ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೀರಿನ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣ: ಶಾಸಕ ಸುಧಾಕರ್‌ಲಾಲ್ ಆತಂಕ

Srinivasa Murthy VN
Updated On : 16 Feb 2014, 11:31 am

ಕೊರಟಗೆರೆ: ಮುಂದಿನ ದಿನಗಳಲ್ಲಿ  ನೀರಿನ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಶಾಸಕ ಪಿ.ಆರ್. ಸುಧಾಕರಲಾಲ್ ಆತಂಕ ವ್ಯಕ್ತಪಡಿಸಿದರು.
ಅವರು ಪಟ್ಟಣದ ಗುರುಭವನದಲ್ಲಿ ಜಿ.ಪಂ. ಹಾಗೂ ಗಣಿ ಮತ್ತು ಭೂವಿಜ್ಣಾನ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತರ್ಜಲ ಸಂಪತ್ತು ಬಗ್ಗೆ ಜನ ಜಾಗೃತಿ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹುತೇಕ ಈಗಾಗಲೇ ನೀರಿನ ಸಮಸ್ಯೆ ದೊಡ್ಡದಾಗಿ ಬೆಳೆದಿದ್ದು ಅದನ್ನು ಕಾಪಾಡುವ ಹೊಣೆ ನಮ್ಮದಾಗಿದೆ ಎಂದರು.
ಈ ನಿಟ್ಟಿನಲ್ಲಿ ಸರ್ಕಾರಗಳು ಚೆಕ್ ಡ್ಯಾಂ, ಕೃಷಿಹೊಂಡ ಕೆರೆಗಳನ್ನು ಹೆಚ್ಚೆಚ್ಚು ನಿರ್ಮಾಣ ಮಾಡುವ ಜೊತೆಗೆ ಬಯಲು ಸೀಮೆಗೆ ನೇತ್ರಾವತಿ, ಹೇಮಾವತಿ, ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸಿ ನೀರಾವರಿ  ಪ್ರದೇಶವನ್ನಾಗಿ ಮಾಡಿ ಅಂತರ್ಜಲ  ವೃದ್ಧಿಸುವ ಕೆಲಸಕ್ಕೆ ಮುಂದಾಗಬೇಕಿದೆ ಆಗ ಮಾತ್ರ ಮುಂದಿನ ಪೀಳಿಗೆಗೆ ನೀರಿನ ಕಷ್ಟ ಎದುರಾಗುವುದಿಲ್ಲ ಎಂದು  ತಿಳಿಸಿದರು.
ಜಿ.ಪಂ.ಅಧ್ಯಕ್ಷೆ ಸಾಕಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ.ಸದಸ್ಯೆ ದಾಕ್ಷಾಯಿಣಿ ಮಾತನಾಡಿದರು.
ನಿವೃತ್ತ ವಿಜ್ಣಾನಿ ಶ್ರೀಕಾಂತ್ ಹಾಗೂ ಸಂಪನ್ಮೂಲ ವ್ಯಕ್ತಿ ನರಸಿಂಹಮೂರ್ತಿ ಅಂತರ್ಜಲ  ಮರು ಪೂರೈಕೆ ಬಗ್ಗೆ ಮಾಹಿತಿ ನೀಡಿದರು. ಜಲಾನಯನ ಅಧಿಕಾರಿ ಸೋಮಶೇಖರ್, ತಾ.ಪಂ.ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಸಂಗೀತಾ, ಕೃಷಿ ಅಧಿಕಾರಿಗಳಾದ ಕಲ್ಲೇಶ್ ಪ್ರಸಾದ್, ನೂರ್ ಆಜಾಮ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.       

ಕಾವ್ಯ ಕ್ಷಣದ ಸ್ಮಾರಕವಲ್ಲ: ಯಲ್ಲಪ್ಪ ಅಭಿಮತ
ತುಮಕೂರು: ಕಾವ್ಯ ಕ್ಷಣದ ಸ್ಮಾರಕವಲ್ಲ, ಅಲ್ಲದೆ ಕೇವಲ ವೈಯಕ್ತಿಕ ಭಾವನೆಗಳ ಬಿಡುಗಡೆಯ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಹೊತ್ತುಕೊಂಡೆ ಕಾವ್ಯ ಮುಂದೆ ಸಾಗಬೇಕು ಎಂದು ಪ್ರೊ. ಟಿ. ಯಲ್ಲಪ್ಪ ಅಭಿಪ್ರಾಯಪಟ್ಟರು.
ನಮ್ಮ ಯಾಂತ್ರಿಕ ಬದುಕಿಗೆ ಕಾವ್ಯವು ಚೈತನ್ಯ ನೀಡಬಲ್ಲದು. ಪ್ರಸ್ತುತ ವಿಷಮ ಪರಿಸ್ಥಿತಿಯಲ್ಲಿ ಕಾವ್ಯ ಒಂದೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಎಂದು ತಿಳಿಸಿದರು.
ಅವರು ಶಿರಾ ತಾಲೂಕು ಕಳ್ಳಂಬೆಳ್ಳದಲ್ಲಿ ತುಮಕೂರು ಯೂನಿಯನ್ ಕ್ರಿಶ್ಚಿಯನ್ ಕಾಲೇಜು, ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಆಹ್ವಾನಿತ ಯುವ ಕವಿಗಳ ಕವಿಗೋಷ್ಠಿಯನ್ನು ಕುರಿತು ಆಶಯ ನುಡಿಯನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ನಾಡಿನ ಖ್ಯಾತ ಕವಿಗಳು ಹಾಗೂ ಸಾಂಸ್ಕೃತಿಕ ಚಿಂತಕರೂ ಆದ ಸುಬ್ಬು ಹೊಲೆಯಾರ್ ಮಾತನಾಡಿ ಕಾವ್ಯವು ನಮ್ಮೊಳಗಿನ ಮನಸ್ಸನ್ನು ಜಾಗೃತವಾಗಿಸುತ್ತದೆ. ಕ್ರೀಡೆ, ಕಲೆಗಳಂತೆ ಸಾಹಿತ್ಯವು ನಮ್ಮ ಮನಸ್ಸನ್ನು ಪ್ರಬುದ್ಧಗೊಳಿಸಬಲ್ಲದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement