ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಪ್ತಿ ಮಾಡಲು ಬಂದವರನ್ನು ಕಂಬಕ್ಕೆ ಕಟ್ಟಿ ಬಡಿಯಿರಿ: ಕೋಡಿಹಳ್ಳಿ ಚಂದ್ರಶೇಖರ್

Srinivasa Murthy VN
Updated On : 4 Mar 2014, 12:53 pm

ಚಿಕ್ಕನಾಯಕನಹಳ್ಳಿ: ಸಾಲವಸೂಲಾತಿ ನೆಪದಲ್ಲಿ ರೈತರ ಮನೆ ಜಪ್ತಿ ಮಾಡಲು ಬರುವ ಬ್ಯಾಂಕ್ ಅಧಿಕಾರಿಗಳು ಮತ್ತು ಖಾಸಗಿ ಸಿಬ್ಬಂದಿಗಳನ್ನು ಕಂಬಕ್ಕೆ ಕಟ್ಟಿ ಪ್ರಾಣಹಾನಿ ಮಾಡದಂತೆ ಬಡಿಯಿರಿ ಎಂದು ರಾಜ್ಯ ರೈತಸಂಘದ ಅಧ್ಯಕ್ಷರಾದ ಕೋಡೀಹಳ್ಳಿ ಚಂದ್ರಶೇಖರ್ ರೈತರಿಗೆ ಕರೆನೀಡಿದರು.
ಸೋಮವಾರ ಅವರು ಪಟ್ಟಣದಲ್ಲಿ ತಾಲೂಕು ರೈತಸಂಘ ಮತ್ತು ಹಸಿರು ಸೇನೆ ಏರ್ಪಡಿಸಿದ್ದ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಜಪ್ತಿ ವಿಷಯಕ್ಕೆ ಸಂಬಂಧಿಸಿದಂತೆ  ರಾಜ್ಯ ಉಚ್ಚನ್ಯಾಯಾಲಯ
ರೈತರ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಜಪ್ತಿ ಮಾಡಕೂಡದೆಂದು ನ್ಯಾ.ಮಳೀಮಠ್ ಅವರು 1982ರಲ್ಲೇ ತಡೆಯಾಜ್ಞೆ ನೀಡಿದ್ದರೂ, ಸದರಿ ತಡೆಯಾಜ್ಞೆ ಇನ್ನು ತೆರವಾಗಿಲ್ಲ.
ಆದರೆ ಬ್ಯಾಂಕ್ ಅಧಿಕಾರಿಗಳು ಖಾಸಗಿ ಪುಂಡುಪೋಕರಿಗಳಿಂದ  ಜಫ್ತಿ ಮಾಡಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ. ಯಾವ ರೈತರು ತಾವು ಪಡೆದ ಸಾಲಮನ್ನಾ ಮಾಡಿ ಎಂದು ಕೇಳಿರಲಿಲ್ಲ. ಆದರೆ ರಾಜಕಾರಣಿಗಳು ತಮ್ಮ ಓಟಿಗಾಗಿ ಸಾಲಮನ್ನಾ ಮಾಡುವ ಮೂಲಕ ರೈತರನ್ನು ದಿಕ್ಕುತಪ್ಪಿಸಿದರು.  ಸರ್ಕಾರ ನೀಡುವ ಸಾಲವೆಂಬ ಹಣಕಾಸು ವ್ಯವಹಾರ ರೈತರಿಗೆ ಕೃಷಿ ಉತ್ಪತ್ತಿ ಹೆಚ್ಚಳಕ್ಕಾಗಿ ನೀಡುತ್ತಿರುವ ಪ್ರೋತ್ಸಾಹ ಧನವಾಗಿದ್ದು, ಇದನ್ನು ಸಾಲವೆಂದು ಬ್ಯಾಂಕುಗಳು ಪರಿವರ್ತಿಸಿ ರೈತರ ಶೋಷಣೆಗಿಳಿದಿವೆ. ಆದ್ದರಿಂದ  ಸರ್ಕಾರ ಸಾಲಮನ್ನಾ ವಿಚಾರದಲ್ಲಿ ವೈಜ್ಞಾನಿಕ ಕಾರಣ ನೀಡುತ್ತಿಲ್ಲ.
ಅರೆಪಾವು ಮಜ್ಜಿಗೆ: ಸರ್ಕಾರ ಆಯವ್ಯಯದಲ್ಲಿ ಆನೆ ಹೊಟ್ಟೆಗೆ ಅರೆಪಾವು ಮಜ್ಜಿಗೆ ಎಂಬಂತೆ ಪುಡಿಗಾಸನ್ನು ಕೃಷಿಗಾಗಿ ನೀಡುತ್ತಿವೆ. ಅದು ರೈತನಿಗೆ ನೇರವಾಗಿ ಸಿಗದಂತೆ ಮಾಡಿದ್ದಾರೆ. ರಸಗೊಬ್ಬರ, ಕೃಷಿಯಂತ್ರೋಪಕರಣಗಳ ಖರೀದಿ ನೆಪವೊಡ್ಡಿ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಸಹಾಯಧನವೆಂಬ ಕಳ್ಳದಾರಿ ಮಾಡಿಕೊಂಡಿದ್ದಾರೆ. ಈ ಮೂಲಕ ಅಧಿಕಾರಿಗಳು ತಮ್ಮ ಕಿಸೆತುಂಬಿಕೊಳ್ಳುವ ಕಾಯಕದಲ್ಲಿ ನಿರತರಾಗಿದ್ದಾರೆ.ದೇಶಕ್ಕೆ ಅನ್ನ ನೀಡುವ ರೈತನನ್ನು ನಾಗರಿಕರಂತೆ ಕಾಣದಿದ್ದರೆ ರೈತ ಸಿಡಿಯ ಬೇಕಾಗುತ್ತದೆ. ರೈತರ ಮನೆಯ ಜಫ್ತಿಗೆ ಬರುವ ಬ್ಯಾಂಕ್ ಅಧಿಕಾರಿಗಳನ್ನು  ಕಂಬಕ್ಕೆ ಕಟ್ಟಿ. ಪೊಲೀಸರಿಗೆ ಹೆದರಬೇಡಿ. ರೈತರು ಕಳ್ಳರಲ್ಲ, ಮೊದಲು ರೈತನ ಎಲ್ಲಾ ಸಾಲಮನ್ನಾ ಮಾಡಿ. ನಂತರ ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವುದಲ್ಲದೆ, ರೈತನ ಕೃಷಿ ಆದಾಯ ಖಾತ್ರಿ  ಮಾನದಂಡ ನಿರ್ಧರಿಸಿ ಎಂದರು.   
 ತಾಲೂಕು ಕನ್ನಡ ಸಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ರವಿಕುಮಾರ್, ಜಿಲ್ಲಾ ರೈತಸಂಘದ ಅಧ್ಯಕ್ಷ ಬಿ.ಎಸ್. ದೇವರಾಜ್, ಸತೀಶ್ ಕೆಂಕೆರೆ, ಬೆಂಚ್ ದ್ಯಾಮೇಗೌಡ, ಸಿದ್ದವೀರಪ್ಪ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement