ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗ್ರಾಮಾಭಿವೃದ್ಧಿ ಯೋಜನೆ ದಾರದೀಪ: ಸಂಸದ ಬಸವರಾಜು

Srinivasa Murthy VN
Updated On : 4 Mar 2014, 12:53 pm

ಮಧುಗಿರಿ: ಗ್ರಾಮೀಣ ಕೃಷಿ  ಸಂಸ್ಕೃತಿ  ಮರು ಹುಟ್ಟು ಪಡೆದು ಮಹಿಳೆಯರು, ಕೃಷಿಕರು ಹಾಗೂ ಕೂಲಿ ಕಾರ್ಮಿಕರು ಸ್ವಾಭಿಮಾನದ ಜೀವನ ನಡೆಸಲಿ ಎಂಬ ದೂರ ದೃಷ್ಟಿಯಿಂದ ಧರ್ಮಸ್ಥಳದ  ಡಾ.ವೀರೇಂದ್ರ ಹೆಗ್ಗಡೆ ಅವರು ರೂಪಿಸಿರುವ ಗ್ರಾಮಾಭಿವೃದ್ಧಿ ಯೋಜನೆ ದಾರದೀಪ ಎಂದು ಸಂಸದ ಜಿ.ಎಸ್.ಬಸವರಾಜು ನುಡಿದರು.
ಶನಿವಾರ ಮಧುಗಿರಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಡಿ.ವಿ.ಹಳ್ಳಿ ವಲಯ, ಸ್ಥಳೀಯ ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಗಳ  ಹಾಗೂ  ದಾನಿಗಳ ಸಹಕಾರದೊಂದಿಗೆ ಮಧುಗಿರಿ ಸಮೀಪ ಶಿರಾ ರಸ್ತೆಯ  ಕುಡೂತಿ  ಶ್ರೀವೇಣುಗಾಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕೃಷಿ ಉತ್ಸವ ಸಮಾರಂಭ  ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಮಾದರಿ: ಹಿಂದೆ ಹಳ್ಳಿಗರ ಬದುಕು ದೇಶಕ್ಕೆ ಮಾದರಿಯಗಿತ್ತು.ಹೊಸ ನಾಗರಿಕತೆ, ನಗರೀಕರಣ ಹಾಗೂ ಸರ್ಕಾರಗಳ ತಪ್ಪು  ಲೋಪ ದೋಷದಿಂದಾಗಿ  ಅಭಿವೃದ್ಧಿ ವಂಚಿತವಾಗಿದ್ದೇವೆ. ಆಧುನಿಕತೆಯ ಭರಾಟೆಯಲ್ಲಿ   ಹಳ್ಳಿಗಳು ತನ್ನ ಮೂಲ ನೆಲೆ  ಕಳೆದು ಕೊಳ್ಳುತ್ತಿರುವುದು ವಿಷಾದನೀಯ, ಇದನ್ನೆಲ್ಲಾ ಮನಗಂಡ ವೀರೇಂದ್ರ ಹೆಗ್ಗಡೆ ಅವರು ಹಳ್ಳಿಗರಿಗೆ ಆರ್ಥಿಕ ನೆರವು ನೀಡುವ ಮೂಲಕ ಕೃಷಿ ಸಂಸ್ಕೃತಿ ಮತ್ತೆ ಮರು ಜನ್ಮ ಪಡೆಯಲು ಅವಕಾಶ ಕಲ್ಪಿಸಿರುವುದನ್ನು ಸದುಪಯೋಗಪಡಿಸಿಕೊಂಡು ಹೊಸ ಬದುಕಿಗೆ ಅಡಿ ಇಡಬೇಕು ಎಂದರು. ಇದಲ್ಲಿದೆ ಗುಬ್ಬಿ ಹತ್ತಿರ  8.ಸಾವಿರ ಕೋಟಿ ರು.ವೆಚ್ಚದಲ್ಲಿ ಎಚ್‌ಎಲ್ ಹೆಲಿಕಾಪ್ಟಕ್ ಕಾರ್ಖಾನೆ ಸ್ಥಾಪಸಲಿದ್ದು ಇಲ್ಲೂ  ಕೂಡ ಉದ್ಯೋಗ ದೊರೆಯಲಿವೆ ಎಂದರು.       ವಸ್ತುಪ್ರದರ್ಶನ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಂ.ಆರ್. ಹುಲಿನಾಯ್ಕರ್ ಮಾತನಾಡಿದರು.
ತುಮುಲ್ ಅಧ್ಯಕ್ಷ ಕೊಡಂವಾಡಿ ಚಂದ್ರಶೇಖರ್ ಮಾತನಾಡಿದರು. ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಸುನಂದಸಿದ್ದಪ್ಪ, ಸಿದ್ದಾಪುರ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಮ್ಮ, ಎಪಿಎಂಸಿ  ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸಮೂರ್ತಿ, ಜಿಲ್ಲಾ ನಿರ್ದೇಶಕ ಪುರುಷೋತ್ತಮ್, ಸಂಪನ್ಮೂಲ ವ್ಯಕ್ತಿ ಡಾ.ಎಂ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement