6ರಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂರ್ತಿಯೊಡನೆ ಸಂವಾದ
ತುಮಕೂರು: ಕನ್ನಡದ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಪುರಸ್ಕೃತ ಪ್ರೊ.ಯು.ಆರ್. ಅನಂತಮೂರ್ತಿಯವರ ವಿಶೇಷ ಉಪನ್ಯಾಸ ಮತ್ತು ಮುಕ್ತ ಸಂವಾದವನ್ನು ತುಮಕೂರು ವಿಶ್ವವವಿದ್ಯಾನಿಲಯದಲ್ಲಿ ಮಾ. 6 ರಂದು ಬೆಳಗ್ಗೆ 10-30 ಕ್ಕೆ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು ಸಂವಾದ ನಿರ್ವಹಣೆ ಮಾಡಲಿದ್ದಾರೆ. ತುಮಕೂರು ವಿವಿಯ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ ಈ ಸಂವಾದವನ್ನು ಏರ್ಪಡಿಸಿದ್ದು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ತುಮಕೂರು ವಿವಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ನಿತ್ಯಾನಂದ ಬಿ. ಶೆಟ್ಟಿ ತಿಳಿಸಿದ್ದಾರೆ.
ಇಂದು ರಾಷ್ಚ್ರೀಯ ವಿಜ್ಞಾನ ದಿನಾಚರಣೆ
ತಿಪಟೂರು: ನಗರದ ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜು ಹಾಗೂ ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಮಧ್ಯಾಹ್ನ 1.30ಕ್ಕೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ಅಂತರ ಕಾಲೇಜು ರಸಪ್ರಶ್ನೆ, ಪ್ರಬಂಧ, ಚಿತ್ರಕಲೆ ಹಾಗೂ ವಿಜ್ಞಾನ ಉಪನ್ಯಾಸ ಸ್ಪರ್ಧೆಗಳನ್ನು ವೈಜ್ಞಾನಿಕ ಮನೋಭಾವನದ ಬೆಳವಣಿಗೆಗೆ ಪ್ರೋತ್ಸಾಹ ಎಂಬ ವಿಷಯದ ಮೇಲೆ ನಡೆಸಲಾಗುವುದು.