ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿವೇಶನಕ್ಕೆ ಹಂದಿಜೋಗರ ಮನವಿ

Srinivasa Murthy VN
Updated On : 5 Mar 2014, 12:35 pm

ಗುಬ್ಬಿ: ಪಟ್ಟಣದ ಪೊಲೀಸ್ ಠಾಣೆ ಹಿಂಭಾಗದಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿರುವ ಹಂದಿಜೋಗರು ಅಥವಾ ಯಳವರಿಗೆ ಸೂಕ್ತ ನಿವೇಶನಗಳನ್ನು ನೀಡುವಂತೆ ಒತ್ತಾಯಿಸಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬೇರೆ ಕಡೆಯಿಂದ ವಲಸೆ ಬಂದು ಕಳೆದ 30 ವರ್ಷಗಳಿಂದಲೂ 40 ಕ್ಕೂ ಹೆಚ್ಚು ಕುಟುಂಬಗಳು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದು ಈ ಪ್ರದೇಶ ಕೊಳಚೆ ಪ್ರದೇಶವಾಗಿದ್ದು, ಹಂದಿ ಸಾಕಣೆ ಮತ್ತು ಭಿಕ್ಷಾಟನೆಯಿಂದ ಬದುಕು ಸಾಗಿಸುತ್ತಿದ್ದೇವೆ. ನಮಗೆ ನೆಮ್ಮದಿಯಿಂದ ವಾಸಿಸಲು ಪಟ್ಟಣ ಪಂಚಾಯ್ತಿಯಿಂದ ಸೂಕ್ತ ನಿವೇಶನ್ನ ನೀಡುವಂತೆ ಮುಖಂಡ ಮಾರಯ್ಯ ಮನವಿ ಮಾಡಿದರು. ನಾವೆಲ್ಲರೂ ಆಧಾರ್‌ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಪಡಿತರ ಚೀಟಿಯನ್ನು ಹೊಂದಿದ್ದು ನಮಗೆ ವಾಸಿಸಲು ಸೂಕ್ತ ಸ್ಥಳಾವಕಾಶ ಇಲ್ಲವಾಗಿದೆ. ಆದ್ದರಿಂದ ಪಟ್ಟಣ ಪಂಚಾಯ್ತಿವತಿಯಿಂದ ಸೂಕ್ತ ನಿವೇಶನಗಳನ್ನು ನೀಡುವಂತೆ ಮನವಿ ಸಲ್ಲಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದುರ್ಬಲರು, ದೀನದಲಿತರಿಗೆ ಹಾಗೂ ನಿರ್ವಸತಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ ಆದರೂ ನಾವು ಕಳೆದ 30 ವರ್ಷಗಳಿಂದಲೂ ವಾಸಿಸುತ್ತಿದ್ದೇವೆ. ಆದರೆ ಈವರೆಗೂ ಯಾವುದೇ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.

ಹೋರಾಟದಿಂದ ಬಡ್ತಿ ಶಿಕ್ಷಕರ ಸಮಸ್ಯೆ ಪರಿಹಾರ ಸಾಧ್ಯ
ತುಮಕೂರು:
ಬಡ್ತಿ ಶಿಕ್ಷಕರ ಸಮಸ್ಯೆಗಳ ಪರಿಹಾರ ಹೋರಾಟದಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಬಡ್ತಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ಬಿ. ಯಲ್ಲಪ್ಪ ತಿಳಿಸಿದರು.
ಅವರು ಕೆ.ಆರ್.ಜಿ.ಎಂ.ಎಸ್. ಶಾಲಾ ಆವರಣದಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬಡ್ತಿ ಹೊಂದಿದ ಶಿಕ್ಷಕರ ಕಾಲಮಿತಿ ವೇತನ ಬಡ್ತಿ, ಸೇವಾ ಹಿರಿತನ, ವರ್ಗಾವಣೆಯಲ್ಲಿ ಪ್ರಾಥಮಿಕ ಸೇವೆಯ ಪರಿಗಣನೆ, ಮುಖ್ಯ ಶಿಕ್ಷಕರ ಬಡ್ತಿಯಲ್ಲಿ ಶೇ. 50 ಮೀಸಲಾತಿ ಇತ್ಯಾದಿ ನ್ಯಾಯಯುತ ಬೇಡಿಕೆಗಳ ಈಡೇರಿಕೆ ಹೋರಾಟದಿಂದ ಮಾತ್ರ ಸಾಧ್ಯ. ಅದಕ್ಕಾಗಿ ನಾವು ಸಂಘಟಿತರಾಗಬೇಕೆಂದರು. ಅಧ್ಯಕ್ಷತೆಯನ್ನು ಜಿಲ್ಲಾ ಶಾಖೆಯ ಅಧ್ಯಕ್ಷ ಡಿ.ಎಸ್. ಶಿವಸ್ವಾಮಿ ವಹಿಸಿ ಮಾತನಾಡಿ ಹೋರಾಟದ ರೂಪುರೇಷೆಗಳ ಬಗ್ಗೆ ತಿಳಿಸಿದರು. ಸಮಾರಂಭದಲ್ಲಿ ನಿವೃತ್ತ ಬಡ್ತಿ ಶಿಕ್ಷಕರು ಹಾಗೂ ಗೌರವಾಧ್ಯಕ್ಷ ಎಂ. ಶಿವಣ್ಣ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಕುಂದೂರು ಅಶೋಕ್, ರಾಜ್ಯ ಸಂಘದ ಉಪಾಧ್ಯಕ್ಷ ಆರ್. ಬೀರೇಂದ್ರ, ಉಮೇಶ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement