಡಿ ಮಾತನಾಡುತ್ತಿದ್ದರು.  ಸರ್ಕಾರಗಳು ಕೇವಲ ಕ್ರಿಕೆಟ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಬದಲಿಗೆ ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಅಡಕವಾಗಿರುವ ವಿವಿಧ ಗ್ರಾಮೀಣ ಕ್ರೀಡೆಗಳಿಗೂ ಆದ್ಯತೆ ನೀಡಿ ಪ್ರೋತ್ಸಾಹ ನೀಡಬೇಕು ಎಂದರು. ರಾಜ್ಯದಲ್ಲಿ ಈಜಿಗೆ ಹೆಚ್ಚಿನ
ಪ್ರೋತ್ಸಾಹ ದೊರೆಯುತ್ತಿಲ್ಲ. ಕೇವಲ ನಗರ ಪ್ರದೇಶಗಲ್ಲಿ ಮಾತ್ರ ಶ್ರೀಮಂತರ ಮಕ್ಕಳಿಗಾಗಿ ಈಜುಕೊಳಗಳ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಬಡ ಮಕ್ಕಳ ಪ್ರವೇಶ ನಿಷಿದ್ಧವಾಗಿರುತ್ತದೆ.
ಬಡವರಲ್ಲೂ  ಪ್ರತಿಭಾನ್ವಿತರಿರುತ್ತಾರೆ ಎಂಬುದಕ್ಕೆ ತಾವೇ ಕಳೆದ ಒಂದೆರಡು ವರ್ಷದಿಂದ ನಡೆಸುತ್ತಿರುವ ಉಚಿತ ಈಜು  ತರಬೇತಿಯಿಂದ ತಿಳಿದುಬಂದಿದೆ ಎಂದು ತಿಮ್ಮೇಗೌಡ ಹೇಳಿದರು.
ಶಾಲೆಯ ಮುಖ್ಯಸ್ಥ ಡಾ.ರುದ್ರಯ್ಯ ಎಂ. ಹಿರೇಮಠ್ ಮಾತನಾಡಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಅಗತ್ಯ. ಹಿಂದೆ ಗುರು, ಮುಂದೆ ಗುರಿ ಇದ್ದರೆ ಸಾಧನೆ ಮಾಡುವುದು ಅಸಾಧ್ಯವೇನಲ್ಲ. ಇಂದಿನ ಮಕ್ಕಳಿಗೆ ಎಲ್ಲಾ ಕ್ಷೇತ್ರಗಳ ಪರಿಚಯ ಮಾಡಿಸುವುದು ಅಗತ್ಯವಾಗಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಆಸಕ್ತಿ, ಭಾವನೆಗಳಿಗೆ ಬೆಲೆ ನೀಡಬೇಕು ಎಂದರು. ಸಂಸ್ಖೆಯ ಗುರುಚನ್ನಬಸವಯ್ಯ, ರಾಜೀವಲೋಚನ ಭಾಗವಹಿಸಿದ್ದರು. ಈಜುಕೊಳವನ್ನು ಕಾಡಸಿದ್ದೇಶ್ವರ ಮಠದ ಆನಂದಶಾಸ್ತ್ರಿ ಗಂಗಾ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದರು.
ಶಾಲಾ ಪ್ರಾಂಶುಪಾಲರಾದ ಪುಷ್ಪಾ ಎಸ್. ಪಾಟೀಲ್ ಸ್ವಾಗತಿಸಿದರು. ಶೋಭಾರಾಣಿ ನಿರೂಪಿಸಿದರು. ಶಶಿಕಲಾ ಹಿರೇಮಠ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement