ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿ ನಿಲಯಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ

Srinivasa Murthy VN
Updated On : 12 Feb 2014, 12:46 pm

ಪಾವಗಡ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೋಟ್ಯಂತರ ರು.ಗಳ ವೆಚ್ಚದಲ್ಲಿ ನಿರ್ಮಿಸಿದ್ದ ಪಟ್ಟಣದ ಎಸ್‌ಸಿ.ಎಸ್‌ಟಿ ಪ್ರೌಢಶಾಲಾ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ತಾ.ಸಮಾಜ ಕಲ್ಯಾಣಧಿಕಾರಿ ವೈ.ಆರ್. ಚೌದರಿ ವಿದ್ಯಾರ್ಥಿ ನಿಲಯದ ಸ್ಥಿತಿಗತಿಗಳನ್ನು ಪರೀಶಿಲಿಸಿದರು. ಭೂ ಸೇನಾ ನಿಗಮದ ವತಿಯಿಂದ ಸುಸಜ್ಜಿತ ಮತ್ತು ನೂತನವಾಗಿ ನಿರ್ಮಾಣಗೊಂಡ ಮಹಿಳಾ ವಿದ್ಯಾರ್ಥಿ ನಿಲಯದ ಬಗ್ಗೆ ಅವರು ಮೆಚ್ಚಿಗೆ ವ್ಯಕ್ತಪಡಿಸಿದ್ದು, ಕುಡಿಯುವ ನೀರು ಹಾಗೂ ಶೌಚಾಲಯ ಇತರೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕೂಡಲೇ ಕಲ್ಪಿಸಿ ಎಂದು ನಿಗಮದ ತಾ.ಅಧಿಕಾರಿ ಹನುಮಂತರಾಯಪ್ಪ ಅವರಿಗೆ ಸೂಚಿಸಿದರು.

ಪುರಸಭೆ ಸಾಮಾನ್ಯ ಸಭೆ
ಚಿಕ್ಕನಾಯಕನಹಳ್ಳಿ: ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ ಶೆಟ್ಟಿ ತಿಳಿಸಿದ್ದಾರೆ. ಫೆ.13ರಂದು ಬೆಳಿಗ್ಗೆ 10.00 ಗಂಟೆಗೆ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷರಾದ ಸಿ.ಆರ್. ಗೀತಾ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಕರೆದಿದ್ದು, ಪುರಸಭೆಯ ಎಲ್ಲಾ ಸದಸ್ಯರು ಸಭೆಗೆ ಹಾಜರಾಗಬೇಕಾಗಿ ಅವರು ಕೋರಿದ್ದಾರೆ.

ಇಂದು ಚಾಯ್ ಪೇ ಚರ್ಚಾ
ತುಮಕೂರು: ಇಲ್ಲಿನ ಭದ್ರಮ್ಮ ಸರ್ಕಲ್ ಹಿಂಭಾಗದಲ್ಲಿರುವ ಟೀ ಸ್ಟಾಲ್‌ನಲ್ಲಿ  ಫೆ. 12 ರಂದು ಸಂಜೆ 5 ಗಂಟೆಗೆ ಚಾಹ್ ಪೇ ಚರ್ಚಾ ಕಾರ್ಯಕ್ರಮ ಆಯೋಜಿಸಲಾಗಿದೆ. ಚಾಹ್ ಪೇ ಚರ್ಚಾ ಶೀರ್ಷಿಕೆಯಡಿ ಮೋದಿ ಅವರು 1 ಸಾವಿರ ಸ್ಥಳಗಳಲ್ಲಿ ಚಾಯ್ ವಾಲಾಗಳನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 12 ರ ಬುಧವಾರದಂದು ಬೆಳಗ್ಗೆ 8 ಗಂಟೆಗೆ ನಮೋ ತೇರು ಶಿರಾದಿಂದ ಪ್ರಾರಂಭವಾಗಲಿದೆ.

ಇಂಗ್ಲಿಷ್ ಕುರಿತ ವಿಶೇಷ ಉಪನ್ಯಾಸ
ಹುಳಿಯಾರು: ಇಲ್ಲಿನ ಬಿಎಂಎಸ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಆಂಗ್ಲಭಾಷೆ ಕುರಿತಂತೆ ಮಂಗಳವಾರದಂದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಚಿ.ನಾ.ಹಳ್ಳಿ ಕಾಲೇಜಿನ ಪ್ರೊ.ಪ್ರಸನ್ನಕುಮಾರ್ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ತಮ್ಮ ಉಪನ್ಯಾಸದಲ್ಲಿ ಪ್ರಸ್ತುತದಲ್ಲಿ ಇಂಗ್ಲಿಷ್ ಭಾಷೆಯ ಅನಿವಾರ್ಯತೆಯಿದ್ದು, ಅದನ್ನು ವ್ಯವಹಾರಿಕವಾಗಿ ಕಲಿಯಬೇಕಿದೆ ಎಂದರು. ಪ್ರಾಚಾರ್ಯ ಆರ್. ಮೂಗೇಶಪ್ಪ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಐಕ್ಯೂಎಸಿ ಮತ್ತು ನ್ಯಾಕ್ ಕುರಿತಂತೆ ವಿದ್ಯಾರ್ಥಿಗಳಿಗೆ ವಿವರ ತಿಳಿಸಿದರು. ಇಂಗ್ಲಿಷ್ ವಿಭಾಗದ ಶ್ರೀನಿವಾಸಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಉಪನ್ಯಾಸಕರಾದ ಅಶೋಕ್, ಹನುಮಂತಪ್ಪ, ಶಂಕರಲಿಂಗಯ್ಯ, ಸೈಯ್ಯದ್ ಇಬ್ರಾಹಿಂ, ವಿಶ್ವನಾಥ್, ವಿಜಿಯಮ್ಮ ಉಪಸ್ಥಿತರಿದ್ದ ಸಮಾರಂಭದಲ್ಲಿ ಚೈತ್ರ ನಿರೂಪಿಸಿ, ಪೂಜಾ ಪ್ರಾರ್ಥಿಸಿ, ನಳಿನ ಸ್ವಾಗತಿಸಿ, ಹೇಮಂತ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement