ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲಿ: ಶಾಸಕ ಪಿ.ಆರ್. ಸುಧಾಕರ್ ಅಭಿಪ್ರಾಯ
ಕೊರಟಗೆರೆ: ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು. ಪೋಷಕರೊಂದಿಗೆ ಮಕ್ಕಳು ಇರಬೇಕು ಎಂದು ಶಾಸಕ ಪಿ.ಆರ್. ಸುಧಾಕರ್ ತಿಳಿಸಿದರು. ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ನಿವೃತ್ತಚ ನೌಕರರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಉಜ್ವಲ ಭವಿಶ್ಯಕ್ಕಾಗಿ ಶ್ರಮಿಸುವ ಪೋಷಕರನ್ನು ಬದುಕಿಗೊಂದು ದಾರಿ ಸಿಕ್ಕ ನಂತರ ಕಡೆಗಣಿಸಿ ವೃದ್ಧಾಶ್ರಮಕ್ಕೆ ಕಳುಹಿಸುವುದು ಖೇದಕರ ಎಂದರು. ಬೆಂಗಳೂರಿನ ಆಕ್ಸ್‌ಫರ್ಡ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಿ.ಆರ್ ಶಿವರಾಮಯ್ಯ, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್. ನಾಗರಾಜು, ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರುಳೀಧರ್ ಹಾಲಪ್ಪ, ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕ ಶಶಿಕಿರಣ್, ನರೇಂದ್ರಬಾಬು, ತಾಪಂ ಅಧ್ಯಕ್ಷ ರಾಜಮ್ಮ, ಸದಸ್ಯ ಎಲ್.ವಿ ಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷ ಎಸ್.ಕೆ ನಾಗರಾಜು, ಮುಖಂಡರಾದ ಹನುಮಂತಾಯಪ್ಪ, ಎಲ್. ರಾಜಣ್ಣ, ತಿಮ್ಮಪ್ಪ, ಗೋವಿಂದಸ್ವಾಮಿ, ಬಿ.ಜಿ ಹನುಮಂತರಾಯಪ್ಪ, ಮಲ್ಲೇಶಯ್ಯ, ಪರಮೇಶ್,ವೆಂಕಟೇಶ್ ಸೇರಿದಂತೆ ಇತರರು ಇದ್ದರು.