ಗ್ರಾಮದೇವತೆಗೆ ಬೆಳ್ಳಿ ಕಿರೀಟ
ತುಮಕೂರು: ತುಮಕೂರಿನ 5ನೇ ವಾರ್ಡ್ ವ್ಯಾಪ್ತಿಯ ಪಾಂಡುರಂಗ ನಗರದ ಎಮ್ಮೆಕೇರಿ ಸಮೀಪದ ಶ್ರೀ ಗ್ರಾಮದೇವತೆಗೆ ಶೇಷಾಚಲಂ ಕುಟುಂಬದವರು ಸುಮಾರು ಒಂದು ಕೆಜಿ 56 ಗ್ರಾಂ ತೂಕದ ರತ್ನ ಖಚಿತ ಬೆಳ್ಳಿ ಕಿರೀಟ ನೀಡುವ ಮೂಲಕ ದೇವಾಲಯದ ಅಭಿವೃದ್ಧಿಗೆ ನೆರವಾಗಿದ್ದಾರೆ. ಗ್ರಾಮದೇವತೆಗೆ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡುವ ಮೂಲಕ ಬೆಳ್ಳಿ ಕಿರೀಟವನ್ನು ಭಕ್ತರ ಸಮ್ಮುಖದಲ್ಲಿ ತೊಡಿಸಲಾಯಿತು. ಈ ಕಾಣಿಕೆ ಸ್ವೀಕರಿಸಿದ ಶ್ರೀ ಗ್ರಾಮದೇವತೆ ಅಭಿವೃದ್ಧಿ ಮಂಡಲಿ ವತಿಯಿಂದ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಶ್ರೀ ಗ್ರಾಮದೇವತೆ ಅಭಿವೃದ್ಧಿ ಮಂಡಲಿಯ ಕಾರ್ಯದರ್ಶಿ ಟಿ.ಬಿ. ಮಲ್ಲೇಶ್ ಮಾತನಾಡುತ್ತಾ, ಮುಂದಿನ ತಿಂಗಳು ಆಷಾಢ ಮಾಸ ಆರಂಭವಾಗುವ ಹಿನ್ನೆಲೆಯಲ್ಲಿ ಜುಲೈ ತಿಂಗಳಿನಲ್ಲಿ ಆಷಾಢ ಮಾಸದ ಗ್ರಾಮದೇವತಾ ಜಾತ್ರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಗ್ರಾಮದೇವತೆಗೆ ಭಕ್ತರು ಬೆಳ್ಳಿಕಿರೀಟವನ್ನು ದಾನವಾಗಿ ನೀಡಿದ್ದು, ಈ ದೇವಿಯ ಕಾಂತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ ಎಂದರು.