ಗ್ರಾಪಂ ಮೂಲಕ ರಕ್ತದಾನ ಅರಿವು ಮೂಡಿಸಿ
ತುಮಕೂರು: ಗ್ರಾಮ ಪಂಚಾಯತ್ ಮೂಲಕ ಪ್ರತಿ ಗ್ರಾಮಗಳಲ್ಲಿ ರಕ್ತದಾನದ ಬಗ್ಗೆ ಅರಿವು ಮತ್ತು ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತದಾನದ ಮಹತ್ವವನ್ನು ಸಾರ್ವಜನಿಕರಲ್ಲಿ ಮೂಡಿಸಬೇಕಾಗಿದೆ ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕುಣಿಗಲ್‌ನ ಸಂತ ಗ್ರಿಗೋರಿಯಸ್ ದಯಾ ಭವನ ಹಾಗೂ ಮದರ್ ತೆರೆಸಾ ಚಿಲ್ಡ್ರನ್ ಫೌಂಡೇಶನ್ ಆಶ್ರಯದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂತ ಗ್ರಿಗೋರಿಯಸ್ ದಯಾ ಭವನ ನಡೆಸುತ್ತಿರುವ ಕಾರ್ಯಕ್ರಮಗಳು ಇತರೆ ಸಂಘ ಸಂಸ್ಥೆಗಳಿಗೆ ಮಾದರಿ. ಸಂಸ್ಥೆ ನಡೆಸುತ್ತಿರುವ ಆಸ್ಪತ್ರೆಗಳಲ್ಲಿ ಎಚ್‌ಐವಿ ಸೋಂಕಿತರಿಗೆ ಕ್ಷಯ ರೋಗ, ಕಿಡ್ನಿ ಸಮಸ್ಯೆಗಳಂತಹ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಮದರ್ ತೆರೆಸಾ ಚಿಲ್ಡ್ರನ್ ಫೌಂಡೇಷನ್ ಅಧ್ಯಕ್ಷ ಡಾ. ಸಾಜನ್ ಜಾರ್ಜ್, ಜಿಪಂ ಪ್ರಭಾರ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಜಿಪಂ ಸಿಇಒ ಗೋವಿಂದರಾಜು, ಶಾಸಕ ಡಾ.ರಫೀಕ್ ಅಹಮದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚನ್ನಮಲ್ಲಯ್ಯ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಈಶ್ವರಯ್ಯ, ಡಾ. ಸನತಕುಮಾರ್, ಅರುಣ್, ಬೆಳ್ಳಿ ಲೋಕೇಶ್ ಇದ್ದರು.