ದೇಶದ ಅಭಿವೃದ್ಧಿಗೆ ನೀರು ಅನಿವಾರ್ಯ
ತುಮಕೂರು: ದೇಶದ ಅಭಿವೃದ್ಧಿಗೆ ನೀರು, ನೈರ್ಮಲ್ಯ ಅನಿವಾರ್ಯ ಎಂದು ನವ್ಯದಿಶ ಸಂಸ್ಥೆಯ ವಿ. ಯಂಜೇರಪ್ಪ ಅಭಿಪ್ರಾಯಪಟ್ಟರು.
ಅವರು ಊರ್ಡಿಗೆರೆ ಹೋಬಳಿಯ ಕೊಡಿಗೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ನೀರು ಮತ್ತು ನೈರ್ಮಲ್ಯ ವಿಷಯದಲ್ಲಿ ದೇಶ ಹಿನ್ನಡೆ ಅನುಭವಿಸುತ್ತಿದೆ. ಶುದ್ಧ ನೀರು ಜೀವ ಜಲ, ಅಶುದ್ಧ ನೀರು ಜೀವ ತೆಗೆಯುವ ಜಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಕೆ.ಎಚ್.ದಾಸಣ್ಣ ಅವರು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಶೌಚಾಲಯಗಳು ನಿರ್ಮಾಣವಾಗುವಂತೆ ಹಾಗೂ ಅವುಗಳ ಸದ್ಬಳಕೆ ಗ್ರಾ.ಪಂ. ಸದಸ್ಯರು ನಿಗಾ ವಹಿಸಬೇಕೆಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಕಾರ್ಮಿಕಾಧಿಕಾರಿ ತಿಮ್ಮೇಗೌಡ, ಎಚ್. ಗಂಗಣ್ಣ, ರಾಜಮ್ಮ, ಲಕ್ಷ್ಮಮ್ಮ, ಹೇಮಾದ್ರಿ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಪ್ರಶಿಕ್ಷಣಾರ್ಥಿ ಶಿವರಾಜ್ ಕೆ.ವಿ., ನವೀನ್ಕುಮಾರ್ ಜೆ., ಸಂತೋಷ್ ಕುಮಾರ್ ವೈ.ಸಿ, ಈರನಗೌಡ, ವಿನುತ ಬಿ., ನವ್ಯದಿಶ ಸಂಸ್ಥೆಯ ಮಧು,ಹುಚ್ಚಯ್ಯ, ಕೆ.ಟಿ. ರಾಜನ್, ಅಂಬುಜಾಕ್ಷಿ ಇದ್ದರು.