ಗೋಪಿನಾಥ್ ಮುಂಡೆಗೆ ಜಿಲ್ಲಾ ಬಿಜೆಪಿ ಶ್ರದ್ಧಾಂಜಲಿ
ತುಮಕೂರು: ರಸ್ತೆ ಅಪಘಾತದಲ್ಲಿ ನಿಧನರಾದ ಗೋಪಿನಾಥ್ ಮುಂಡೆ ಅವರಿಗೆ ಬಿಜೆಪಿ ತುಮಕೂರು ಜಿಲ್ಲಾ ಘಟಕ ಶ್ರದ್ಧಾಂಜಲಿ ಸಲ್ಲಿಸಿತು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಹಾಗೂ ಶಾಸಕ ಬಿ.ಸುರೇಶ್‌ಗೌಡ ವಹಿಸಿ ಮಾತನಾಡಿ, ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಾ, ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದರು ಎಂದರು.
ಮಾಜಿ ಶಾಸಕ ಬಿ.ಸಿ.ನಾಗೇಶ್, ಮಹಾರಾಷ್ಟ್ರದ ರಾಜ್ಯದಲ್ಲಿ ಎಬಿವಿಪಿ ಕಾರ್ಯಕರ್ತರಾಗಿ ತಮ್ಮ ಕಾರ್ಯ ಆರಂಭಿಸಿ, ವಿವಿಧ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ಜನಪರ ಹೋರಾಟಗಳನ್ನು ಮಾಡುತ್ತಾ, ಶಾಸಕರಾಗಿ, ಸಂಸದರಾಗಿ ಅತ್ಯಂತ ಜನಾನುರಾಗಿ, ಹಿಂದುಳಿದ ವರ್ಗದ ಪ್ರಭಾವಿ ನಾಯಕರಾಗಿದ್ದ ಗೋಪಿನಾಥ್ ಮುಂಡೆ ಜನಪ್ರಿಯ ವ್ಯಕ್ತಿಯಾಗಿದ್ದರು ಎಂದರು.
ಸಭೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಬಿ. ನಂದೀಶ್, ತುಮಕೂರು ನಗರಾಧ್ಯಕ್ಷ ಕೆ.ಪಿ. ಮಹೇಶ, ಮುಖಂಡರಾದ ಜ್ಯೋತಿ ಗಣೇಶ್, ರಾಮಾಂಜನಪ್ಪ, ಕೆ.ಎಸ್. ವಿಶ್ವನಾಥ್, ಕೊಪ್ಪಳ್ ನಾಗರಾಜ್, ತುಮಕೂರು ಮಹಾನಗರಪಾಲಿಕೆ ಸದಸ್ಯರಾದ ಡೆಲ್ಟಾ ರವಿಕುಮಾರ್, ವೆಂಕಟಪ್ಪ, ಮಂಜುಳಾ ನಿರಂಜನ್, ಇಂದ್ರಕುಮಾರ್, ಕರುಣಾರಾಧ್ಯ, ವೆಂಕಟೇಶ್, ನಗರಸಭಾ ಮಾಜಿ ಸದಸ್ಯರಾದ ಮುನಿಯಪ್ಪ, ಎಲ್. ನರಸಿಂಹನ್, ಡಿ.ಆರ್. ಬಸವರಾಜು, ತೇಜುಮಣಿ, ಪ್ರೇಮಲತಾ ಮುಂತಾದವರು ಉಪಸ್ಥಿತರಿದ್ದರು.