ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಯತ್ನ

Srinivasa Murthy VN
Updated On : 16 Feb 2014, 11:32 am

ಕನ್ನಡಪ್ರಭ ವಾರ್ತೆ,ತುಮಕೂರು, ಫೆ.16
ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿವ ಪೌರಕಾರ್ಮಿಕರನ್ನು ರಾಜ್ಯ ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಿಐಟಿಯು ನೇತೃತ್ವದಲ್ಲಿ ಪೌರಕಾರ್ಮಿಕರು ಡಿಸಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿ, ಬಂಧನಕ್ಕೊಳಗಾದರು.
ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಅಥವಾ ಕಾಯಂಗೊಳಿಸುವ ತನಕ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಘೋಷಣೆ ಮಾಡದ ರಾಜ್ಯ ಸರ್ಕಾರದ ಬಜೆಟ್ ಪೌರಕಾರ್ಮಿಕ ವಿರೋಧಿ ಎಂದು ಅರೋಪಿಸಿ, ಕರ್ನಾಟಕ ರಾಜ್ಯ ಮುನಿಸಿಪಲ್ ನೌಕರರ ಸಂಘ ಸಿಐಟಿಯು, ತುಮಕೂರು ಪೌರಕಾರ್ಮಿಕರ ಸಂಘ ಸಿಐಟಿಯು ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪೌರಕಾರ್ಮಿಕರನ್ನು ಪೊಲೀಸರು ಬಂಧಿಸಿದರು.
ಮುತ್ತಿಗೆಗೂ ಮುನ್ನ ಎರಡು ದಿನಗಳಿಂದ ಪೌರಕಾರ್ಮಿಕರು ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಧರಣಿಯನ್ನು ಬೆಂಬಲಿಸಿ ಪಿಯುಸಿಎಲ್ ಜಿಲ್ಲಾಧ್ಯಕ್ಷರಾದ ಪ್ರೊ.ಕೆ. ದೊರೈರಾಜು ಮಾತನಾಡಿದರು. ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಸಂದರ್ಭದಲ್ಲಿ ಪ್ರತಿಭಟನಕಾರರು ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆಯಿತು.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಈ ಹೋರಾಟದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್, ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ಖಜಾಂಚಿ ಕೆ.ಮಂಜುನಾಥ, ತುರುವೇಕೆರೆಯ ಯೋಗೀಶ್, ತಿಪಟೂರಿನ ಸೋಮಣ್ಣ, ಶಿವಣ್ಣ, ಮಧುಗಿರಿಯ ರವಿಕುಮಾರ್, ಕುಣಿಗಲ್‌ನ  ತ್ಯಾಗರಾಜು ಡ್ರೈವರ್ಸ್ ಯೂನಿಯನ್‌ನ ಕಲೀಂಮುಲ್ಲಾ, ವಾಟರ್ ಮ್ಯಾನ್ ಸಂಘದ ಕಾಂತರಾಜು ಪಾಲ್ಗೊಂಡಿದ್ದರು.
ಪೌರಕಾರ್ಮಿಕರ ಸಮಸ್ಯೆಗಳ ಇತ್ಯರ್ಥದ ಹಿನ್ನೆಲೆಯಲ್ಲಿ ಸಂಘವು ಬೆಂಗಳೂರಿನಲ್ಲಿ ಹೋರಾಟ  ಮುಂದುವರಿಸುವುದಾಗಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement