ಬಿಜೆಪಿಗೆ ಹ್ಯಾಟ್ರಿಕ್ ಗೆಲವು ಖಚಿತ: ನಾರಾಯಣಸ್ವಾಮಿ
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಜೂ.4
ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಎ.ಎಚ್.ಶಿವಯೋಗಿ ಸ್ವಾಮಿಯವರು ಹ್ಯಾಟ್ರಿಕ್ ಗೆಲವು ಸಾಧಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1971ರಿಂದ ಇಲ್ಲಿಯವರಗೆ ಒಮ್ಮೆ ಮಾತ್ರ ತಪ್ಪಿಹೋದ ಈ ಕ್ಷೇತ್ರ ಇದುವರೆಗೂ ಬಿಜೆಪಿಗೆ ಒಲಿದು ಬಂದಿದೆ. ಡಾ.ಎ.ಎಚ್. ಶಿವಯೋಗಿಸ್ವಾವು ಈಗ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಅವರ ಗೆಲವು ನಿರಾಯಾಸವಾಗಲಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೈಕ್ಷಣಿಕ ಸಮನ್ವಯ್ಕಕೆ ಹೆಚ್ಚು ಒತ್ತು ನೀಡಲಾಗಿತ್ತು. ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ, ಶಾಲಾ ಕಾಲೇಜುಗಳ ವ್ಯವಸ್ಥೆ ಬಲಪಡಿಸುವಿಕೆ, ನಿರುದ್ಯೋಗಿ ಯುವಕ-ಯುವತಿಯರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಉದ್ಯೋಗ ಮೇಳಗಳ ಆಯೋಜನೆ, ಯುವ ವಕೀಲರಿಗೆ 5000 ರು. ಪ್ರೋತ್ಸಾಹ ಧನ, ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ, 1650 ಜೆಓಸಿ ಶಿಕ್ಷಕರ ಕಾಯಮಾತಿ, 529 ಪ್ರೌಢಶಾಲಾ ಶಿಕ್ಷಕರ ಸಕ್ರಮ, ಪದವಿ ಮತ್ತು ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ಯುಜಿಸಿ ವೇತನ ಜಾರಿ ಮುಂತಾದ ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿತ್ತು. ಒಂದೇ ಅವಧಿಯಲ್ಲಿ ಐದು ಮತ್ತು ಆರು ಎರಡು ವೇತನ ಆಯೋಗಗಳನ್ನು ಜಾರಿಗೆ ತಂದ ದೇಶದ ಮೊದಲ ಸರ್ಕಾರ ನಮ್ಮದು ಎಂಬ ಹೆಗ್ಗಳಿಕೆಯಿಂದ ಹೇಳಿಕೊಳ್ಳ ಬಹುದಾಗಿದೆ ಎಂದರು.
ಅನುದಾನ: ಅನುದಾನಿತ ಶಾಲಾ ಶಿಕ್ಷಕರ ಕಾಲ್ಪನಿಕ ವೇತನ ಜಾರಿಯಲ್ಲಿ ಸರ್ಕಾರದೊಂದಿಗಿನ ಹೋರಾಟದಲ್ಲಿ ಡಾ.ಎ.ಎಚ್.ಶಿವಯೋಗಿಸ್ವಾವುಗಳು ಯಶಸ್ವಿಯಾದ ಕಾರಣ ಈ ವೇತನ ಜಾರಿಯಾಗಿ 280 ಕೋಟಿ ರು. ಅನುದಾನವನ್ನು ಆಯವ್ಯಯದಲ್ಲಿ ತೆಗೆದಿರಿಸಲಾಗಿದೆ. ಶಿಕ್ಷಕರ ಮತ್ತು ಸರ್ಕಾರಿ ನೌಕರರ ಹಿತಕ್ಕಾಗಿ ದಕ್ಷತೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರ್ವಹಿಸಿರುವ ಸಮರ್ಥ ನಾಯಕರಾದ ಶಿವಯೋಗಿಸ್ವಾವುಯವರು ಮತ್ತೊಮ್ಮೆ ಗೆಲವು ಸಾಧಿಸುವುದರ ಮೂಲಕ ಹ್ಯಾಟ್ರಿಕ್ ಜಯದಾಖಲಿಸಲಿದ್ದಾರೆ ಎಂದರು.
30ಲಕ್ಷ ಅನುದಾನ: ನನ್ನ ಈವೆರಗಿನ ಅವಧಿಯಲ್ಲಿ ತಾಲೂಕಿಗೆ 30 ಲಕ್ಷ ಅದಾನವನ್ನು ನೀಡಿದ್ದೇನೆ. ಮುಂಬರುವ ದಿನಗಳಲ್ಲೂ ಎಲ್ಲಾ ಶಾಲೆಗಳಿಗೂ ತಲಾ ಹತ್ತು ಡೆಸ್ಕ್ಗಳನ್ನು ನೀಡಬೇಕೆಂಬ ಯೋಜನೆಯಿದೆ ಎಂದರು.
ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ನಗರ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮುಂತಾದವರು ಭಾಗವಹಿಸಿದ್ದರು.