ಉಪ್ಪಾರ ಸಂಘದಿಂದ ಭಗೀರಥ ಜಯಂತಿ
ಹುಳಿಯಾರು: ತಾಲೂಕು ಉಪ್ಪಾರ ಸಂಘ ಹಾಗೂ ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ, ದೊಡ್ಡಎಣ್ಣೇಗೆರೆ ಉಪ್ಪಾರ ಸಮಾಜದ ವತಿಯಿಂದ ಸಮೀಪದ ದೊಡ್ಡಎಣ್ಣೇಗೆರೆ ಗೇಟ್ ವೃತ್ತದಲ್ಲಿ ಶನಿವಾರ ಭಗೀತಥ ಜಯಂತಿಯನ್ನು ನಡೆಸಲಾಯಿತು.
ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿಸ್ವಾಮೀಜಿ ಸಾನಿಧ್ಯದಲ್ಲಿ ಜಯಂತಿ ಕಾರ್ಯಕ್ರಮ ನಡೆಯಿತು. ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಪುಟ್ಟಣ್ಣಶೆಟ್ಟಿ ಅವರು ಉದ್ಘಾಟನೆ ನೆರೆವೇರಿಸಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ನಾಗಪ್ಪ ಭಗೀರಥ ಭಾವಚಿತ್ರ ಅನಾವರಣ ಮಾಡಿದರು. ತಾಲೂಕು ಉಪ್ಪಾರಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಪಿ.ಎ.ಸಿ.ಎಂ ಸದಸ್ಯರಾದ ಡಿ.ವಿ.ಮಂಜುನಾಥ್, ವಕೀಲರಾದ ವೆಂಕೋಬ, ತಾ.ಪಂ.ಉಪಾಧ್ಯಕ್ಷ ಜಯಣ್ಣ, ಗ್ರಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಗ್ರಾ.ಪಂ.ಸದಸ್ಯರಾದ ಬಸವರಾಜು, ಉಪ್ಪಿನಕಟ್ಟೆ ಚನ್ನಬಸಮ್ಮ ಶಂಕರಪ್ಪ, ಲಕ್ಷ್ಮೀದೇವಿ, ನಾಟಿವೈದ್ಯರಾದ ಪೂಜಾರಜ್ಜರ ನಾಗಪ್ಪ, ಸೊಮನಹಳ್ಳಿ ಕಲ್ಲೇಶ್ ಉಪಸ್ಥಿತರಿದ್ದ ಸಮಾರಂಭದಲ್ಲಿ ಲೋಕೇಶ್ ಸ್ವಾಗತಿಸಿ, ಚಂದ್ರಯ್ಯ ನಿರೂಪಿಸಿ, ನಾರಾಯಣಸ್ವಾಮಿ ವಂದಿಸಿದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಪುರಸ್ಕರಿಸಲಾಯಿತು. ಸಮಾರಂಭಕ್ಕೂ ಮುನ್ನಾ ಪೂರ್ಣಕುಂಭ ಮೆರವಣಿಗೆ ನಡೆಸಲಾಯಿತು.
ಟಿ.ಇ.ಟಿ ಅರ್ಹತೆ ಪಡೆಯುವುದು ಕಡ್ಡಾಯ
ಕುಣಿಗಲ್: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಹಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಟಿ.ಇ.ಟಿ ಪರೀಕ್ಷೆಗೆ ಹಾಜರಾಗಿ ಅರ್ಹತೆ ಪಡೆಯುವುದು ಕಡ್ಡಾಯವಾಗಿದೆ. 2014-15ನೇ ಸಾಲಿನ ಟಿ.ಇ.ಟಿ ಪರೀಕ್ಷೆ ಸಂಬಂಧ ಇದೇ ಜೂನ್ ಮಾಹೆಯ ಮೂರನೇ ತಾರೀಕಿನಂದು ಒಂದು ದಿನದ ಕಾರ್ಯಾಗಾರವನ್ನು ಪಟ್ಟಣದ ಬಿಇಒ ಕಚೇರಿ ಸಮೀಪ ಇರುವ ಸರ್ವ ಶಿಕ್ಷಣ ಅಭಿಯಾನದ ಕ್ಷೇತ್ರಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಟಿ.ಇ.ಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಅಗತ್ಯ ಮಾಹಿತಿ ಹಾಗೂ ಪೂರ್ವಭಾವಿ ತಿಳಿವಳಿಕೆಯನ್ನು ನೀಡಲಾಗುವುದರಿಂದ ಪರೀಕ್ಷೆಗೆ ಹಾಜರಾಗಲಿಚ್ಛಿಸುವ ವಿದ್ಯಾರ್ಥಿಗಳು, ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಬಿಇಒ ಸಿದ್ದಯ್ಯ ಮತ್ತು ಬಿಆರ್ಸಿ ಗುಲ್ಜಾರ್ ಅಹಮದ್ ಪ್ರಕಣೆಯಲ್ಲಿ ಮನವಿ ಮಾಡಿದ್ದಾರೆ.