ನಿಯಮ ಉಲ್ಲಂಘನೆ, 76,864 ಪ್ರಕರಣ ದಾಖಲು
ತುಮಕೂರು: ಕಳೆದ ಜನವರಿ 2013 ರಿಂದ ಡಿಸೆಂಬರ್ 13 ರವರೆಗೆ ವಿವಿಧ ನಿಯಮ ಉಲ್ಲಂಘಿಸಿದ (ಐಎಂವಿ ಪ್ರಕರಣಗಳು) ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ 76,864 ಪ್ರಕರಣಗಳು ದಾಖಲಾಗಿದ್ದು, 1,81,89,400 ರು. ದಂಡ ವಸೂಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ. ದಾಖಲಾದ ವಿವಿಧ ಪ್ರಕರಣಗಳು ಕೆಳಗಿನಂತಿವೆ.
ಮದ್ಯಪಾನ ಮಾಡಿ ವಾಹನ ಓಡಿಸಿದ ಪ್ರಕರಣಗಳು, 2079, ವಸೂಲಾದ ದಂಡ 25,34,600 ರು. ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಓಡಿಸಿದ ಪ್ರಕರಣಗಳು 3944, ವಸೂಲಾದ ದಂಡ 12,45,800. ರು. ವೇಗ ಮಿತಿ ಉಲ್ಲಂಘನೆ ಪ್ರಕರಣಗಳು, 6472, ದಂಡ ವಸೂಲಿ 20,18,800 ರು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿರುವ ಬಗ್ಗೆ ಅಥವಾ ವಾಹನ ನಿಲುಗಡೆ ನಿಯಮ ಉಲ್ಲಂಘನೆ, 7414 ಪ್ರಕರಣಗಳು, ದಂಡ ವಸೂಲಿ 12,87,900 ರು. ಚಾಲನಾ ರಹದಾರಿ ಪತ್ರವಿಲ್ಲದೆ ವಾಹನ ಓಡಿಸಿದ ಪ್ರಕರಣಗಳು, 9833, ದಂಡ ವಸೂಲಿ 30,64,700 ರು. ಮಿತಿಗಿಂತ ಹೆಚ್ಚಿನ ಭಾರ ಹೊತ್ತ ವಾಹನ ಪ್ರಕರಣಗಳ ಸಂಖ್ಯೆ, 126, ವಸೂಲಾದ ದಂಡ 38,500, ರು. ಪ್ರಯಾಣಿಕರನ್ನು ಅಪಾಯಮಟ್ಟದಲ್ಲಿ ಕರೆದುಕೊಂಡು ಹೋಗಿರುವ ಪ್ರಕರಣಗಳು, 820, ದಂಡ ವಸೂಲಿ 1,51,400 ರು. ಹೈ ಭೀಂ ದೀಪವಿಲ್ಲದೆ ಚಾಲನೆ ಮಾಡಿದ ಪ್ರಕರಣಗಳು 114, ದಂಡ ವಸೂಲಿ12,800 ರು. ವಾಹನಗಳ ಮೇಲ್ಚಾವಣೆ ಸಂಚಾರ, 168 ಪ್ರಕರಣಗಳು, ದಂಡ ವಸೂಲಿ 56,800 ರು. ಹೆಚ್ಚಿನ ಹೊಗೆ ಉಗುಳಿ ಪರಿಸರ ಮಾಲಿನ್ಯ ಪ್ರಕರಣ 245, ದಂಡ ವಸೂಲಿ 26,100 ರು. ಶಬ್ದ ಮಾಲಿನ್ಯ, ಧ್ವನಿವರ್ಧನೆಯ ನಿರ್ಬಂಧ ಉಲ್ಲಂಘನೆ ಪ್ರಕರಣ 104, ವಸೂಲಾದ ದಂಡ 15,300 ರು. ಆಟೋಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಪ್ರಕರಣಗಳು 8, ದಂಡ ವಸೂಲಿ 900 ರು. ಆಟೋರಿಕ್ಷಾ ಬಾಡಿಗೆ ತಿರಸ್ಕರಿಸಿದ ಪ್ರಕರಣಗಳ ಸಂಖ್ಯೆ 2, ವಸೂಲಾದ ದಂಡ 200 ರು. ಆಟೋರಿಕ್ಷಾದಲ್ಲಿ ನಿಗದಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಕರೆದೊಯ್ಯುವ ಪ್ರಕರಣಗಳು 57, ವಸೂಲಾದ ದಂಡ 5700 ರು. ವಾಹನ ಚಲಿಸುವಾಗ ಮೊಬೈಲ್ ಫೋನ್ ಬಳಕೆ 3861 ಪ್ರಕರಣಗಳು, ವಸೂಲಾದ ದಂಡ 5,04100 ರು. ಇತರೆ ಸಂಚಾರಿ ಉಲ್ಲಂಘನೆ ಪ್ರಕರಣಗಳು, 41,617, ದಂಡ ವಸೂಲಿ, 72,25,800 ರು.