ರೈತರಿಗಿಂತ ಲಾಭ ವರ್ತಕನಿಗೇ: ಶಾಸಕ
ಗುಬ್ಬಿ: ರೈತರಿಗಿಂತ ಹೆಚ್ಚಿಗೆ ಲಾಭ ವರ್ತಕನಿಗೆ ಆಗುತ್ತಿದೆ. ರೈತ ಎಷ್ಪೇ ಬೆಳೆ ಬೆಳೆದರೂ ಅವನ ಕಷ್ಟ ತೀರುತ್ತಿಲ್ಲ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ಅವರು ತಾಲೂಕಿನ ಚೇಳೂರು ಹೋಬಳಿಯ ಹೊಸಕೆರೆಯಲ್ಲಿ ನಡೆಸಿದ ಶ್ರೀ ಕ್ಷೇತ್ರ ಧರ್ವಸ್ಥಳ ಗ್ರಾಮಭಿವೃದ್ಧಿ ಯೋಜನೆ, ಹಾಲು ಒಕ್ಕೂಟ ತುಮಕೂರು, ಕೃಷಿ ಇಲಾಖೆ, ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳು, ತಾಲೂಕು ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಘಗಳು ಹಾಗೂ ದಾನಿಗಳ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೀರಿನ ಬಗ್ಗೆ ರಾಜಕೀಯ ಮಾಡಬಾರದು ಎಂದರು.
ಈ ಭಾಗಕ್ಕೆ ನೀರು ಬೇಕೆಂದು ಈ ಭಾಗದ ರೈತರು ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಈಗ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನೀರಾವರಿ ಸಚಿವರು ಈ ಭಾಗಕ್ಕೆ ನೀರು ಕೊಡಲು ಒಪ್ಪಿದ್ದಾರೆ ಎಂದರು.
ಸಾನಿಧ್ಯವಹಿಸಿ ಮಾತನಾಡಿದ ಮಂಡ್ಯದ ಶ್ರೀಕ್ಷೇತ್ರ ಬೇಬಿ ಮಠದ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಇಡೀ ಪ್ರಪಂಚದಲ್ಲಿ ಭಾರತ ಸಂಸ್ಕೃತಿಯನ್ನು ಹೊಂದಿರುವ ದೇಶ. ಇಡಿ ಪ್ರಪಂಚಕ್ಕೆ ಸಾಕಾಗುವಷ್ಟು ಅನ್ನಬೆಳೆಯುವ ಸಾರ್ಮಥ್ಯ ಹೊಂದಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ನಿರ್ದೇಶಕ ಗಂಗಾಧರ್ ರೈ, ಜಿ.ಪಂ.ಸದಸ್ಯ
ಚಂದ್ರಶೇಖರಬಾಬು, ಗುರುರೇಣಾಕರಾಧ್ಯ, ಕೊಂಡವಾಡಿ ಚಂದ್ರಶೇಖರ್, ಕೆ.ಎನ್.ಬಾಲಕೃಷ್ಣ, ಚಿಕ್ಕಮ್ಮ,ದಿಲೀಪ್, ಶಾಂತಮ್ಮ, ಪ್ರವೀಣ್‌ಕುಮಾರ್ ಹಾಗೂ ವಿವಿಧ ಇಲಾಖೆಯ ಆಧಿಕಾರಿಗಳು, ಗುಬ್ಬಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪ್ರಮುಖರು ಭಾಗವಹಿಸಿದ್ದರು.