ಮಡಿವಾಳ ಜನಾಂಗದ ಅಭಿವೃದ್ಧಿಗೆ ಸಹಕರಿಸಿ
ಪಾವಗಡ: ಮಡಿವಾಳ ಮಾಚಿದೇವ ಜನಾಂಗ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ಎಸ್‌ಸಿ ಮೀಸಲಾತಿಗೆ ಸೇರಿಸುವ ಮೂಲಕ ಜನಾಂಗದ ಅಭಿವೃದ್ಧಿಗೆ ಸರ್ಕಾರ ಅದ್ಯತೆ ನೀಡಬೇಕೆಂದು ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ ಒತ್ತಾಯಿಸಿದರು.
ತಾಲೂಕು ಮಡಿವಾಳ ಮಾಚಿದೇವ ಸಂಘದ ವತಿಯಿಂದ ಪಟ್ಟಣದ ಗುರುಭವನದಲ್ಲಿ ಏರ್ಪಡಿಸಿದ್ದ ಜನಾಂಗದ ಬೃಹತ್ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಮಡಿವಾಳ ಸಮುದಾಯ ಸೌಲಭ್ಯಗಳಿಂದ ವಂಚಿತವಾಗಿದ್ದು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಘದ ಅಧ್ಯಕ್ಷ ತಿಪ್ಪಗಾನಹಳ್ಳಿ ಈಶ್ವರಪ್ಪ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕು. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದರು. ಜನಾಂಗದ ವಿವಿಧ ಬೇಡಿಕೆಗಳ ಕುರಿತು ಸಂಘದ ಖಜಾಂಚಿ ಟಿ.ಕೆ.ರಾಮಣ್ಣ ವಿವರಿಸಿದರು.
ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಜೆ.ಡಿ.ಬೆಳ್ಳಿತಟ್ಟೆ, ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ಕೇಶವ, ಜಿಪಂ ಮಾಜಿ ಉಪಾಧ್ಯಕ್ಷ ಮದ್ದುಮಡು ರಂಗಸಾಮಯ್ಯ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶಂಕರಪ್ಪ, ರಾಜ್ಯ ಸಂಘದ ಕಾರ್ಯದರ್ಶಿ ಪಿ.ಡಿ.ಲಕ್ಷ್ಮಿನರಸಿಂಹಯ್ಯ, ಜೆ.ಡಿ.ಗೋಪಾಲ ಮಾತನಾಡಿದರು.
ಸಮಾರಂಭದಲ್ಲಿ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ಪುಟ್ಟರಂಗಯ್ಯ, ಪಿ.ಎ.ಹನುಮಂತರಾಯಪ್ಪ ಶಿವಶಂಕರ್, ಪ್ರಾಂಶುಪಾಲ ನಾಗೇಂದ್ರಪ್ಪ,ಶ್ರೀರಾಮಪ್ಪ, ಎಚ್.ವೆಂಕಟೇಶ್‌ಕುಮಾರ್ ಇದ್ದರು. ಎಚ್.ವೆಂಕಟೇಶ್ ಕುಮಾರ್ ನಿರೂಪಿಸಿದರು, ಶಿಕ್ಷಕ ಈಶ್ವರಪ್ಪ ಸ್ವಾಗತಿಸಿದರು, ಶಿಕ್ಷಕ ಓಬಳಾಪುರ ರಾಮಾಂಜಿನೇಯ ವಂದಿಸಿದರು.
ಮಾಚಿದೇವ ಜನಾಂಗ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ಎಸ್‌ಸಿ ಮೀಸಲಾತಿಗೆ ಸೇರಿಸುವ ಮೂಲಕ ಜನಾಂಗದ ಅಭಿವೃದ್ಧಿಗೆ ಸರ್ಕಾರ ಅದ್ಯತೆ ನೀಡಬೇಕು
ನಂಜಪ್ಪ
ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ