ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸನ್ಯಾಸಿಗಳ ಸಾಧನೆ, ಅಧ್ಯಯನಗಳಿಂದ ಯೋಗ್ಯತೆ ಅರಿವು: ಡಾ. ಶಿವಾನಂದಶ್ರೀ

Srinivasa Murthy VN
Updated On : 13 Jun 2014, 11:30 am

ಕೊರಟಗೆರೆ: ಇಂದು ಸನ್ಯಾಸಿಗಳನ್ನು ಎಲ್ಲರೂ ಅನುಮಾನದಿಂದ ನೋಡುವಂಥ ಸಂದರ್ಭ ಬಂದಿದೆ. ಆದರೆ ಸನ್ಯಾಸಿಗಳ ಸಾಧನೆ, ಅಧಿಯಯನಗಳು ಅವರ ಯೋಗ್ಯತೆಯನ್ನು ನಿರ್ಧರಿಸುತ್ತದೆ ಎಂದು ತುಮಕೂರು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಎಲೇರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಹನುಮಂತನಾಥಸ್ವಾಮೀಜಿಯವರ 32 ನೇ ಹುಟ್ಟುಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಸನ್ಯಾಸತ್ವ ಎಂಬುದು ಪ್ರವಾಹದ ವಿರುದ್ಧ ಈಜುವಂಥದ್ದು. ಇದನ್ನು ಸುಲಭವಾಗಿ ಈಜಬೇಕು ಎಂದರು.
ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠಗಳು ಕಷ್ಟ ಕಾರ್ಪಣ್ಯಗಳಿಂದ ನೊಂದ ಭಕ್ತನಿಗೆ ಸಾಂತ್ವನ ಹೇಳುವಂಥ ಧಾರ್ಮಿಕ ಕೇಂದ್ರಗಳಾಗಿವೆ. ಈ ಹಿನ್ನೆಲೆಯಲ್ಲಿ ಮನೆ-ಮಠಕ್ಕೆ ಅವಿನಾಭಾವ ಸಂಬಂಧವಿದೆ ಎಂದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹನುಮಂತನಾಥ ಸ್ವಾಮೀಜಿ, ಅಖಿಲ ಕುಂಚಿಟಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ, ಸಂಸ್ಥೆಯ ಗೌರವಾಧ್ಯಕ್ಷ ದೇವರಾಜಯ್ಯ ಮಾತನಾಡಿದರು. ಶಿವಗಂಗೆಯ ಜ್ಞಾನಾನಂದಪುರಿಸ್ವಾಮೀಜಿ, ಸೋಲೂರಿನ ಈಡಿಗ ಮಹಾಸಂಸ್ಥಾನ ಮಠದ ಆರ್ಯರೇಣುಕಾನಂದಪುರಿ,  ತಿಮ್ಮಪ್ಪ ಮಠದ ಬಸವಮಹಾಲಿಂಗ ಸ್ವಾಮೀಜಿ, ಹೊಳವನಹಳ್ಳಿಯ ಪುಟ್ಟೇಶ್ವರ ಸ್ವಾಮಿ ಮಠದ ಸೋಮಶೇಖರ ಸ್ವಾಮೀಜಿ, ಜಿ.ಪಂ ಸಿಇಓ ಕೆ.ಎನ್ ಗೋವಿಂದರಾಜು,  ತುಮಕೂರು ಲೀಡ್ ಬ್ಯಾಂಕ್‌ವ್ಯವಸ್ಥಾಪಕ ಕೆ.ವೈ ಜಯರಾಂ, ಮಾಜಿ ಶಾಸಕ ಸಿ. ವೀರಭದ್ರಯ್ಯ, ವಡ್ಡಗೆರೆ ವೀರನಾಗಮ್ಮ ದೇವಸ್ಥಾನದ ಅಧ್ಯಕ್ಷ ಎಂ.ಎನ್ ನಾಗಭೂಷಣ್,  ಜಿ.ಪಂ ಸದಸ್ಯರಾದ ಪ್ರೇಮಾ, ಟಿ.ಡಿ ಪ್ರಸನ್ನಕುಮಾರ್, ತಾ.ಪಂ ಉಪಾಧ್ಯಕ್ಷ ಸಂಗೀತಾ, ತಾಲೂಕು ಕಸಾಪ ಅಧ್ಯಕ್ಷ ಎಸ್.ಕೆ ನಾಗರಾಜು, ಬಿಇಓ ಐ.ಎಸ್ ಮಹೇಶ್, ಡಾ. ಕೆ. ನಾಗಣ್ಣ,  ಮುಖಂಡರುಗಳಾದ ಡಿ.ಸಿ ಗೋಪಿನಾಥ್, ಮಹಾಲಿಂಗಪ್ಪ, ಎಲ್. ರಾಜಣ್ಣ, ಪೋಸ್ಟ್ ವೀರಕ್ಯಾತಪ್ಪ, ರಂಗಲಕ್ಷ್ಮಿ ಸೇರಿದಂತೆ ಇತರರು ಭಾಗಹಿಸಿದ್ದರು. ತುಮಕೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಡಾ. ಜಿ. ಸವಿತಾ ಅವರಿಗೆ ರಾಜ್ಯ ಮಟ್ಟದ ಕುಂಚಶ್ರೀ ಪ್ರಶಸ್ತಿ ಹಾಗೂ ನಿವೃತ್ತ ಯೋಧರಿಗೆ ಪ್ರಶಸ್ತಿ ನೀಡಲಾಯಿತು. ರಾತ್ರಿ ಕುರುಕ್ಷೇತ್ರ ನಾಟಕ ಪ್ರದರ್ಶನವಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement